
ತಮಿಳಿನ ಸ್ಟಾರ್ ನಟ ಸೂರ್ಯ ಈಗಾಗಲೇ ಒಂದೇ ವರ್ಷದಲ್ಲಿ ಎರಡು ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಅವರ ನಟನೆಯ ‘ಕರುಪ್ಪು’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ಎರಡೂ ಸಿನಿಮಾಗಳು ಇದೇ ವರ್ಷ ರಿಲೀಸ್ ಆಗಿ ದೊಡ್ಡ ಹಿಟ್ ಆಗಿವೆ. ಇದೀಗ ಅವರ ನಟನೆಯ ಮೂರನೇ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಆದರೆ ಈ ಸಿನಿಮಾಕ್ಕೆ ತಮಿಳಿನ ಮತ್ತೊಬ್ಬ ಸ್ಟಾರ್ ನಟ ಧನುಶ್ ಅವರ ಬಹು ನಿರೀಕ್ಷಿತ ಸಿನಿಮಾ ಎದುರಾಗಿತ್ತು, ಆದರೆ ಧನುಶ್ ಅವರು ತಮ್ಮ ಸಿನಿಮಾದ ರಿಲೀಸ್ ಅನ್ನು ಮುಂದೂಡಿದ್ದು, ಇದೇ ಕಾರಣಕ್ಕೆ ಸೂರ್ಯ, ಧನುಶ್ಗೆ ಧನ್ಯವಾದ ಹೇಳಿದ್ದಾರೆ.
ಸೂರ್ಯ ‘ಸೀನ್’ ಹೆಸರಿನ ಆಕ್ಷನ್-ಕಾಮಿಡಿ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಅವರ ಈ ಹೊಸ ಸಿನಿಮಾ ನವೆಂಬರ್ 6 ಕ್ಕೆ ರಿಲೀಸ್ ಆಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ನಟ ಧನುಷ್, ಮಮ್ಮುಟಿ ಮತ್ತು ಸಾಯಿ ಪಲ್ಲವಿ ನಟನೆ ಮಾಡಿರುವ ‘ಓಂ’ ಸಿನಿಮಾ ರಿಲೀಸ್ ಆಗಲಿತ್ತು. ಆದರೆ ಅವರೊಂದಿಗೆ ಬಾಕ್ಸ್ ಆಫೀಸ್ ಮುಖಾಮುಖಿಯನ್ನು ತಪ್ಪಿಸಿದ್ದಕ್ಕಾಗಿ ಸೂರ್ಯ ಅವರು ಧನುಷ್‌ಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ‘ಸೀನ್’ ಸಿನಿಮಾದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೂರ್ಯ, ತಮ್ಮ ಮುಂಬರುವ ‘ಓಮ್: ಚಾಪ್ಟರ್ 1’ (OM: Chapter 1) ಚಿತ್ರದ ಬಿಡುಗಡೆ ವೇಳಾಪಟ್ಟಿಯನ್ನು ಬದಲಾಯಿಸಿಕೊಂಡು ತಮ್ಮ ಚಿತ್ರದೊಂದಿಗೆ ಘರ್ಷಣೆ ಆಗುವುದನ್ನು ತಪ್ಪಿಸಿದ್ದಕ್ಕಾಗಿ ಧನುಷ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಧನುಶ್ ನಟನೆಯ ‘ಓಂ’ ಸಿನಿಮಾ ‘ಜೈಲರ್ 2’ ಜೊತೆಗೆ ರಿಲೀಸ್ ಆಗಲಿತ್ತು. ಆದರೆ ರಜನೀಕಾಂತ್ ಅವರ ಮೇಲಿನ ಗೌರವದ ಕಾರಣಕ್ಕಾಗಿ ಅವರು ತಮ್ಮ ಸಿನಿಮಾದ ರಿಲೀಸ್ ದಿನಾಂಕವನ್ನು ಬದಲಾವಣೆ ಮಾಡಿಕೊಂಡರು. ಬಳಿಕ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಆದರೆ ಈಗ ಸೂರ್ಯ ನಟನೆಯ ‘ಸೀನ್’ ಸಿನಿಮಾದ ಕಾರಣದಿಂದಾಗಿ ಮತ್ತೊಮ್ಮೆ ‘ಓಂ’ ಸಿನಿಮಾದ ರಿಲೀಸ್ ಅನ್ನು ಮುಂದೂಡಿದ್ದಾರೆ.
ಇದನ್ನೂ ಓದಿ:‘ಸೂರ್ಯ’ ಚಿತ್ರದ ಟೀಸರ್ ವಿರುದ್ಧ ವೈದ್ಯರ ಆಕ್ರೋಶ, ದೆಹಲಿ ಹೈಕೋರ್ಟ್‌ನಿಂದ ಸಿಬಿಎಫ್‌ಸಿಗೆ ನೋಟಿಸ್
‘ಓಂ’ ಸಿನಿಮಾ ರಕ್ತ ಚಂದನ ಕಳ್ಳಸಾಗಣೆ ಕುರಿತಾದ ಕತೆ ಹೊಂದಿರುವ ಸಿನಿಮಾ ಆಗಿದೆ. ಸಿನಿಮಾನಲ್ಲಿ ಸಾಯಿ ಪಲ್ಲವಿ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಮಮ್ಮುಟಿ ಸಹ ಇದ್ದಾರೆ. ಇನ್ನು ‘ಸೀನ್’ ಸಿನಿಮಾ ಅನ್ನು ಮಲಯಾಳಂ ನಿರ್ದೇಶಕ ಜೀತು ಮಾಧವನ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು ‘ರೋಮಾಂಚಂ’ ಮತ್ತು ‘ಆವೇಶಂ’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಸೀನ್’ ಸಿನಿಮಾನಲ್ಲಿ ಸೂರ್ಯಗೆ ಎದುರಾಗಿ ಮಲಯಾಳಂ ನಟ ನಸ್ಲಿನ್ ಖಳನಾಗಿ ನಟಿಸಿರುವುದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ