ಆದಾಯದಲ್ಲಿ ಪಾಲು, ನಿರ್ಮಾಪಕರಿಗೆ ಸಂಕಟ ತಂದ ಸರ್ಕಾರದ ಆದೇಶ

Telugu Movie industry: ತೆಲಂಗಾಣ ಸರ್ಕಾರದ ಸೂಚನೆಯ ಪ್ರಕಾರ, ಈ ನಾಲ್ಕು ಸಿನಿಮಾಗಳು ತಮ್ಮ ಲಾಭದ 20% ಮೊತ್ತವನ್ನು ತೆಲಂಗಾಣ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (TGFDC) ನಿರ್ವಹಿಸುವ ‘ತೆಲುಗು ಚಲನಚಿತ್ರ ಉದ್ಯಮದ ಉದ್ಯೋಗಿಗಳ ಫೆಡರೇಶನ್ ಕಲ್ಯಾಣ ಸಂಘದ ಖಾತೆ’ಗೆ ಪಾವತಿಸಬೇಕಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಈ ಹಿಂದೆಯೂ ಸಹ ಈ ಬಗ್ಗೆ ಹೇಳಿದ್ದರು. ತೆಲಂಗಾಭ ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ಸಿನಿಮಾದವರಿಂದಲೇ ಹಣ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಇದೀಗ ಈ ಸೂಚನೆಯನ್ನು ಹೊರಡಿಸಲಾಗಿದೆ.

ಆದಾಯದಲ್ಲಿ ಪಾಲು, ನಿರ್ಮಾಪಕರಿಗೆ ಸಂಕಟ ತಂದ ಸರ್ಕಾರದ ಆದೇಶ
Box Office

Updated on: Aug 19, 2026 | 3:44 PM

ತೆಲಂಗಾಣ (Telangana) ಸರ್ಕಾರದ ಹೊಸ ಆದೇಶ ಸಿನಿಮಾ ತೆಲುಗು ಸಿನಿಮಾ ನಿರ್ಮಾಪಕರಿಗೆ ಸಂಕಟ ತಂದಿದೆ. ಇತ್ತೀಚೆಗೆ ಬಿಡುಗಡೆ ಆದ ತೆಲುಗು ಸಿನಿಮಾಗಳಾದ ‘ಅಖಂಡ 2’, ‘ದಿ ರಾಜ ಸಾಬ್’, ‘ಮನ ಶಂಕರ ವರ ಪ್ರಸಾದ್ ಗಾರು’ ಮತ್ತು ‘ಪೆಡ್ಡಿ’ ಚಿತ್ರಗಳ ಟಿಕೆಟ್ ದರ ಏರಿಕೆಯ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ. ತೆಲಂಗಾಣ ಗೃಹ ಇಲಾಖೆಯು ಆಗಸ್ಟ್ 18 ರಂದು ಸೂಚನೆಯೊಂದನ್ನು ಹೊರಡಿಸಿದ್ದು, ಸಿನಿಮಾ ಟಿಕೆಟ್ ದರಗಳ ಹಚ್ಚಳದಿಂದ ಬರುವ ಹೆಚ್ಚುವರಿ ಆದಾಯದ 20% ಅನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಂಬಂಧಪಟ್ಟ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.

ತೆಲಂಗಾಣ ಸರ್ಕಾರದ ಸೂಚನೆಯ ಪ್ರಕಾರ, ಈ ನಾಲ್ಕು ಸಿನಿಮಾಗಳು ತಮ್ಮ ಲಾಭದ 20% ಮೊತ್ತವನ್ನು ತೆಲಂಗಾಣ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (TGFDC) ನಿರ್ವಹಿಸುವ ‘ತೆಲುಗು ಚಲನಚಿತ್ರ ಉದ್ಯಮದ ಉದ್ಯೋಗಿಗಳ ಫೆಡರೇಶನ್ ಕಲ್ಯಾಣ ಸಂಘದ ಖಾತೆ’ಗೆ ಪಾವತಿಸಬೇಕಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಈ ಹಿಂದೆಯೂ ಸಹ ಈ ಬಗ್ಗೆ ಹೇಳಿದ್ದರು. ತೆಲಂಗಾಭ ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ಸಿನಿಮಾದವರಿಂದಲೇ ಹಣ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಇದೀಗ ಈ ಸೂಚನೆಯನ್ನು ಹೊರಡಿಸಲಾಗಿದೆ.

ಅಸ್ತಿತ್ವದಲ್ಲಿರುವ ಸರ್ಕಾರಿ ಆದೇಶಗಳು ಮತ್ತು ಸೂಚನೆಗಳ ಪ್ರಕಾರ, ಸಿನಿಮಾ ಟಿಕೆಟ್ ದರಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸುವ ಪ್ರತಿ ಸಿನಿಮಾಗಳು, ಹೆಚ್ಚುವರಿ ದರದ ಕಾರಣ ಸಂಗ್ರಹವಾಗುವ ಲಾಭದಲ್ಲಿ ನಿಗದಿತ ಪ್ರಮಾಣದ ಹಣವನ್ನು ತೆಲುಗು ಚಲನಚಿತ್ರ ಉದ್ಯಮದ ಉದ್ಯೋಗಿಗಳ ಫೆಡರೇಶನ್ ಕಲ್ಯಾಣ ಸಂಘದ ಖಾತೆ ನೀಡಬೇಕಿದೆ. ಈ ನಿಯಮದ ಕಾರಣದಿಂದಾಗಿ ಇದೀಗ ಸರ್ಕಾರವು ‘ಅಖಂಡ 2’, ‘ದಿ ರಾಜ ಸಾಬ್’, ‘ಮನ ಶಂಕರ ವರ ಪ್ರಸಾದ್ ಗಾರು’ ಮತ್ತು ‘ಪೆಡ್ಡಿ’ ನಿರ್ಮಾಪಕರಿಗೆ ಪತ್ರ ಬರೆದು ಸೂಚನೆ ನೀಡಿದೆ.

ಇದನ್ನೂ ಓದಿ:ತೆಲಂಗಾಣದಲ್ಲಿ ‘ಪೆದ್ದಿ’ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸಿಕ್ತು ಅನುಮತಿ: ಆದರೆ ಷರತ್ತು ಅನ್ವಯ

ನಿರ್ಮಾಣ ಸಂಸ್ಥೆಗಳಾದ 14 ರೀಲ್ಸ್ ಪ್ಲಸ್ ಎಲ್‌ಎಲ್‌ಪಿ, ಪೀಪಲ್ ಮೀಡಿಯಾ ಫ್ಯಾಕ್ಟರಿ ಪ್ರೈವೇಟ್ ಲಿಮಿಟೆಡ್, ಶೈನ್ ಸ್ಕ್ರೀನ್ಸ್ ಇಂಡಿಯಾ ಎಲ್‌ಎಲ್‌ಪಿ ಮತ್ತು ವೃದ್ಧಿ ಸಿನಿಮಾಸ್ ಎಲ್‌ಎಲ್‌ಪಿಯವರಿಗೆ ಸರ್ಕಾರದ ವತಿಯಿಂದ ಸೂಚನೆಗಳು ತಲುಪಿವೆ. ಶೀಘ್ರವೇ ಈ ನಿರ್ಮಾಣ ಸಂಸ್ಥೆಗಳು ಹಣವನ್ನು ಸರ್ಕಾರ ಸೂಚಿಸಿರುವ ಖಾತೆಗೆ ಜಮಾವಣೆ ಮಾಡಬೇಕಿದೆ.

ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ನಿರ್ಮಾಣ ಸಂಸ್ಥೆಗಳು, ತಮ್ಮ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ, ಶೋಗಳ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರಗಳ ಬಳಿ ಅನುಮತಿ ಕೋರುತ್ತವೆ. ಬಹುತೇಕ ಸಿನಿಮಾಗಳಿಗೆ ಸರ್ಕಾರಗಳು ಅನುಮತಿ ನೀಡುತ್ತವೆ. ಅದರಿಂದ ನಿರ್ಮಾಣ ಸಂಸ್ಥೆಗಳು ದೊಡ್ಡ ಲಾಭವನ್ನೂ ಸಹ ಮಾಡುತ್ತವೆ. ಆ ಲಾಭದ 20% ಹಣವನ್ನು ಕಲ್ಯಾಣ ನಿಧಿಗೆ ನೀಡಬೇಕು ಎಂಬುದು ತೆಲಂಗಾಣ ಸರ್ಕಾರದ ನಿಯಮವಾಗಿದೆ. ತೆಲುಗು ಸಿನಿಮಾಗಳು ಮಾತ್ರವೇ ಅಲ್ಲದೆ, ತೆಲಂಗಾಣ, ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳ ಮತ್ತು ಶೋ ಹೆಚ್ಚಳಕ್ಕೆ ಅರ್ಜಿ ಹಾಕುವ ಪ್ರತಿ ಸಿನಿಮಾಗಳಿಗೂ ಈ ನಿಯಮ ಅನ್ವಯ ಆಗಲಿದೆ. ‘ಟಾಕ್ಸಿಕ್’ ಸಿನಿಮಾಕ್ಕೂ ಇದೇ ನೀತಿ ಅನ್ವಯ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Wed, 19 August 26

Loading...
Unable to load recommendations.
Follow Us