AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಿತ್ರ ಫ್ಯಾಷನ್ ಸ್ಟೈಲ್​​​ನಲ್ಲಿ ಬಂದ ತಮನ್ನಾ ಭಾಟಿಯಾ; ಸಾಕಷ್ಟು ಟೀಕೆ

ನಟಿ ತಮನ್ನಾ ಭಾಟಿಯಾ ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ಧರಿಸಿದ್ದ ವಿಶಿಷ್ಟ ಜೀನ್ಸ್ ಉಡುಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅವರ 'ವಿಚಿತ್ರ ಫ್ಯಾಷನ್' ಶೈಲಿಗೆ ಟ್ರೋಲ್‌ಗಳು ಎದುರಾಗಿದ್ದು, ಕೆಲವರು ಧೈರ್ಯಕ್ಕೆ ಬೆಂಬಲ ನೀಡಿದ್ದಾರೆ. ಸೆಲೆಬ್ರಿಟಿಗಳ ಬೋಲ್ಡ್ ಫ್ಯಾಷನ್ ಆಯ್ಕೆಗಳು ನಿರಂತರವಾಗಿ ಗಮನ ಸೆಳೆಯುತ್ತಿವೆ.

ವಿಚಿತ್ರ ಫ್ಯಾಷನ್ ಸ್ಟೈಲ್​​​ನಲ್ಲಿ ಬಂದ ತಮನ್ನಾ ಭಾಟಿಯಾ; ಸಾಕಷ್ಟು ಟೀಕೆ
ತಮನ್ನಾ ಭಾಟಿಯಾ
ರಾಜೇಶ್ ದುಗ್ಗುಮನೆ
|

Updated on: May 11, 2026 | 11:16 AM

Share

ಸೆಲೆಬ್ರಿಟಿಗಳ ಉಡುಗೆ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಅವರು ಹಾಕುವ ಚಿತ್ರ-ವಿಚಿತ್ರ ಉಡುಗೆ ಚರ್ಚೆ ಆಗುತ್ತದೆ. ಈಗ ನಟಿ ತಮನ್ನಾ ಭಾಟಿಯಾ ಅವರ (Tamannah Bhatia) ಹೊಸ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬೈನಲ್ಲಿ ನಡೆದ ‘ಕಾಮಿಕ್ ಕಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮನ್ನಾ ಉಡುಗೆಯ ಶೈಲಿ ಅನೇಕರಿಗೆ ವಿಚಿತ್ರವಾಗಿ ಕಂಡಿದೆ. ಕೆಲವರು ಇದನ್ನು ಟ್ರೋಲ್ ಮಾಡಿದ್ದಾರೆ.

ತಮನ್ನಾ ಈ ಕಾರ್ಯಕ್ರಮಕ್ಕೆ ಬಿಳಿ ಬಣ್ಣದ ಕ್ರಾಪ್ ಟೀ-ಶರ್ಟ್ ಮತ್ತು ತಿಳಿ ನೀಲಿ ಬಣ್ಣದ ಡೆನಿಮ್ ಜೀನ್ಸ್ ಧರಿಸಿದ್ದರು. ಆದರೆ, ಈ ಜೀನ್ಸ್ ಪ್ಯಾಂಟ್ ವಿನ್ಯಾಸವು ಅತ್ಯಂತ ವಿಭಿನ್ನವಾಗಿತ್ತು. ಪ್ಯಾಂಟ್‌ನ ಸೊಂಟದ ಭಾಗದಲ್ಲಿ ದೊಡ್ಡದಾದ ಕಟ್​ಗಳಿದ್ದು, ಅವುಗಳನ್ನು ಚೈನ್‌ನಿಂದ ಜೋಡಿಸಲಾಗಿತ್ತು. ಇದು ನೋಡಲು ಜೀನ್ಸ್ ಪ್ಯಾಂಟ್ ಜಾರಿ ಬೀಳುತ್ತಿರುವಂತೆ ಭಾಸವಾಗುತ್ತಿದ್ದುದರಿಂದ ಅನೇಕ ನೆಟ್ಟಿಗರು ಇದನ್ನು ‘ವಿಚಿತ್ರ ಫ್ಯಾಷನ್’ ಎಂದು ಕರೆದಿದ್ದಾರೆ.

ಕೆಲವರಿಗೆ ಅವರ ಡ್ರೆಸ್ ಮುಜುಗ ತಂದಿದೆ. ಆದರೆ, ತಮನ್ನಾ ಈ ಡ್ರೆಸ್​​ ಅನ್ನು ತುಂಬಾನೇ ಇಷ್ಟಪಟ್ಟಿದ್ದಾರೆ. ವಿಡಿಯೋದಲ್ಲಿ ತಮನ್ನಾ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಾ ನಕ್ಕಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ‘ಇದು ಯಾವ ತರಹದ ಡ್ರೆಸ್?’, ‘ಫ್ಯಾಷನ್ ಹೆಸರಲ್ಲಿ ಏನೆಲ್ಲಾ ಮಾಡ್ತಾರೆ’ ಎಂಬಂತಹ ಟೀಕೆಗಳು ಕೇಳಿಬಂದಿವೆ. ಇನ್ನು ಕೆಲವರು ಅವರ ಈ ಧೈರ್ಯದ ಫ್ಯಾಷನ್ ಆಯ್ಕೆಯನ್ನು ಬೆಂಬಲಿಸಿದ್ದಾರೆ.

ಸಾಮಾನ್ಯವಾಗಿ ಕಾಮಿಕ್ ಕಾನ್‌ನಂತಹ ಕಾರ್ಯಕ್ರಮಗಳಲ್ಲಿ ಸೆಲೆಬ್ರಿಟಿಗಳು ಇಂತಹ ವಿಭಿನ್ನ ಉಡುಗೆಗಳನ್ನು ಧರಿಸುವುದು ಸಾಮಾನ್ಯ. ತಮನ್ನಾ ಅವರು ಕೂಡ ಇದೇ ಉದ್ದೇಶದಿಂದ ಈ ‘ರಿಸ್ಕಿ’ ಫ್ಯಾಷನ್ ಟ್ರೈ ಮಾಡಿರಬಹುದು ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಕಿರಿಯ ನಟನೊಟ್ಟಿಗೆ ತಮನ್ನಾ ಭಾಟಿಯಾ ಸಿನಿಮಾ, ಬೋಲ್ಡ್ ಪಾತ್ರದಲ್ಲಿ ನಟಿ

ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾ ಜೊತೆ ಡೇಟ್ ಮಾಡಿ ಸುದ್ದಿ ಆಗಿದ್ದರು. ಆ ಬಳಿಕ ಬ್ರೇಕಪ್ ಆಯಿತು. ಈಗ ತಮನ್ನಾ ಭಾಟಿಯಾ ಅವರು ಸಿನಿಮಾ ಕೆಲಸಗಳ ಮೇಲೆ ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us