Tamannaah Bhatia: ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ ನಟಿ ತಮನ್ನಾ; ಅಮೇಜಾನ್ ಸೀರಿಸ್​ಗಾಗಿ ಬೋಲ್ಡ್​ ಅವತಾರ

ತಮನ್ನಾ ಅವರು ಹಾಟ್ ಅವತಾರ ತಾಳುತ್ತಿದ್ದಾರೆ. ಅವರು ತೆರೆ ಮೇಲೆ ನೋ ಕಿಸ್ಸಿಂಗ್ ಪಾಲಿಸಿ ಇಟ್ಟುಕೊಂಡಿದ್ದರು. ಅದನ್ನು ಅವರು ಬ್ರೇಕ್ ಮಾಡಿದ್ದಾರೆ.

Tamannaah Bhatia: ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ ನಟಿ ತಮನ್ನಾ; ಅಮೇಜಾನ್ ಸೀರಿಸ್​ಗಾಗಿ ಬೋಲ್ಡ್​ ಅವತಾರ
ತಮನ್ನಾ ಭಾಟಿಯಾ
Follow us
ರಾಜೇಶ್ ದುಗ್ಗುಮನೆ
|

Updated on: Jun 15, 2023 | 7:39 AM

ನಟಿ ತಮನ್ನಾ ಭಾಟಿಯಾ (Tamannaah Bhatia)  ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈಗೀಗ ಅವರು ಮಾಡುತ್ತಿರುವ ಪಾತ್ರಗಳು ಎಲ್ಲರ ಗಮನ ಸೆಳೆಯುವಂತಿದೆ. ಇತ್ತೀಚೆಗೆ ‘ಲಸ್ಟ್​ ಸ್ಟೋರಿಸ್ 2’ ಟ್ರೇಲರ್ ಮೂಲಕ ತಮನ್ನಾ ಗಮನ ಸೆಳೆದಿದ್ದರು. ಈಗ ಅವರು ಮತ್ತೊಮ್ಮೆ ಬೋಲ್ಡ್​ ಅವತಾರ ತಾಳಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡ ‘ಜೀ ಕರ್ದಾ’ (Jee Karda) ವೆಬ್ ಸೀರಿಸ್​ನಲ್ಲಿ ತಮನ್ನಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾ (Social Media) ಮೂಲಕ ವೈರಲ್ ಆಗಿದೆ.

ತಮನ್ನಾ ಅವರು ಹಾಟ್ ಅವತಾರ ತಾಳುತ್ತಿದ್ದಾರೆ. ಅವರು ತೆರೆ ಮೇಲೆ ನೋ ಕಿಸ್ಸಿಂಗ್ ಪಾಲಿಸಿ ಇಟ್ಟುಕೊಂಡಿದ್ದರು. ಅದನ್ನು ಅವರು ಬ್ರೇಕ್ ಮಾಡಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಜೀ ಕರ್ದಾ’ ಪ್ರಸಾರ ಕಂಡಿದೆ. ಇದರಲ್ಲಿ ತಮನ್ನಾ ಅವತಾರ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

‘ಜೀ ಕರ್ದಾ’ ಏಳು ಬಾಲ್ಯ ಸ್ನೇಹಿತರ ಕಥೆ. ಇವರು ಪ್ರೌಢಾವಸ್ಥೆಗೆ ಬಂದ ನಂತರ ಏನೆಲ್ಲ ಸವಾಲುಗಳನ್ನು ಎದುರಿಸುತ್ತಾರೆ ಅನ್ನೋದು ಈ ಸೀರಿಸ್​ನ ಕಥೆ. ತಮನ್ನಾ ಪ್ರೇಮಕ್ಕಾಗಿ ಪರದಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮದುವೆಯ ಕಲ್ಪನೆಯನ್ನು ಯಾರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸಿಕ್ಕ ಸಿಕ್ಕವರ ಜೊತೆ ಅವರು ರೊಮ್ಯಾನ್ಸ್​ಗೆ ಇಳಿಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಟ್ರೋಲ್​​ಗಳು ಹರಿದಾಡುತ್ತಿವೆ.

ಇದನ್ನೂ ಓದಿ: ವಿಜಯ್ ವರ್ಮಾ ಜೊತೆಗಿನ ಪ್ರೇಮ ಸಂಬಂಧ ಒಪ್ಪಿಕೊಂಡ ನಟಿ ತಮನ್ನಾ: ಲವ್ ಶುರುವಾಗಿದ್ದು ಯಾವಾಗ?

ಇತ್ತೀಚೆಗೆ ತಮನ್ನಾ ವಿಜಯ್ ವರ್ಮಾ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ‘ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ಖಾಸಗಿ ವಿಷಯವಾಗಿರುತ್ತದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ’ ಎಂದಿದ್ದರು. ಜೊತೆಗೆ, ‘ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ’ ಎಂದು ಅವರು ಬಣ್ಣಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ