ಐಷಾರಾಮಿ ಕಾರಿಗೆ ಆಮದು ಸುಂಕ ಕಟ್ಟುತ್ತೇನೆ, 1 ಲಕ್ಷ ರೂ. ದಂಡ ರದ್ದುಪಡಿಸಿ: ಮದ್ರಾಸ್​ ಹೈಕೋರ್ಟ್​ ಮೊರೆ ಹೋದ ತಮಿಳು ನಟ ವಿಜಯ್

ಐಷಾರಾಮಿ ಕಾರಿಗೆ ತಗಲುವ ಆಮದು ಸುಂಕವನ್ನು ಕಟ್ಟುತ್ತೇನೆ ಆದರೆ, ನ್ಯಾಯಾಲಯ ದಂಡವನ್ನು ರದ್ದು ಪಡಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಮದ್ರಾಸ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿರುವ ವಿಜಯ್, ಆದೇಶದ ವೇಳೆ ಹೈಕೋರ್ಟ್ ಕಟುವಾಗಿ ತಿಳಿಸಿದ್ದ ತನ್ನ ಅಭಿಪ್ರಾಯವನ್ನು ತೀರ್ಪಿನಿಂದ ತೆಗೆದುಹಾಕಬೇಕೆಂದೂ ಮನವಿ ಸಲ್ಲಿಸಿದ್ದಾರೆ.

ಐಷಾರಾಮಿ ಕಾರಿಗೆ ಆಮದು ಸುಂಕ ಕಟ್ಟುತ್ತೇನೆ, 1 ಲಕ್ಷ ರೂ. ದಂಡ ರದ್ದುಪಡಿಸಿ: ಮದ್ರಾಸ್​ ಹೈಕೋರ್ಟ್​ ಮೊರೆ ಹೋದ ತಮಿಳು ನಟ ವಿಜಯ್
ತಮಿಳು ನಟ ವಿಜಯ್
Follow us
TV9 Web
| Updated By: Skanda

Updated on: Jul 17, 2021 | 7:43 AM

ಚೆನ್ನೈ: ವಿದೇಶದಿಂದ ಆಮದು ಮಾಡಿಕೊಂಡ ಐಷಾರಾಮಿ ಕಾರಿಗೆ ಸುಂಕ (Tax) ಕಟ್ಟದೇ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದ ತಮಿಳು ನಟ ವಿಜಯ್ (Tamil Actor Vijay) ಮತ್ತೆ ಅದೇ ವಿಚಾರವಾಗಿ ಮದ್ರಾಸ್​ ಹೈಕೋರ್ಟ್ (Madras High Court)​ ಮೊರೆ ಹೋಗಿದ್ದಾರೆ. ಐಷಾರಾಮಿ ಕಾರಿಗೆ (Luxurious Car) ಆಮದು ಸುಂಕ ತೆರದೇ ಇರುವುದಕ್ಕಾಗಿ ದಂಡವನ್ನೂ ವಿಧಿಸಿ ಎಚ್ಚರಿಕೆ ನೀಡಿದ್ದ ಕೋರ್ಟ್​, ನಟ ವಿಜಯ್​ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಇದೀಗ ಮದ್ರಾಸ್ ಹೈಕೋರ್ಟ್​ ಮೊರೆ ಹೋಗಿರುವ ವಿಜಯ್ ದಂಡ ರದ್ದತಿಗೆ ಮನವಿ ಮಾಡಿದ್ದಾರೆ.

ಐಷಾರಾಮಿ ಕಾರಿಗೆ ತಗಲುವ ಆಮದು ಸುಂಕವನ್ನು ಕಟ್ಟುತ್ತೇನೆ ಆದರೆ, ನ್ಯಾಯಾಲಯ ದಂಡವನ್ನು ರದ್ದು ಪಡಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಮದ್ರಾಸ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿರುವ ವಿಜಯ್, ಆದೇಶದ ವೇಳೆ ಹೈಕೋರ್ಟ್ ಕಟುವಾಗಿ ತಿಳಿಸಿದ್ದ ತನ್ನ ಅಭಿಪ್ರಾಯವನ್ನು ತೀರ್ಪಿನಿಂದ ತೆಗೆದುಹಾಕಬೇಕೆಂದೂ ಮನವಿ ಸಲ್ಲಿಸಿದ್ದಾರೆ. ಮೊದಲು ವಿದೇಶಿ ಕಾರಿನ ಮೇಲೆ ಆಮದು ಸುಂಕ ರದ್ದು ಮಾಡಲು ಕೋರಿ ಮನವಿ ಸಲ್ಲಿಸಿದ್ದ ನಟ ವಿಜಯ್​ಗೆ ದಂಡ ವಿಧಿಸಿ ಎಚ್ಚರಿಸಿದ್ದ ಹೈಕೋರ್ಟ್, ಚಿತ್ರ ನಟರು ನಿಜ ಜೀವನದಲ್ಲಿ ರೀಲ್ ಹೀರೋಗಳಾಗಿರಬಾರದು ಎಂದು ತಿಳಿಸಿತ್ತು.

ಕೋರ್ಟ್ ಏನು ಹೇಳಿತ್ತು? ನಟ ವಿಜಯ್ ಸಲ್ಲಿಸಿದ್ದ ತೆರಿಗೆ ವಿನಾಯಿತಿಯ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್​ನ ನ್ಯಾ.ಎಸ್.ಎಮ್.ಸುಬ್ರಮಣಿಯಮ್ ಅವರಿದ್ದ ಪೀಠವು, ನಿಜವಾದ ಹೀರೋಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುತ್ತಾರೆ. ನೀವು ನಿಜ ಜೀವನದ ಹೀರೋಗಳಾಗಿ, ಬರಿಯ ತೆರೆಯ ಮೇಲಿನ ಹೀರೋಗಳಾಗಿ ಉಳಿಯಬೇಡಿ ಎಂದು ವಿಜಯ್ ಅವರಿಗೆ ಛಾಟಿ ಬೀಸಿದೆ. ಜೊತೆಗೆ ನ್ಯಾಯಾಲಯವು 1ಲಕ್ಷ ರೂ.ಗಳ ದಂಡವನ್ನೂ ವಿಜಯ್​ಗೆ ವಿಧಿಸಿದ್ದು, ಅದನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ತಿಳಿಸಿದೆ.

ಇಂಗ್ಲೆಂಡ್​ನಿಂದ ತರಿಸಿದ ರೋಲ್ಸ್​ ರಾಯ್ಸ್ ಮಾದರಿಯ ಕಾರಿಗೆ ಭಾರತದಲ್ಲಿ ಆಮದು ಸುಂಕವನ್ನು ಕಟ್ಟದೇ ಅದರ ವಿರುದ್ಧವಾಗಿ ವಿಜಯ್ ಅವರು ಕೋರ್ಟ್​ನ ಮೆಟ್ಟಿಲೇರಿದ್ದರು. ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, ವಿಜಯ್ ಅವರ ವರ್ತನೆಯು ಬಹಳ ಜನರನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿದೆ. ತಮಿಳುನಾಡಿನಂತಹ ರಾಜ್ಯದಲ್ಲಿ ಚಿತ್ರ ನಟರು ಬೇರೆಲ್ಲರಿಗಿಂತ ಹೆಚ್ಚು ಜನರನ್ನು ಪ್ರಭಾವಿಸುತ್ತಾರೆ. ನಟರೇ ಹೀಗೆ ಮಾಡಿದರೆ ತಪ್ಪು ಸಂದೇಶ ಹೋದಂತಾಗುತ್ತದೆ. ನಿಜವಾದ ನಾಯಕನಾದವನು ದೇಶಕ್ಕೆ ಕಟ್ಟಬೇಕಾದ ತೆರಿಗೆಯನ್ನು ತಪ್ಪದೇ ಕಟ್ಟುತ್ತಾನೆ ಎಂದಿದೆ.

ರಿಟ್ ಅರ್ಜಿಯಲ್ಲಿ ವಿಜಯ್ ತಮ್ಮ ಉದ್ಯೋಗವನ್ನು ನಮೂದಿಸದೇ ಇದ್ದದ್ದನ್ನು ಗಮನಿಸಿದ ನ್ಯಾಯಾಲಯವು ಅದನ್ನೂ ಪ್ರಶ್ನಿಸಿದೆ. ಇಷ್ಟು ದೊಡ್ಡ ಹಿಂಬಾಲಕ ಗಡಣವನ್ನೇ ಹೊಂದಿದ್ದರೂ ನಿಮ್ಮ ಉದ್ಯೋಗದ ಕಾಲಂ ಅನ್ನು ಖಾಲಿ ಬಿಟ್ಟಿದ್ದಾರೆ. ಅಲ್ಲದೇ ರಿಟ್ ಅರ್ಜಿ ಸಲ್ಲಿಸಿ ಒಂಬತ್ತು ವರ್ಷಗಳ ಕಾಲ ನ್ಯಾಯಾಲಯದ ಸಮಯವನ್ನೂ ವ್ಯರ್ಥ ಮಾಡಿದ್ದೀರಿ. ಆಮದು ಸುಂಕ ಕಟ್ಟಿದ್ದೀರೋ, ಇಲ್ಲವೋ ಎಂಬುದನ್ನೂ ಸ್ಪಷ್ಟಪಡಿಸಿಲ್ಲ ಎಂದು ವಿಜಯ್ ಮೇಲೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ನಟರು ತೆರೆಯ ಮೇಲೆ ಭ್ರಷ್ಟಾಚಾರ ವಿರೋಧಿಗಳಾಗಿ, ನ್ಯಾಯ ಪರಿಪಾಲಕರಾಗಿ ದುಷ್ಟರನ್ನು ಸದೆಬಡಿಯುತ್ತಾರೆ. ಬೆಳ್ಳಿತೆರೆಯಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವವರೇ ಇವರು ಎಂಬಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಆದರೆ ನಿಜ ಜೀವನಕ್ಕೆ ಬಂದಾಗ ತೆರಿಗೆಯನ್ನು ವಂಚಿಸುವುದು ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ನಡವಳಿಕೆಯಲ್ಲ. ಸಂವಿಧಾನದಲ್ಲಿ ಸೂಚಿಸಲಾಗಿರುವ ಅಸಮಾನತೆಯನ್ನು ತಗ್ಗಿಸುವ ಕಾರ್ಯದಲ್ಲಿ ಸರಿಯಾದ ಸಮಯಕ್ಕೆ ತೆರಿಗೆಯನ್ನು ಕಟ್ಟುವುದೂ ಕೂಡಾ ಸೇರಿದೆ ಎಂದು ನ್ಯಾಯಾಲಯವು ಕಿವಿಮಾತು ಹೇಳಿದೆ.

ನ್ಯಾ.ಸುಬ್ರಮಣಿಯಮ್ ಈ ಕುರಿತು ತೀರ್ಪಿನಲ್ಲಿ ಸ್ಪಷ್ಟವಾದ ನಿಲುವನ್ನು ದಾಖಲಿಸಿ, ‘‘ತಾತ್ವಿಕವಾಗಿ ನೋಡುವುದಿದ್ದರೂ ಭಾರತದಂತಹ ಸಾಂಸ್ಕೃತಿಕ ಹಾಗೂ ಮೌಲ್ಯಗಳನ್ನೇ ಪ್ರಧಾನವಾಗಿ ಹೊಂದಿರುವ ದೇಶದಲ್ಲಿ ವಿಶ್ವದ ಶ್ರೇಷ್ಠ ಕಾರು ಉತ್ತಮವಾದ ಜೀವನಕ್ಕೆ ಸಹಕಾರಿಯಾಗಬಲ್ಲದು ಎಂಬುದನ್ನು ಒಪ್ಪಲಾಗದು. ದೇಶದ ಬಡ ಜನರ ರಕ್ತ ಹಾಗೂ ಕಠಿಣ ಶ್ರಮದ ಫಲದಿಂದಾಗಿ ಶ್ರೀಮಂತ ವ್ಯಕ್ತಿಗಳಲ್ಲಿ ಹಣವು ಶೇಖರಣೆಯಾಗಿದೆಯೇ ವಿನಃ, ಆಕಾಶದಿಂದ ಹಣ ಉದುರಿದ ಕಾರಣದಿಂದಲ್ಲ’’ ಎಂದು ಹೇಳಿದೆ.

ಇದನ್ನೂ ಓದಿ: ಕಾರಿಗೆ ಕೋಟಿ ಕೋಟಿ ಕೊಟ್ಟು, ತೆರಿಗೆ ಕಟ್ಟಲು ಹಣವಿಲ್ಲ ಎಂದ ನಟನಿಗೆ ಕೋರ್ಟ್ ಛೀಮಾರಿ!

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್