ಬೆಂಗಾಲಿ ಹಾಡನ್ನು ರಿಮೇಕ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ಎಆರ್ ರೆಹಮಾನ್
‘ಪಿಪ್ಪಾ’ ಸಿನಿಮಾ ಇಂದು (ನವೆಂಬರ್ 10) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಿದೆ. ಈ ಚಿತ್ರವನ್ನು ರಾಜ ಕೃಷ್ಣ ಮೆನನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇತ್ತೀಚೆಗೆ ಹಾಡುಗಳನ್ನು ರಿಮೇಕ್ ಮಾಡುವ ಟ್ರೆಂಡ್ ಜೋರಾಗಿದೆ. ಇವಗಳ ಪೈಕಿ ಕೆಲವು ವಿವಾದ ಸೃಷ್ಟಿ ಮಾಡಿದ್ದಿದೆ. ಈಗ ಇಶಾನ್ ಖಟ್ಟರ್, ಮೃಣಾಲ್ ಠಾಕೂರ್ (Mrunal Thakur) ಹಾಗೂ ಪ್ರಿಯಾಂಶು ನಟನೆಯ ‘ಪಿಪ್ಪಾ’ ಸಿನಿಮಾದ ಅವರ ‘ಕರಾ ಓಯಿ ಲೋಹ್ ಕಪತ್’ ಹಾಡು ಸುದ್ದಿ ಆಗುತ್ತಿದೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೆಹಮಾನ್ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ.
‘ಪಿಪ್ಪಾ’ ಸಿನಿಮಾ ಇಂದು (ನವೆಂಬರ್ 10) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಿದೆ. ಈ ಚಿತ್ರವನ್ನು ರಾಜ ಕೃಷ್ಣ ಮೆನನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ‘ಕರಾ ಓಯಿ ಲೋಹ್ ಕಪತ್’ ಹಾಡು ಚರ್ಚೆ ಆಗುತ್ತಿದೆ. ಈ ಹಾಡಿಗೆ ತಮ್ಮದೇ ಶೈಲಿಯಲ್ಲಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ರೆಹಮಾನ್. ಇದನ್ನು ಅನೇಕರು ಟೀಕಿಸಿದ್ದಾರೆ. ಹಾಡಿನ ಉದ್ದೇಶವೇ ಹಾಳಾಗಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ವಿರೋಧ ಏಕೆ?
ಎಆರ್ ರೆಹಮಾನ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಎರಡು ದಿನಗಳ ಹಿಂದೆ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಬಂಗಾಳದ ಜನರ ಭಾವನೆಗಳ ಜೊತೆ ರೆಹಮಾನ್ ಆಟವಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಗೆ ಬಳಕೆ ಆಗುತ್ತಿದ್ದ ಪ್ರಭಾವಿ ಹಾಡು ಇದು. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಫೇವರಿಟ್ ಸಾಂಗ್ ಇದಾಗಿತ್ತು. ವರ್ಷ ಕಳೆದಂತೆ ಅನೇಕರ ಸಂಗೀತ ಸಂಯೋಜಕರು ಈ ಹಾಡನ್ನು ತಮ್ಮದೇ ವರ್ಷನ್ನಲ್ಲಿ ಕಂಪೋಸ್ ಮಾಡಿದ್ದರು. ಈಗ ರೆಹಮಾನ್ ಕಂಪೋಸ್ ಮಾಡಿರೋ ಹೊಸ ಸಾಂಗ್ ಸಾರ ಕಳೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಮ್ಯೂಸಿಕ್ ಪ್ರೋಗ್ರಾಂ ವಿವಾದ
ಕೆಲ ತಿಂಗಳ ಹಿಂದೆ ರೆಹಮಾನ್ ಅವರು ವಿವಾದ ಒಂದಕ್ಕೆ ಗುರಿಯಾಗಿದ್ದರು. ಚೆನ್ನೈನ ಹೊರ ಭಾಗದಲ್ಲಿ ಸ್ಟೇಜ್ ಪ್ರೋಗ್ರಾಂ ನೀಡಿದ್ದರು. ಇದಕ್ಕೆ ಸಿಕ್ಕಾಪಟ್ಟೆ ಜನರು ಬಂದಿದ್ದರು. ಟಿಕೆಟ್ ಇದ್ದ ಹೊರತಾಗಿಯೂ ಅನೇಕರನ್ನು ಒಳಗೆ ಬಿಟ್ಟಿರಲಿಲ್ಲ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆ ಬಳಿಕ ರೆಹಮಾನ್ ಅವರು ಕ್ಷಮೆ ಕೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




