ಕಿರುತೆರೆ ವೀಕ್ಷಕರಿಂದ ರಿಜೆಕ್ಟ್ ಆದ ‘ವಿಕ್ರಮ್’; ದಳಪತಿ ವಿಜಯ್ ನಟನೆಯ ‘ಬೀಸ್ಟ್’ಗೆ ಭಾರೀ ಸ್ವಾಗತ
‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿತ್ತು. ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಲೋಕೇಶ್ ಕನಗರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಬಾಕ್ಸ್ ಆಫೀಸ್ನಲ್ಲಿ ಸೋತ ಚಿತ್ರಗಳು ಒಟಿಟಿಯಲ್ಲಿ ಹಾಗೂ ಟಿವಿಯಲ್ಲಿ ಕ್ಲಿಕ್ ಆದ ಉದಾಹರಣೆ ಸಾಕಷ್ಟಿದೆ. ಬಾಕ್ಸ್ ಆಫೀಸ್ನಲ್ಲಿ ಕೆಲವೇ ಕೆಲವು ಕೋಟಿ ಕಲೆ ಹಾಕಿದ ಚಿತ್ರಗಳು ಇತ್ತೀಚೆಗೆ ಒಟಿಟಿಯಲ್ಲಿ ಸದ್ದು ಮಾಡಿವೆ. ಆದರೆ, ಬಾಕ್ಸ್ ಆಫೀಸ್(Box Office) ಹಾಗೂ ಒಟಿಟಿಯಲ್ಲಿ ಹಿಟ್ ಆದ ಚಿತ್ರ ಟಿವಿಯಲ್ಲಿ ಸೋಲೋದು ತುಂಬಾನೇ ಅಪರೂಪ. ಈಗ ಆ ರೀತಿ ಆಗಿದೆ. ನಟ ಕಮಲ್ ಹಾಸನ್ (Kamal Haasan) ನಟಿಸಿ, ನಿರ್ಮಿಸಿದ್ದ ‘ವಿಕ್ರಮ್’ (Vikram Movie)ಸಿನಿಮಾನ ಕಿರುತೆರೆ ವೀಕ್ಷಕರು ಅಷ್ಟಾಗಿ ಮೆಚ್ಚಿಕೊಂಡಿಲ್ಲ.
‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿತ್ತು. ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಲೋಕೇಶ್ ಕನಗರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಮೊದಲು ತೆರೆಗೆ ಬಂದ ‘ಕೈದಿ’ ಚಿತ್ರಕ್ಕೆ ಲಿಂಕ್ ಕೊಟ್ಟು ‘ವಿಕ್ರಮ್’ ಸಿನಿಮಾ ಮಾಡಿದ್ದರು. ಚಿತ್ರವನ್ನು ಸಖತ್ ಮಾಸ್ ಆಗಿ ಕಟ್ಟಿಕೊಡಲಾಗಿತ್ತು. ಕಮಲ್ ಹಾಸನ್, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಮೊದಲಾದವರು ಈ ಚಿತ್ರದಲ್ಲಿ ಅಬ್ಬರಿಸಿದ್ದರು. ಆದರೆ, ಚಿತ್ರಕ್ಕೆ ಕಿರುತೆರೆ ವೀಕ್ಷಕರು ಶಾಕ್ ನೀಡಿದ್ದಾರೆ.
ದೀಪಾವಳಿ ಪ್ರಯುಕ್ತ ‘ವಿಕ್ರಮ್’ ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಕಂಡಿತು. ಈ ಚಿತ್ರಕ್ಕೆ ಜನರಿಂದ ಭರಪೂರ ಮನ್ನಣೆ ಸಿಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಇದು ಸುಳ್ಳಾಗಿದೆ. ಈ ಚಿತ್ರ ಕೇವಲ 4.42 ಟಿಆರ್ಪಿ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಗಳಿಕೆ ಮಾಡಿದ್ದ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಕೂಡ ದೀಪಾವಳಿ ಸಂದರ್ಭದಲ್ಲಿ ಪ್ರಸಾರ ಕಂಡಿದ್ದು, ಬರೋಬ್ಬರಿ 12. 62 ಟಿಆರ್ಪಿ ಪಡೆದಿದೆ. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
ಚಿರಂಜೀವಿ ಹಾಗೂ ರಾಮ್ ಚರಣ್ ಒಟ್ಟಾಗಿ ಕಾಣಿಸಿಕೊಂಡಿದ್ದ ‘ಆಚಾರ್ಯ’ ಸಿನಿಮಾ ಹೀನಾಯವಾಗಿ ಸೋತಿತು. ಈ ಚಿತ್ರದಿಂದ ಸಿನಿಮಾ ಹಂಚಿಕೆದಾರರು ಸಾಕಷ್ಟು ನಷ್ಟ ಅನುಭವಿಸಿದರು. ಆ ಬಳಿಕ ಸ್ವತಃ ನಷ್ಟ ತುಂಬಿಕೊಡುವ ನಿರ್ಧಾರಕ್ಕೆ ಬಂದರು. ಈ ರೀತಿ ಸೋತ ಚಿತ್ರಕ್ಕೂ ಒಳ್ಳೆಯ ಟಿಆರ್ಪಿ ಸಿಕ್ಕಿದೆ. ಈ ಸಿನಿಮಾ ಟಿವಿಯಲ್ಲಿ 6.3 ರೇಟಿಂಗ್ ಪಡೆದಿದೆ. ಈ ಮೂಲಕ ‘ವಿಕ್ರಮ್’ ಚಿತ್ರಕ್ಕಿಂತ ಹೆಚ್ಚಿನ ಟಿಆರ್ಪಿಯನ್ನು ‘ಆಚಾರ್ಯ’ ಪಡೆದಿದೆ.
ಇದನ್ನೂ ಓದಿ: 3 ದಿನಕ್ಕೆ ‘ವಿಕ್ರಮ್ ವೇದ’ ಸಿನಿಮಾದ ಕಲೆಕ್ಷನ್ ಎಷ್ಟು? ಹೃತಿಕ್-ಸೈಫ್ ಚಿತ್ರಕ್ಕೆ ಸಖತ್ ಕಮಾಯಿ
‘ವಿಕ್ರಮ್’ ಚಿತ್ರ ಚಿತ್ರಮಂದಿರ ಹಾಗೂ ಒಟಿಟಿ ಎರಡರಲ್ಲೂ ಅಬ್ಬರಿಸಿದೆ. ಈ ಕಾರಣಕ್ಕೆ ಈ ಚಿತ್ರವನ್ನು ಟಿವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿಲ್ಲ ಎನ್ನಲಾಗುತ್ತಿದೆ. ಕೋಟಿಕೋಟಿ ಕೊಟ್ಟು ಸಿನಿಮಾ ಖರೀದಿಸಿದವರಿಗೆ ಟಿಆರ್ಪಿ ರೇಟಿಂಗ್ ವಿಚಾರ ಸಾಕಷ್ಟು ಚಿಂತೆ ಮೂಡಿಸಿದೆ.
Published On - 6:06 pm, Sat, 5 November 22