ಲೋಕೇಶ್ ಕನಗರಾಜ್ ವಿರುದ್ಧ ನಟ ಸೂರ್ಯ ಮತ್ತೆ ಅಸಮಾಧಾನ? ವೇದಿಕೆಯಲ್ಲಿ ಓಪನ್ ಹೇಳಿಕೆ
ನಟ ಸೂರ್ಯ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ನಡುವಿನ ಬಾಂಧವ್ಯದ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಬಹುನಿರೀಕ್ಷಿತ 'ರೋಲೆಕ್ಸ್' ಸಿನಿಮಾ ವಿಳಂಬಕ್ಕೆ ನಿರ್ದೇಶಕರೇ ಕಾರಣ ಎಂದು ಸೂರ್ಯ ಪರೋಕ್ಷವಾಗಿ ಹೇಳಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಇಬ್ಬರ ನಡುವಿನ ಅಸಮಾಧಾನದ ವದಂತಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ.

ಮುಖ್ಯಾಂಶಗಳು
- ಲೋಕೇಶ್ ಕನಕರಾಜ್ ವಿರುದ್ಧ ನಟ ಸೂರ್ಯ ಪರೋಕ್ಷ ಅಸಮಾಧಾನ
- 'ರೋಲೆಕ್ಸ್' ವಿಳಂಬಕ್ಕೆ ಯಾರು ಕಾರಣ?
- ಅಲ್ಲು ಅರ್ಜುನ್ ಸಿನಿಮಾ ಮುಗಿದ ಬಳಿಕವಷ್ಟೇ ಆಕ್ಷನ್
ತಮಿಳು ನಟ ಸೂರ್ಯ ಹಾಗೂ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಡುವಿನ ಬಾಂಧವ್ಯದ ಕುರಿತು ಮತ್ತೊಮ್ಮೆ ಚರ್ಚೆಗಳು ಆರಂಭವಾಗಿವೆ. ಇವರಿಬ್ಬರ ಬಹುನಿರೀಕ್ಷಿತ ಸಿನಿಮಾಗಳ ವಿಳಂಬಕ್ಕೆ ನಿರ್ದೇಶಕರೇ ಕಾರಣ ಎಂಬಂತೆ ಸೂರ್ಯ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಈ ಮಾತುಗಳು ಕಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿವೆ. ಸೂರ್ಯ ಅವರ ಹೇಳಿಕೆಯಿಂದಾಗಿ ಅಭಿಮಾನಿಗಳಲ್ಲಿ ಇವರಿಬ್ಬರ ಕಾಂಬಿನೇಷನ್ ಕುರಿತು ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಲೋಕೇಶ್ ಅವರ ‘ಸಿನಿಮ್ಯಾಟಿಕ್ ಯೂನಿವರ್ಸ್’ ಭಾಗವಾಗಿರುವ ‘ಕೈದಿ 2’ ಹಾಗೂ ‘ರೋಲೆಕ್ಸ್’ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸೂರ್ಯ ಅಭಿನಯದ ‘ರೋಲೆಕ್ಸ್’ ಪಾತ್ರದ ಮೇಲೆ ಸಿದ್ಧವಾಗಲಿರುವ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳಿವೆ. ಆದರೆ ನಿರ್ದೇಶಕ ಲೋಕೇಶ್ ಕನಕರಾಜ್ ತಮ್ಮ ಇತರ ಸಿನಿಮಾಗಳ ಕೆಲಸಗಳಲ್ಲಿ ಬ್ಯಸಿಯಾಗಿದ್ದಾರೆ. ಈ ಕಾರಣದಿಂದಾಗಿ ಸೂರ್ಯ ಮತ್ತು ಕಾರ್ತಿ ಸಿನಿಮಾಗಳು ವಿಳಂಬವಾಗುತ್ತಿವೆ ಎನ್ನಲಾಗಿದೆ.
🔥 THE ONE & ONLY ROLEX! 😈💥
Suriya’s electrifying words about ROLEX at the #Scene Telugu Pre-Release Event! 🔥 🥵💣
ROLEX IS AN EMOTION! 🦁🔥
#Suriya #Rolex #Scene #LokeshKanagaraj #LCU https://t.co/5t9CV67xZb
— Janya Digital Media (@janyamedia1) November 2, 2026
ಇದೀಗ ನಟ ಸೂರ್ಯ ಮತ್ತೊಮ್ಮೆ ಈ ವಿಳಂಬಕ್ಕೆ ಲೋಕೇಶ್ ಅವರೇ ಕಾರಣ ಎಂದು ಪರೋಕ್ಷವಾಗಿ ಬೆಟ್ಟು ಮಾಡಿದ್ದಾರೆ. ‘ಸೀನ್’ ಸಿನಿಮಾದ ಈವೆಂಟ್ನಲ್ಲಿ ಸೂರ್ಯ ಮಾತನಾಡುವಾಗ ‘ರೋಲೆಕ್ಸ್’ ಸಿನಿಮಾ ಬಗ್ಗೆ ಕೂಗು ಕೇಳಿಬಂತು. ಆಗ ಸೂರ್ಯ ಅವರು, ‘ನನಗೆ ಕರೆ ಮಾಡುವಂತೆ ಲೋಕೇಶ್ಗೆ ಹೇಳಿ’ ಎಂದಿದ್ದಾರೆ. ಈ ಹೇಳಿಕೆಗಳಿಂದಾಗಿ ರೋಲೆಕ್ಸ್ ಸಿನಿಮಾ ಮುಂದೂಡಲ್ಪಟ್ಟಿದ್ದಕ್ಕೆ ಸೂರ್ಯ ಇನ್ನೂ ಅಸಮಾಧಾನಗೊಂಡಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಅಲ್ಲು ಅರ್ಜುನ್ ಸಿನಿಮಾ ಪೂರ್ಣಗೊಳ್ಳುವವರೆಗೆ ಅಭಿಮಾನಿಗಳು ‘ರೋಲೆಕ್ಸ್’ ಮತ್ತು ‘ಕೈದಿ 2’ ಸಿನಿಮಾಗಳಿಗಾಗಿ ಕಾಯುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ‘ಸೂರ್ಯ’ ಚಿತ್ರದ ಟೀಸರ್ ವಿರುದ್ಧ ವೈದ್ಯರ ಆಕ್ರೋಶ, ದೆಹಲಿ ಹೈಕೋರ್ಟ್‌ನಿಂದ ಸಿಬಿಎಫ್‌ಸಿಗೆ ನೋಟಿಸ್
ಮತ್ತೊಂದೆಡೆ ಲೋಕೇಶ್ ಕನಗರಾಜ್ ಅವರು ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ. ಅಲ್ಲು ಅರ್ಜುನ್ ಜೊತೆಗಿನ ಮುಂಬರುವ ಸಿನಿಮಾವನ್ನು ಪೂರ್ಣಗೊಳಿಸಿದ ನಂತರ ಖಂಡಿತವಾಗಿಯೂ ‘ಕೈದಿ 2’ ಮತ್ತು ‘ರೋಲೆಕ್ಸ್’ ಸಿನಿಮಾಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹೇಳಿಕೆಯು ಸುದೀರ್ಘ ಕಾಲದಿಂದ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




