ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಸಂಗೀತ ಸಾಧನೆ ಹಿಂದಿದೆ ರಾಯರ ಕೃಪೆ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದ ತಮಿಳುನಾಡಿನ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಈಗ ಕರುನಾಡಿನ ಸೊಸೆ. ಸಂಸದ ತೇಜಸ್ವಿ ಸೂರ್ಯ ಜೊತೆ ಶಿವಶ್ರೀ ಅವರ ಮದುವೆ ನಡೆದಿದೆ. ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿವಶ್ರೀ ಅವರು ‘ಗೋಲ್ಡ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಚರ್ಚಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಜೊತೆ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ (Sivasri Skandaprasad) ಅವರು ಹಸೆಮಣೆ ಏರಿದ್ದಾರೆ. ಇತ್ತೀಚೆಗೆ ಅವರ ಮದುವೆ ನೆರವೇರಿತು. ತಮಿಳುನಾಡು ಮೂಲದ ಶಿವಶ್ರೀ ಅವರ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಆಸಕ್ತಿ ಇದೆ. ಶಿವಶ್ರೀ ಅವರು ಅತ್ಯುತ್ತಮ ಗಾಯಕಿ ಹಾಗೂ ಭರತನಾಟ್ಯ ಡ್ಯಾನ್ಸರ್ ಕೂಡ ಹೌದು. ಆರ್ಜೆ ಮಯೂರ (RJ Mayura) ಅವರು ನಡೆಸಿದ ಯೂಟ್ಯೂಬ್ ಸಂದರ್ಶನದಲ್ಲಿ ಶಿವಶ್ರೀ ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕುಟುಂಬದ ಹಿನ್ನೆಲೆ, ಬಾಲ್ಯ, ಸಂಗೀತಾಭ್ಯಾಸ, ರಾಘವೇಂದ್ರ ಸ್ವಾಮಿಗಳ ಕೃಪೆ ಮುಂತಾದ ವಿಷಯಗಳ ಬಗ್ಗೆ ಅವರು ಮನದಾಳ ಹಂಚಿಕೊಂಡಿದ್ದಾರೆ.
ಶಿವಶ್ರೀ ಸ್ಕಂದಪ್ರಸಾದ್ ಅವರದ್ದು ಸಂಗೀತಗಾರರ ಕುಟುಂಬ. ಅವರ ತಂದೆಯ ಹೋಮ್ ಸ್ಟುಡಿಯೋ ಇತ್ತು. ಪ್ರತಿದಿನ ಸಂಗೀತ ಕೇಳುತ್ತಾ, ಭರತನಾಟ್ಯ ಮಾಡುತ್ತಾ ಬೆಳೆದವರು ಶಿವಶ್ರಿ. ದಿನವೂ ಅವರು ತಪ್ಪದೇ ಸಂಗೀತ ಅಭ್ಯಾಸ ಮಾಡಬೇಕಿತ್ತು. ಬೆಳಗ್ಗೆ ಸಂಗೀತಾಭ್ಯಾಸ ಮಾಡದೇ ಇದ್ದರೆ ಅವರ ತಂದೆ ಉಪಹಾರ ನೀಡುತ್ತಿರಲಿಲ್ಲ! ‘ಬೆಳಗ್ಗೆ ಒಂದು ಗಂಟೆ ಅಭ್ಯಾಸ ಮಾಡಲೇಬೇಕಿತ್ತು. ಇಲ್ಲದಿದ್ದರೆ ನಮ್ಮ ತಂದೆ ತಿಂಡಿ ನಿನ್ನಲು ಬಿಡುತ್ತಿರಲಿಲ್ಲ. ಆ ವಿಚಾರದಲ್ಲಿ ಅವರು ತುಂಬಾ ಕಟ್ಟುನಿಟ್ಟಾಗಿದ್ದರು. ನಾನು ಆಹಾರಪ್ರಿಯೆ. ತಿಂಡಿ ಬೇಕು ಎಂಬ ಕಾರಣಕ್ಕೆ ನಾನು ತಪ್ಪದೇ ಸಂಗೀತಾಭ್ಯಾಸ ಮಾಡುತ್ತಿದ್ದೆ’ ಎಂದಿದ್ದಾರೆ ಶಿವಶ್ರೀ.
ಇದನ್ನೂ ಓದಿ: ತೇಜಸ್ವಿ ಸೂರ್ಯ-ಶಿವಶ್ರೀ ಮದ್ವೆ ಆರತಕ್ಷತೆ ಫೋಟೋ ಅಲ್ಬಂ: ಜಮೀರ್ ಅಪ್ಪುಗೆಯ ವಿಶ್
10ನೇ ವಯಸ್ಸಿನಲ್ಲೇ ಶಿವಶ್ರೀ ಅವರು ಭರತನಾಟ್ಯ ಕಲಿತಿದ್ದರು. ಜೊತೆಗೆ ಸಂಗೀತಾಭ್ಯಾಸ ಕೂಡ ಮಾಡುತ್ತಿದ್ದರು. ಆದರೆ ಅವರ ಮೊದಲ ಆದ್ಯತೆ ಭರತನಾಟ್ಯ ಆಗಿತ್ತು. ಕೊವಿಡ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಂಗೀತಾದ ಮೇಲೆ ಹೆಚ್ಚು ಗಮನ ನೀಡಿದರು. ಆಗ ಅವರು ಹೆಚ್ಚು ಜನಪ್ರಿಯತೆ ಪಡೆದರು. ಪ್ರತಿ ವಾರ ಆನ್ಲೈನ್ ಲೈವ್ ಕಾರ್ಯಕ್ರಮ ನೀಡಲು ಆರಂಭಿಸಿದರು.
ಲಾಕ್ಡೌನ್ ಸಮಯದಲ್ಲಿ ಶಿವಶ್ರೀ ಗಾಯನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಜಾಸ್ತಿ ಆಯಿತು. ಜನರಿಗೆ ಹೊಸದನ್ನು ನೀಡಲು ಅವರು ನಿರಂತರ ಪ್ರಯತ್ನಿಸಿದರು. ಅದೊಂದು ತಪಸ್ಸಿನ ರೀತಿ ಇತ್ತು ಎಂದು ಅವರು ವಿವರಿಸಿದ್ದಾರೆ. ಅದರಿಂದ ತಮ್ಮ ಜೀವನ ಬದಲಾಯಿತು ಎಂದು ಶಿವಶ್ರೀ ಹೇಳಿದ್ದಾರೆ. ಲಾಕ್ಡೌನ್ ಮುಗಿದ ಬಳಿಕ ಅವರು ಸಂಗೀತದ ಪಯಣವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿದರು.
ಮಯೂರ ಜೊತೆ ಶಿವಶ್ರೀ ಸ್ಕಂದಪ್ರಸಾದ್ ಸಂದರ್ಶನ:
ಶಿವಶ್ರೀ ಅವರು ರಾಘವೇಂದ್ರ ಸ್ವಾಮಿಗಳ ಭಕ್ತೆ. ತಮ್ಮ ಸಾಧನೆ ಹಿಂದೆ ರಾಯರ ಕೃಪೆ ಇದೆ ಎಂದು ಅವರು ನಂಬಿದ್ದಾರೆ. ಈ ಬಗ್ಗೆಯೂ ಸಂದರ್ಶನದಲ್ಲಿ ಅವರು ವಿವರವಾಗಿ ಮಾತನಾಡಿದ್ದಾರೆ. ‘ಹನುಮಂತಪುರ ಎಂಬ ಊರಿನಲ್ಲಿ ಮೊದಲ ಬಾರಿಗೆ ರಾಯರ ಬೃಂದಾವನದ ಎದುರು ಕಾನ್ಸರ್ಟ್ ನೀಡಿದೆ. ಆ ಬಳಿಕ 4 ವರ್ಷಗಳಲ್ಲಿ 200ಕ್ಕೂ ಅಧಿಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದೇನೆ’ ಎಂದಿದ್ದಾರೆ ಶಿವಶ್ರೀ. ಸಂಗೀತದ ಅನುಭವನ್ನು ಅಧ್ಯಾತ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.