‘ಸೂಪರ್​ ಸ್ಟಾರ್​’ ಕೃಷ್ಣ ಪ್ರತಿಮೆ ಅನಾವರಣ ಮಾಡಿದ ಕಮಲ್​ ಹಾಸನ್; ಧನ್ಯವಾದ ತಿಳಿಸಿದ ಮಹೇಶ್​ ಬಾಬು

|

Updated on: Nov 10, 2023 | 4:08 PM

Actor Krishna Statue: ಕೃಷ್ಣ ಅವರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಸ್ವತಃ ಮಹೇಶ್​ ಬಾಬು ಅವರು ಗೈರಾಗಿದ್ದರು. ‘ಗುಂಟೂರು ಖಾರಂ’ ಸಿನಿಮಾದ ಚಿತ್ರೀಕರಣದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಆ ಕಾರಣದಿಂದ ಅವರು ತಂದೆಯ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಿ ಹಾಕಲು ಸಾಧ್ಯವಾಗಿಲ್ಲ.

‘ಸೂಪರ್​ ಸ್ಟಾರ್​’ ಕೃಷ್ಣ ಪ್ರತಿಮೆ ಅನಾವರಣ ಮಾಡಿದ ಕಮಲ್​ ಹಾಸನ್; ಧನ್ಯವಾದ ತಿಳಿಸಿದ ಮಹೇಶ್​ ಬಾಬು
ಕೃಷ್ಣ ಪ್ರತಿಮೆ ಅನಾವರಣ ಮಾಡಿದ ಕಮಲ್​ ಹಾಸನ್
Follow us on

ತೆಲುಗು ಚಿತ್ರರಂಗಕ್ಕೆ ಮಹೇಶ್​ ಬಾಬು ಅವರ ತಂದೆ ಕೃಷ್ಣ (Superstar Krishna) ಅವರು ನೀಡಿದ ಕೊಡುಗೆ ಅಪಾರ. ಅಭಿಮಾನಿಗಳಿಂದ ಪ್ರೀತಿಯಿಂದ ‘ಸೂಪರ್​ ಸ್ಟಾರ್​’ ಎಂದು ಬಿರುದು ಪಡೆದ ಅವರು ಹಲವು ಬಗೆಯ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದರು. ಕಳೆದ ವರ್ಷ ಅವರು ಹೃದಯಾಘಾತದಿಂದ ನಿಧನರಾದರು. ಈಗ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಜಯವಾಡದಲ್ಲಿ ನಿರ್ಮಾಣ ಆಗಿರುವ ಈ ಪ್ರತಿಮೆಯನ್ನು ತಮಿಳಿನ ಖ್ಯಾತ ನಟ ಕಮಲ್​ ಹಾಸನ್ (Kamal Haasan)​ ಅವರು ಅನಾವರಣ ಮಾಡಿದ್ದಾರೆ. ಈ ಮೂಲಕ ಅವರು ಗೌರವ ಸಲ್ಲಿಸಿದ್ದಾರೆ. ಕಮಲ್​ ಹಾಸನ್​ ಅವರಿಗೆ ಮಹೇಶ್​ ಬಾಬು (Mahesh Babu) ಧನ್ಯವಾದ ತಿಳಿಸಿದ್ದಾರೆ. ಪ್ರತಿಮೆ ಅನಾವರಣದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಚಿತ್ರರಂಗದಲ್ಲಿ ಕಮಲ್​ ಹಾಸನ್​ ಅವರು ಬ್ಯುಸಿ ಆಗಿದ್ದಾರೆ. ‘ಇಂಡಿಯನ್​ 2’, ‘ಥಗ್​ ಲೈಫ್​’, ‘ಕಲ್ಕಿ 2898 ಎಡಿ’ ಸಿನಿಮಾದ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ. ಅಷ್ಟೆಲ್ಲ ಬ್ಯುಸಿ ಆಗಿದ್ದರೂ ಕೂಡ ಅವರು ಕೃಷ್ಣ ಮೇಲಿನ ಗೌರವಕ್ಕಾಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ. ಅಭಿಮಾನಿಗಳೇ ಸೇರಿ ಈ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಕಮಲ್​ ಹಾಸನ್​ಗೂ ಅಭಿಮಾನಿಗಳೇ ಆಹ್ವಾನ ನೀಡಿದ್ದಾರೆ. ಫ್ಯಾನ್ಸ್​ ನೀಡಿದ ಆಹ್ವಾನವನ್ನು ಸ್ವೀಕರಿಸಿ, ಕಮಲ್​ ಹಾಸನ್​ ಅವರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ.

ಕೃಷ್ಣ ಅವರ ಪ್ರತಿಮೆ ಅನಾವರಣದ ಸಮಯದಲ್ಲಿ ಯುವ ನಾಯಕ ದೇವಿನೇನಿ ಅವಿನಾಶ್​ ಕೂಡ ಭಾಗಿ ಆಗಿದ್ದರು. ಅವರಿಗೂ ಮಹೇಶ್​ ಬಾಬು ಧನ್ಯವಾದ ಅರ್ಪಿಸಿದ್ದಾರೆ. ‘ವಿಜಯವಾಡಲ್ಲಿ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣ ಮಾಡಿದಕ್ಕೆ ಕಮಲ್​ ಹಾಸನ್​ ಸರ್​ ಮತ್ತು ದೇವಿನೇನಿ ಅವಿನಾಶ್​ ಅವರಿಗೆ ಧನ್ಯವಾದಗಳು. ಅವರು ನಮ್ಮ ತಂದೆಯ ಪ್ರತಿಮೆ ಅನಾವರಣ ಮಾಡಿದ್ದು ನಮಗೆ ಹೆಮ್ಮೆ ತಂದಿದೆ. ಇದನ್ನು ಸಾಧ್ಯವಾಗಿಸಿದ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಮಹೇಶ್​ ಬಾಬು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಸಿನಿಮಾ ನನ್ನ ರಕ್ತದಲ್ಲಿದೆ’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ

ಅಂದಹಾಗೆ, ಈ ಸಮಾರಂಭಕ್ಕೆ ಸ್ವತಃ ಮಹೇಶ್​ ಬಾಬು ಅವರು ಗೈರಾಗಿದ್ದರು. ‘ಗುಂಟೂರು ಖಾರಂ’ ಸಿನಿಮಾದ ಚಿತ್ರೀಕರಣದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಆ ಕಾರಣದಿಂದ ಅವರು ತಂದೆಯ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಜರಿ ಹಾಕಲು ಸಾಧ್ಯವಾಗಿಲ್ಲ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ಕೃಷ್ಣ ಅವರು ನಟಿಸಿದ್ದರು. ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಸಕ್ರಿಯರಾಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.