‘ಕಂಗಳ್ ಇರಂದಾಳ್’ ನಟಿ ಸ್ವಾತಿ ಎರಡನೇ ಮದುವೆ, ಪತಿ ಯಾರು?
Swathy Reddy marriage: ತಮಿಳಿನ ಸೂಪರ್ ಹಿಟ್ ‘ಸುಬ್ರಹ್ಮಣ್ಯಪುರಂ’ ಸಿನಿಮಾದ ನಟಿಯಾಗಿ ದೊಡ್ಡ ಜನಪ್ರಿಯತೆ ಗಳಿಸಿದ ಸ್ವಾತಿ ರೆಡ್ಡಿ ಮದುವೆ ಆಗಿದ್ದಾರೆ. ಅವರದೇ ನಟನೆಯ ‘ಮಂತ್ ಆಫ್ ಮಧು’ ಸಿನಿಮಾದ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಡನೆ ಸ್ವಾತಿ ವಿವಾಹ ನೆರವೇರಿದೆ. ಮದುವೆ ಸಮಾರಂಭ ಬಲು ಸರಳವಾಗಿ ಕೆಲವೇ ಆಪ್ತರು, ಸಂಬಂಧಿಕರ ಮುಂದೆ ನಡೆದಿದ್ದು, ನಟಿ ಸ್ವಾತಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಮದುವೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ತಮಿಳಿನ ಸೂಪರ್ ಹಿಟ್ ‘ಸುಬ್ರಹ್ಮಣ್ಯಪುರಂ’ ಸಿನಿಮಾದ ನಟಿಯಾಗಿ ದೊಡ್ಡ ಜನಪ್ರಿಯತೆ ಗಳಿಸಿದ ಸ್ವಾತಿ ರೆಡ್ಡಿ (Swathi Reddy) ಮದುವೆ ಆಗಿದ್ದಾರೆ. ಅವರದೇ ನಟನೆಯ ‘ಮಂತ್ ಆಫ್ ಮಧು’ ಸಿನಿಮಾದ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಡನೆ ಸ್ವಾತಿ ವಿವಾಹ ನೆರವೇರಿದೆ. ಮದುವೆ ಸಮಾರಂಭ ಬಲು ಸರಳವಾಗಿ ಕೆಲವೇ ಆಪ್ತರು, ಸಂಬಂಧಿಕರ ಮುಂದೆ ನಡೆದಿದ್ದು, ನಟಿ ಸ್ವಾತಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಮದುವೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.
ನಟಿ ಸ್ವಾತಿ ರೆಡ್ಡಿ ಅವರಿಗೆ ಇದು ಎರಡನೇ ಮದುವೆ, 2018 ರಲ್ಲಿ ಅವರು ಮಲಯಾಳಂ ಮೂಲದ ಪೈಲೆಟ್ ಆಗಿದ್ದ ವಿಕಾಸ್ ವಾಸು ಅವರನ್ನು ವಿವಾಹವಾಗಿದ್ದರು. ಆದ 2022 ರಲ್ಲಿ ವಿಕಾಸ್ ಅವರಿಂದ ವಿಚ್ಛೇದನ ಪಡೆದ ಸ್ವಾತಿ ರೆಡ್ಡಿ ಇದೀಗ ಶ್ರೀಕಾಂತ್ ಅವರನ್ನು ಮದುವೆ ಆಗಿದ್ದಾರೆ. ಶ್ರೀಕಾಂತ್ ಅವರಿಗೆ ಇದು ಮೊದಲನೇ ಮದುವೆ ಎನ್ನಲಾಗಿದೆ. ಶ್ರೀಕಾಂತ್ ತೆಲುಗು ಸಿನಿಮಾ ನಿರ್ದೇಶಕರಾಗಿದ್ದು, 2020 ರಲ್ಲಿ ‘ಭಾನುಪತಿ-ರಾಮಕೃಷ್ಣ’ ಮತ್ತು 2023 ರಲ್ಲಿ ‘ಮಂತ್ ಆಫ್ ಮಧು’ ಸಿನಿಮಾ ನಿರ್ದೇಶಿಸಿದ್ದಾರೆ.
ಟಿವಿ ನಿರೂಪಕಿಯಾಗಿ ಭಾರಿ ಜನಪ್ರಿಯತೆ ಗಳಿಸಿದ್ದ ಸ್ವಾತಿ ರೆಡ್ಡಿ, ಟಿವಿ ನಿರೂಪಣೆ ಸಮಯದಲ್ಲಿ ಕಲರ್ಸ್ ಸ್ವಾತಿ ಎಂದೇ ಖ್ಯಾತರಾಗಿದ್ದರು. ಬಳಿಕ ತೆಲುಗಿನ ‘ಡೇಂಜರ್’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಸ್ವಾತಿಗೆ ಅವರು ನಟಿಸಿದ ಎರಡನೇ ಸಿನಿಮಾ ‘ಆಡುವಾರಿ ಮಾಟಲಕು ಅರ್ಥಾಲೆ ವೇರುಲೆ’ ಸಿನಿಮಾದಲ್ಲಿ ದೊಡ್ಡ ಯಶಸ್ಸು ಸಿಕ್ಕಿತು. ಆ ಸಿನಿಮಾನಲ್ಲಿ ಸ್ವಾತಿ, ನಾಯಕಿ ತ್ರಿಷಾ ಅವರ ಸಹೋದರಿಯ ಪಾತ್ರದಲ್ಲಿ ನಟಿಸಿದ್ದರು. ಆದರೆ ನಾಯಕಿಗಿಂತಲೂ ಹೆಚ್ಚು ಮಿಂಚಿದರು.
2008 ರಲ್ಲಿ ಬಂದ ತಮಿಳಿನ ‘ಸುಬ್ರಹ್ಮಣ್ಯಂಪುರಂ’ ಸಿನಿಮಾ ಸ್ವಾತಿಯ ಅದೃಷ್ಟ ಬದಲಾಯಿಸಿತು. ರಾಷ್ಟ್ರಪ್ರಶಸ್ತಿ ಗೆದ್ದ ಆ ಸಿನಿಮಾನಲ್ಲಿ ಸ್ವಾತಿ ಅದ್ಭುತವಾಗಿ ನಟಿಸಿದ್ದರು. ಅದರಲ್ಲೂ ‘ಕಂಗಲ್ ಇರಂದಾಳ್’ ಹಾಡಿನಲ್ಲಿ ಅವರ ಅಂದ, ನಟನೆ ಅದ್ಭುತವಾಗಿತ್ತು. ಆ ಹಾಡಿನಿಂದ ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆ ಗಳಿಸಿದರು ಸ್ವಾತಿ. ಆದರೆ ಆ ಬಳಿಕ ಸ್ವಾತಿ ಅವರಿಗೆ ಅವರ ಪ್ರತಿಭೆಗೆ ತಕ್ಕ ಪಾತ್ರಗಳು ಅಷ್ಟಾಗಿ ಸಿಗಲಿಲ್ಲ.
ಇದನ್ನೂ ಓದಿ:ಮದುವೆ ಮಂಟಪಕ್ಕೆ ನುಗ್ಗಿದ ಪ್ರವಾಹ ನೀರು: ವಧುವನ್ನು ತೋಳಿನಲ್ಲಿ ಎತ್ತಿಕೊಂಡು ಹೊರಟ ವರ
2008 ರ ಬಳಿಕ ಹಲವು ಸಿನಿಮಾಗಳಲ್ಲಿ ಸ್ವಾತಿ ನಟಿಸಿದರಾದರೂ ಅವರಿಗೆ ಹಿಟ್ ನೀಡಿದ್ದು ತಮಿಳಿನ ‘ಪೊರಾಲಿ’ (ಕನ್ನಡದ ಯಾರೇ ಕೂಗಾಡಲಿ) ಮತ್ತು ‘ಸ್ವಾಮಿ ರಾರಾ’ ಸಿನಿಮಾಗಳು ಮಾತ್ರ. 2023ರ ವರೆಗೆ ಚಿತ್ರರಂಗದಲ್ಲಿ ಸ್ವಾತಿ ಸಕ್ರಿಯರಾಗಿದ್ದರು. 2023ರಲ್ಲಿ ‘ಮಂತ್ ಆಫ್ ಮಧು’ ಹೆಸರಿನ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ವಿಮರ್ಶಕರಿಂದ ಭಾರಿ ಮೆಚ್ಚುಗೆ ಗಳಿಸಿತು, ತಕ್ಕ ಮಟ್ಟಿಗೆ ಪ್ರದರ್ಶನವನ್ನೂ ಕಂಡಿತು. ಆದರೆ ಆ ಸಿನಿಮಾದ ಬಳಿಕ ಯಾವ ಸಿನಿಮಾನಲ್ಲೂ ನಟಿಸದ ಸ್ವಾತಿ ಇದೀಗ ‘ಮಂತ್ ಆಫ್ ಮಧು’ ಸಿನಿಮಾ ನಿರ್ದೇಶಿಸಿದ್ದ ಶ್ರೀಕಾಂತ್ ಅವರನ್ನು ವರಿಸಿದ್ದಾರೆ. ನಟಿಗೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಷಹಯಗಳನ್ನು ಕೋರಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 am, Thu, 9 July 26




