
ಇತ್ತೀಚೆಗೆ ಸೈಬರ್ ಅಪರಾಧಗಳ (Cyber Crime) ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಎಲ್ಲರೂ ಸೈಬರ್ ಕ್ರೈಮ್ನ ಸಂತ್ರಸ್ತರಾಗುತ್ತಿದ್ದಾರೆ. ಈಗ ತಮಿಳಿನ ಖ್ಯಾತ ನಟ ಕಾರ್ತಿ (Karthi) ಅವರ ಮೇಲೆ ಸೈಬರ್ ಕಳ್ಳರು ಕಣ್ಣು ಹಾಕಿದ್ದಾರೆ. ಇದರಿಂದ ಅವರಿಗೆ ತೊಂದರೆ ಆಗಿದೆ. ಸೋಶಿಯಲ್ ಮೀಡಿಯಾ ಖಾತೆಗೆ ಕನ್ನ ಹಾಕಿರುವ ವಿಚಾರದ ಬಗ್ಗೆ ಕಾರ್ತಿ ಮಾಹಿತಿ ನೀಡಿದ್ದಾರೆ. ಸದ್ಯ ಕಾರ್ತಿ ಅವರ ಟೀಂ ಫೇಸ್ಬುಕ್ ಖಾತೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.
ಕಾರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಲು ಫೇಸ್ಬುಕ್, ಟ್ವಿಟರ್ ಮೊದಲಾದ ಸೋಶಿಯಲ್ ಮೀಡಿಯಾ ಖಾತೆಯನ್ನು ಅವರು ಬಳಕೆ ಮಾಡುತ್ತಾರೆ. ಆದರೆ, ಈಗ ಅವರ ಫೇಸ್ಬುಕ್ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿದ್ದಾರೆ. ಇದು ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ತಕ್ಷಣಕ್ಕೆ ಮಾಹಿತಿ ನೀಡಿದ್ದಾರೆ.
ಕಾರ್ತಿ ಅವರ ಫೇಸ್ಬುಕ್ ಖಾತೆಯಿಂದ ಲೈವ್ ಬರಲಾಗಿದೆ. ಇದು ಕಾರ್ತಿ ಅಲ್ಲ ಎಂಬುದು ಅಭಿಮಾನಿಗಳಿಗೆ ಗೊತ್ತಾಗಿದೆ. ಆನ್ಲೈನ್ ಗೇಮ್ ಒಂದನ್ನು ಲೈವ್ ಮಾಡಲಾಗಿದೆ. ಈ ಲೈವ್ ಸುಮಾರು 3 ಗಂಟೆಗಳಿಗೂ ಅಧಿಕ ಕಾಲ ಇತ್ತು. ಸದ್ಯ (ನವೆಂಬರ್ 14, ಮಧ್ಯಾಹ್ನ 2.15) ಫೇಸ್ಬುಕ್ ಖಾತೆ ಹ್ಯಾಕರ್ಸ್ ಕೈಯಲ್ಲೇ ಇದೆ. ಈ ಬಗ್ಗೆ ಕಾರ್ತಿ ಅವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
‘ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಆಗಿದೆ. ನಾವು ಖಾತೆಯನ್ನು ಸರಿ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಕಾರ್ತಿ ಬರೆದುಕೊಂಡಿದ್ದಾರೆ. ಕಾರ್ತಿ ಅವರ ಫೇಸ್ಬುಕ್ ಖಾತೆಗೆ ಯಾವುದೇ ತೊಂದರೆ ಆಗದಿರಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
ಇದನ್ನೂ ಓದಿ: ಕಿರುತೆರೆ ವೀಕ್ಷಕರಿಂದ ರಿಜೆಕ್ಟ್ ಆದ ‘ವಿಕ್ರಮ್’; ದಳಪತಿ ವಿಜಯ್ ನಟನೆಯ ‘ಬೀಸ್ಟ್’ಗೆ ಭಾರೀ ಸ್ವಾಗತ
ಕಾರ್ತಿ ಪಾಲಿಗೆ 2022 ವಿಶೇಷವಾಗಿದೆ. ಅವರ ನಟನೆಯ ‘ವಿರುಮಾನ್’ ಸಿನಿಮಾ ಸೂಪರ್ ಹಿಟ್ ಆಯಿತು. ‘ಪೊನ್ನಿಯಿನ್ ಸೆಲ್ವನ್: ಪಾರ್ಟ್ 1’ ಹಾಗೂ ‘ಸರ್ದಾರ್’ ಚಿತ್ರಗಳು ಮೆಚ್ಚುಗೆ ಪಡೆದವು. ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಮಣಿರತ್ನಂ ಸಿನಿಮಾ ಎಂಬ ಕಾರಣದಿಂದಲೂ ಈ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ಪಡೆದಿತ್ತು.