ಐಶ್ವರ್ಯಾ ರೈ ಮಾಜಿ ಪ್ರಿಯಕರನಿಗೆ ಮೆಸೇಜ್ ಮಾಡುವಾಗ ಸಿಕ್ಕಿ ಬಿದ್ದಳು; ತೇಜ್ ಪ್ರತಾಪ್ ಯಾದವ್ ಆರೋಪ

ರಾಜಕಾರಣಿ ತೇಜ್ ಪ್ರತಾಪ್ ಯಾದವ್ ತಮ್ಮ ವಿಚ್ಛೇದನದ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಪತ್ನಿ ಐಶ್ವರ್ಯಾ ರೈ ಮಾಜಿ ಪ್ರೇಮಿಯೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಅವರು ಹಂಚಿಕೊಂಡಿರುವ ಈ ವಿಚಾರವು ಪ್ರಸ್ತುತ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಐಶ್ವರ್ಯಾ ರೈ ಮಾಜಿ ಪ್ರಿಯಕರನಿಗೆ ಮೆಸೇಜ್ ಮಾಡುವಾಗ ಸಿಕ್ಕಿ ಬಿದ್ದಳು;  ತೇಜ್ ಪ್ರತಾಪ್ ಯಾದವ್ ಆರೋಪ
ತೇಜ್​ಪಾಲ್ ಯಾದವ್
Edited By:

Updated on: Oct 10, 2026 | 8:08 AM

ರಾಜಕಾರಣಿ ಹಾಗೂ ಕಂಟೆಂಟ್ ಕ್ರಿಯೇಟರ್ ತೇಜ್ ಪ್ರತಾಪ್ ಯಾದವ್ ಅವರು ‘ರೈಸ್ ಅಂಡ್ ಫಾಲ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಶೋದ ಸಂಚಿಕೆವೊಂದರಲ್ಲಿ ಅವರು ತಮ್ಮ ವಿಚ್ಛೇದನದ ಕುರಿತು ಮಾತನಾಡಿದ್ದಾರೆ. ಪತ್ನಿ ಐಶ್ವರ್ಯಾ ರೈ ಜೊತೆಗಿನ ಕಾನೂನು ಹೋರಾಟದ ಹಿನ್ನೆಲೆಯನ್ನು ಅವರು ವಿವರಿಸಿದ್ದಾರೆ. ಈ ವಿಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಮದುವೆಯ ಆರಂಭಿಕ ದಿನಗಳ ಕಷ್ಟದ ಬಗ್ಗೆ ತೇಜ್ ಪ್ರತಾಪ್ ಮಾತನಾಡಿದ್ದಾರೆ. ತಮಗೆ ಒತ್ತಡದಿಂದ ಮದುವೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಮದುವೆಯಾದ ಮೂರು ತಿಂಗಳ ಕಾಲ ನಿರಂತರ ಜಗಳ ನಡೆಯುತ್ತಿತ್ತು. ತಾವು ಬಿಹಾರದ ಆರೋಗ್ಯ ಸಚಿವರಾಗಿದ್ದಾಗ ಈ ಬೆಳವಣಿಗೆಗಳು ನಡೆದವು. ಮನೆಯ ವಾತಾವರಣದಿಂದ ಬೇಸತ್ತು ತೇಜ್ ಪ್ರತಾಪ್ ಸ್ನೇಹಿತರ ಮನೆಗೆ ಹೋಗುತ್ತಿದ್ದರು.

ಪತ್ನಿಯ ವಿಚಿತ್ರ ವರ್ತನೆಗಳ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ದೇವರ ಪೂಜೆ ಮಾಡುವುದನ್ನು ಪತ್ನಿ ವಿರೋಧಿಸುತ್ತಿದ್ದರು. ಐಶ್ವರ್ಯಾ ರೈ ಅವರು ರಾತ್ರಿ ಇಡೀ ಪಾರ್ಟಿಗಳಲ್ಲಿ ಬ್ಯುಸಿಯಾಗಿರುತ್ತಿದ್ದರು. ತಡರಾತ್ರಿವರೆಗೆ ಎಚ್ಚರಿದ್ದು ಬೆಳಗಿನ ಜಾವ ಮಲಗುತ್ತಿದ್ದರು. ಇದರಿಂದ ದಂಪತಿ ನಡುವಿನ ಅಂತರ ಮತ್ತಷ್ಟು ಹೆಚ್ಚಾಯಿತು.

ಒಂದು ದಿನ ನಡೆದ ಘಟನೆಯನ್ನು ತೇಜ್ ಪ್ರತಾಪ್ ನೆನಪಿಸಿಕೊಂಡಿದ್ದಾರೆ. ತಾವು ವಿಧಾನಸಭೆಯಿಂದ ಸಂಜೆ ಮನೆಗೆ ಮರಳಿದ್ದರು. ಮಲಗುವ ಕೋಣೆಗೆ ಹೋದಾಗ ದೊಡ್ಡ ಆಘಾತ ಕಾದಿತ್ತು. ಪತ್ನಿ ತನ್ನ ಮಾಜಿ ಪ್ರೇಮಿಯೊಂದಿಗೆ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದರು. ಆತನಿಗೆ ಪ್ರೀತಿಯ ಸಂದೇಶಗಳು ಹಾಗೂ ಹಾರ್ಟ್ ಸಿಂಬಲ್ ಕಳುಹಿಸುತ್ತಿದ್ದರು. ಇದನ್ನು ದೂರದಿಂದಲೇ ನೋಡಿ ತಾವು ದಕ್ಕೆಯಾಗಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಬಿಹಾರದಲ್ಲಿ ಲಾಲುಪ್ರಸಾದ್ ಮಗ ತೇಜ್ ಪ್ರತಾಪ್ ಯಾದವ್ ಬಂಧನ; ರಹಸ್ಯ ಸ್ಥಳಕ್ಕೆ ಶಿಫ್ಟ್?

ಜಗಳವಾದಾಗಲೆಲ್ಲಾ ತೇಜ್ ಪ್ರತಾಪ್ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ವಿಡಿಯೋ ತುಣುಕುಗಳೇ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾದವು. ಗಂಡಂದಿರು ಮಾತ್ರ ಎಂದೆಂದಿಗೂ ತಪ್ಪಿತಸ್ಥರಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲವೊಮ್ಮೆ ಹೆಣ್ಣುಮಕ್ಕಳು ಕೂಡ ತಪ್ಪು ಮಾಡುತ್ತಾರೆ ಎಂದು ಹೇಳಿದ್ದಾರೆ. ಹಿಂದಿನ ಆ ಕಹಿ ನೆನಪುಗಳು ಇಂದಿಗೂ ತಮ್ಮನ್ನು ಕಾಡುತ್ತಿವೆ ಎಂದು ಅವರು ಭಾವುಕರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:57 am, Sat, 10 October 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us