Tamannaah Bhatia: ‘ಇಂಡಿಯನ್​ ಶಕೀರಾ’: ಅಭಿಮಾನಿಗಳು ಕೊಟ್ಟ ಹೊಸ ಬಿರುದನ್ನು ಸ್ವೀಕರಿಸಿದ ತಮನ್ನಾ ಭಾಟಿಯಾ

Indian Shakira: ‘ಜೈಲರ್​’ ಸಿನಿಮಾದ ‘ಕಾವಾಲಾ..’ ಹಾಡು ವೈರಲ್​ ಆಗಿದೆ. ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಶಕೀರಾ ರೀತಿ ಕಾಣುತ್ತಾರೆ ಎಂಬುದು ಅನೇಕರ ಅಭಿಪ್ರಾಯ.

Tamannaah Bhatia: ‘ಇಂಡಿಯನ್​ ಶಕೀರಾ’: ಅಭಿಮಾನಿಗಳು ಕೊಟ್ಟ ಹೊಸ ಬಿರುದನ್ನು ಸ್ವೀಕರಿಸಿದ ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ

Updated on: Jul 10, 2023 | 6:09 PM

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಈಗ ಟ್ರೆಂಡ್​ನಲ್ಲಿ ಇದ್ದಾರೆ. ಅವರು ನಟಿಸಿದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಜನರ ಎದುರು ಬರುತ್ತಿವೆ. ‘ಲಸ್ಟ್​ ಸ್ಟೋರೀಸ್​ 2’ ಚಿತ್ರದಲ್ಲಿ ಅವರು ಕಾಣಿಸಿಕೊಂಡ ಪರಿಗೆ ಪ್ರೇಕ್ಷಕರು ಬೆರಗಾದರು. ‘ಜೀ ಕರ್ದಾ’ ವೆಬ್​ ಸಿರೀಸ್​ ಕೂಡ ಗಮನ ಸೆಳೆದಿದೆ. ಅದರ ಬೆನ್ನಲ್ಲೇ ‘ಕಾವಾಲಾ..’ ಹಾಡು (Kaavaalaa Song) ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ‘ಜೈಲರ್​’ (Jailer Movie) ಸಿನಿಮಾದ ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಅವರು ಹೆಜ್ಜೆ ಹಾಕಿದ ಪರಿ ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ. ತಮನ್ನಾರನ್ನು ಶಕೀರಾಗೆ ಹೋಲಿಸಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ‘ಇಂಡಿಯನ್​ ಶಕೀರಾ’ ಎಂಬ ಬಿರುದು ವೈರಲ್​ ಆಗಿದೆ. ಅದನ್ನು ತಮನ್ನಾ ಕೂಡ ಖುಷಿಯಿಂದ ಸ್ವೀಕರಿಸಿದ್ದಾರೆ.

‘ಜೈಲರ್​’ ಸಿನಿಮಾದ ‘ಕಾವಾಲಾ..’ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಶಕೀರಾ ರೀತಿ ಕಾಣುತ್ತಾರೆ ಎಂಬುದು ಅನೇಕರ ಅಭಿಪ್ರಾಯ. ಹಾಗಾಗಿ ಶಕೀರಾ ಅವರ ‘ದಿಸ್​ ಟೈಂ ಫಾರ್​ ಆಫ್ರಿಕಾ..’ (ವಕ್ಕಾ ವಕ್ಕಾ..) ಹಾಡಿನ ದೃಶ್ಯಗಳನ್ನು ‘ಕಾವಾಲಾ..’ ಆಡಿಯೋ ಜೊತೆ ಎಡಿಟ್​ ಮಾಡಿ ಹರಿಬಿಡಲಾಗಿದೆ. ಅದನ್ನು ನೋಡಿ ಸ್ವತಃ ತಮನ್ನಾ ಕೂಡ ಫಿದಾ ಆಗಿದ್ದಾರೆ. ಆ ವಿಡಿಯೋವನ್ನು ಅವರು ಟ್ವಿಟರ್​ನಲ್ಲಿ ರಿ-ಟ್ವೀಟ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹಿಂಗೆಲ್ಲ ಕುಣಿದು ಪಡ್ಡೆಗಳ ನಿದ್ದೆ ಕೆಡಿಸಿದ ತಮನ್ನಾ ಭಾಟಿಯಾ

‘ಈ ಹಾಡು ತುಂಬ ಚೆನ್ನಾಗಿ ಸಿಂಕ್​ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು’ ಎಂಬ ಕ್ಯಾಪ್ಷನ್​ನೊಂದಿಗೆ ತಮನ್ನಾ ಅವರು ಈ ವಿಡಿಯೋವನ್ನು ರಿ-ಟ್ವೀಟ್​ ಮಾಡಿಕೊಂಡಿದ್ದಾರೆ. ಅವರ ಗ್ಲಾಮರಸ್​ ಅವತಾರಕ್ಕೆ ಫ್ಯಾನ್ಸ್​ ಮರುಳಾಗಿದ್ದಾರೆ. ಸದ್ಯಕ್ಕೆ ಬಿಡುಗಡೆ ಆಗಿರುವುದು ಲಿರಿಕಲ್​ ವಿಡಿಯೋ ಮಾತ್ರ. ಪೂರ್ತಿ ವಿಡಿಯೋ ಸಾಂಗ್​ ಬಿಡುಗಡೆ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಅನಿರುದ್ಧ್​ ರವಿಚಂದರ್​ ಅವರು ‘ಕಾವಾಲಾ..’ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳಿಂದ ಈ ಹಾಡಿಗೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಯೂಟ್ಯೂಬ್​ನಲ್ಲಿ 2.1 ಕೋಟಿಗೂ ಅಧಿಕ ಬಾರಿ ಈ ಹಾಡು ವೀಕ್ಷಣೆ ಕಂಡಿದೆ. ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ ಜೊತೆ ತಮನ್ನಾ ಅವರು ತೆರೆ ಹಂಚಿಕೊಂಡಿದ್ದಾರೆ. ಪ್ರತಿಷ್ಠಿತ ‘ಸನ್​ ಪಿಕ್ಚರ್ಸ್​’ ಮೂಲಕ ‘ಜೈಲರ್​’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರಕ್ಕೆ ನೆಲ್ಸನ್​ ಅವರು ನಿರ್ದೇಶನ ಮಾಡಿದ್ದು, ಶಿವರಾಜ್​ಕುಮಾರ್​ ಕೂಡ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us