‘ಮೊಮ್ಮಗಳು ನಿತ್ಯ ಮೋದಿ ಜಪ ಮಾಡ್ತಾಳೆ, ಪಿಎಂ ಫೋಟೋಗೆ ಸಿಹಿ ನೀಡ್ತಾಳೆ’; ಸುನೀಲ್ ಶೆಟ್ಟಿ
ನಟ ಸುನೀಲ್ ಶೆಟ್ಟಿ ತಮ್ಮ ಮೊಮ್ಮಗಳು ಇವಾರಾ ವಿಪುಲ್ ರಾಹುಲ್ ಕುರಿತು ಮನಮುಟ್ಟುವ ವಿಷಯ ಹಂಚಿಕೊಂಡಿದ್ದಾರೆ. 15 ತಿಂಗಳ ಇವಾರಾ ಪ್ರತಿದಿನ ಬೆಳಗ್ಗೆ ಎದ್ದು ಪ್ರಧಾನಿ ಮೋದಿ ಅವರ ಫೋಟೋಗೆ ಸಿಹಿ ಅರ್ಪಿಸುತ್ತಾಳೆ. ಯಾರು ಹೇಳಿಕೊಡದಿದ್ದರೂ ಮಗು ತನ್ನಷ್ಟಕ್ಕೆ ತಾನೇ ಈ ರೂಢಿ ಬೆಳೆಸಿಕೊಂಡಿರುವುದು ಸುನೀಲ್ ಶೆಟ್ಟಿ ಅವರಿಗೆ ಆಶ್ಚರ್ಯ ಮತ್ತು ಸಂತೋಷ ತಂದಿದೆ.

ನಟ ಸುನೀಲ್ ಶೆಟ್ಟಿ ಅವರು (Suniel Shetty) ನಟನೆಯ ಜೊತೆಗೆ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ. ಕೌಟುಂಬಿಕ ವಿಷಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡುತ್ತಾರೆ. ಈಗ ಮಗಳು ಆಥಿಯಾ ಹಾಗೂ ಅಳಿಯ ರಾಹುಲ್ ದಂಪತಿಗೆ ಜನಿಸಿರೋ ಮಗಳ ಬಗ್ಗೆ ಅವರು ಮಾತನಾಡಿದ್ದಾರೆ. ತಮ್ಮ ಮೊಮ್ಮಗಳು ನಿತ್ಯ ಏನು ಮಾಡುತ್ತಾಳೆ ಎಂಬುದನ್ನು ಸುನೀಲ್ ಶೆಟ್ಟಿ ವಿವರಿಸಿದ್ದಾರೆ.
ಸುನೀಲ್ ಶೆಟ್ಟಿ ಮೊಮ್ಮಗಳು ಇವಾರಾ ವಿಪುಲ ರಾಹುಲ್ಗೆ ಈಗ 15 ತಿಂಗಳು. ‘ನನ್ನ ಮೊಮ್ಮಗಳಿಗೆ 15 ವರ್ಷ. ಪ್ರಧಾನಿ ಮೋದಿ ಅವರ ಬಗ್ಗೆ ದಾದಿ ಒಬ್ಬರು ಏರ್‌ಪೋರ್ಟ್‌ನಲ್ಲಿ ಹೇಳಿದ್ದರು, ಫೋಟೋ ತೋರಿಸಿದ್ದರು. ಅಂದಿನಿಂದ ಆ ಮಗು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಪ್ರಧಾನಿ ಮೋದಿ ಅವರ ಫೋಟೋಗೆ ಸಿಹಿಯನ್ನು ಅರ್ಪಿಸುತ್ತಿದೆ’ ಎಂದು ಸುನೀಲ್ ಶೆಟ್ಟಿ ವಿವರಿಸಿದ್ದಾರೆ.
‘ನಾನಾಗಲೀ ಅಥವಾ ಮಗುವಿನ ಪೋಷಕರಾಗಲಿ ಹೀಗೆ ಮಾಡಲು ಹೇಳಿಕೊಟ್ಟಿಲ್ಲ. ಮಗು ತನ್ನಷ್ಟಕ್ಕೆ ತಾನೇ ಪ್ರತಿದಿನ ಬೆಳಗ್ಗೆ ಸಾಯಿಬಾಬಾ ಪುಸ್ತಕವನ್ನು ತೆರೆಯುತ್ತದೆ. ಆ ಪುಸ್ತಕದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕೂಡ ಇದೆ. ಮಗು ಆ ಫೋಟೋ ನೋಡಿ ‘ಮೋದಿ ಜಿ, ಮೋದಿ ಜಿ’ ಎಂದು ಕರೆಯುತ್ತದೆ. ನಂತರ ಮನೆಯಲ್ಲಿರುವ ಗಣಪತಿ ಮೂರ್ತಿಯ ಬಳಿ ಇರುವ ಸಿಹಿಯನ್ನು ತಂದು ಮೋದಿ ಫೋಟೋಗೆ ಕೊಡುತ್ತದೆ. ಮಗು ಪ್ರತಿ ದಿನ ಹೀಗೆ ಮಾಡುತ್ತಿರುವುದನ್ನು ನೋಡಿದರೆ ಮೋದಿ ಅವರಲ್ಲಿ ಏನೋ ಒಂದು ಅದ್ಭುತವಾದ ಮ್ಯಾಜಿಕ್ ಇದೆ ಎಂದು ನನಗೆ ಅನಿಸುತ್ತದೆ’ ಎಂದು ನಟ ಹೇಳಿದ್ದಾರೆ. ತಾವು ಯಾವುದೇ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಒಬ್ಬ ಶ್ರೇಷ್ಠ ನಾಯಕನ ಬಗ್ಗೆ ಮಾತನಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ನಟ ಸುನೀಲ್ ಶೆಟ್ಟಿ ಅವರು ತಮ್ಮ ದಿನಚರಿಯ ಬಗ್ಗೆಯೂ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅವರು ಪ್ರತಿದಿನ ಬೆಳಗ್ಗೆ 5:30 ರಿಂದ 7 ಗಂಟೆಯವರೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ನಂತರ ಮನೆಗೆ ಬಂದು ಸ್ನಾನ ಮುಗಿಸಿ ಮೊಮ್ಮಗಳೊಂದಿಗೆ ಸಮಯ ಕಳೆಯುತ್ತಾರೆ. ಈ ಸಮಯ ತಮ್ಮ ಜೀವನದ ಅತ್ಯಂತ ಸಂತೋಷದ ಮತ್ತು ತೃಪ್ತಿಯ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಂಭಾವನೆ ಪಡೆಯದೇ ತುಳು ಸಿನಿಮಾದಲ್ಲಿ ನಟಿಸಿದ ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ ಉದ್ಯಮದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಸುನೀಲ್ ಶೆಟ್ಟಿ ನಟನೆಯ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಜೂನ್ 26ರಂದು ತೆರೆಗೆ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




