AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಅತ್ಯುತ್ತಮ ನಿರ್ಧಾರ’; ಖ್ಯಾತ ಮ್ಯೂಸಿಕ್ ಡೈರೆಕ್ಟರ್​​ ವಿಚ್ಛೇದನ

‘ಸಾಕಷ್ಟು ಆಲೋಚಿಸಿ ನಾನು ಹಾಗೂ ಸೈಂಧವಿ ಬೇರೆ ಆಗುತ್ತಿದ್ದೇವೆ. 11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ. ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಈ ನಿರ್ಧಾರ’ ಎಂದು ಪ್ರಕಾಶ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತಿ-ಪತ್ನಿ ಮಧ್ಯೆ ಯಾವುದೂ ಸರಿ ಇರಲಿಲ್ಲ ಎನ್ನುವ ವಿಚಾರ ಫ್ಯಾನ್ಸ್​ಗೆ ಪಕ್ಕಾ ಆಗಿದೆ.

‘ಇದು ಅತ್ಯುತ್ತಮ ನಿರ್ಧಾರ’; ಖ್ಯಾತ ಮ್ಯೂಸಿಕ್ ಡೈರೆಕ್ಟರ್​​ ವಿಚ್ಛೇದನ
ಪ್ರಕಾಶ್-ಸೈಂಧವಿ
ರಾಜೇಶ್ ದುಗ್ಗುಮನೆ
|

Updated on: May 14, 2024 | 7:02 AM

Share

ತಮಿಳು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಗಮನ ಸೆಳೆದಿರೋ ಜಿವಿ ಪ್ರಕಾಶ್ ಕುಮಾರ್ ಹಾಗೂ ಅವರ ಪತ್ನಿ ಸೈಂಧವಿ ಅವರು ದೂರ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ  ಮೂಲಕ 11 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ವಿಚ್ಛೇದನ (Divorce) ಪಡೆಯುತ್ತಿರುವ ವಿಚಾರವನ್ನು ಈ ದಂಪತಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.

‘ಸಾಕಷ್ಟು ಆಲೋಚಿಸಿ ನಾನು ಹಾಗೂ ಸೈಂಧವಿ ಬೇರೆ ಆಗುತ್ತಿದ್ದೇವೆ. 11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ. ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಈ ನಿರ್ಧಾರ’ ಎಂದು ಪ್ರಕಾಶ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತಿ-ಪತ್ನಿ ಮಧ್ಯೆ ಯಾವುದೂ ಸರಿ ಇರಲಿಲ್ಲ ಎನ್ನುವ ವಿಚಾರ ಫ್ಯಾನ್ಸ್​ಗೆ ಪಕ್ಕಾ ಆಗಿದೆ.

‘ಈ ವೈಯಕ್ತಿಕ ಪರಿವರ್ತನೆಯ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಬೆಲೆ ನೀಡಬೇಕು ಎಂದು ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾವು ದಯೆಯಿಂದ ಕೇಳುತ್ತೇವೆ. ನಾವು ಬೇರೆ ಬೇರೆ ಆಗಿ ಬೆಳೆಯುತ್ತಿದ್ದೇವೆ. ಇದು ಅತ್ಯುತ್ತಮ ನಿರ್ಧಾರ ಎಂದು ನಾವು ಭಾವಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಬೆಂಬಲವು ಮುಖ್ಯ’ ಎಂದಿದ್ದಾರೆ ಪ್ರಕಾಶ್.

ಪ್ರಕಾಶ್ ಕುಮಾರ್ ಅವರು ಆಸ್ಕರ್ ವಿಜೇತ ಮ್ಯೂಸಿಕ್ ಡೈರೆಕ್ಟರ್​ ಎಆರ್​ ರೆಹಮಾನ್ ಅವರ ಸೋದರಳಿಯ. ಪ್ರಕಾಶ್ ಅವರು ಬಾಲ್ಯದ ಗೆಳೆತಿ ಸೈಂಧವಿ ಅವರನ್ನು 2013ರಲ್ಲಿ ಮದುವೆ ಆದರು. 2020ರಲ್ಲಿ ಈ ದಂಪತಿ ಹೆಣ್ಣು ಮಗುವನ್ನು ಕುಟುಂಬಕ್ಕೆ ಸ್ವಾಗತಿಸಿದರು. ಈಗ ಮಗು ನಾಲ್ಕನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇವರು ಬೇರೆ ಆಗಿದ್ದಾರೆ.

ಇದನ್ನೂ ಓದಿ: ‘ಬಾಲಿವುಡ್​ ಮೇಲೆ ಸ್ಯಾಂಡಲ್​ವುಡ್​ ಎಸೆದ ಅಣುಬಾಂಬ್​ ಇದು’: ಯಶ್​ ಗೆಲುವನ್ನು ಹೀಗೆ ವರ್ಣಿಸಿದ ಆರ್​ಜಿವಿ

ಕಳೆದ ವರ್ಷ ಸೈಂಧವಿ ಅವರು ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಪರಸ್ಪರ ವಿಶ್ ಮಾಡಿದ್ದರು. ಈಗ ಇಬ್ಬರೂ ಬೇರೆ ಆಗುವ ಬಗ್ಗೆ ಘೋಷಣೆ ಮಾಡಿರೋದು ಫ್ಯಾನ್ಸ್​ಗೆ ಶಾಕಿಂಗ್ ಎನಿಸಿದೆ.  ‘ಸೊರರೈ ಪೋಟ್ರು’, ‘ತಲೈವಿ’, ‘ಸೆಲ್ಫೀ’, ‘ಕ್ಯಾಪ್ಟನ್ ಮಿಲ್ಲರ್’, ‘ತೇರಿ’ ಸೇರಿ ಹಲವು ಸಿನಿಮಾಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.