ಕಳೆದ ವಾರ ಧರ್ಮ ಕೀರ್ತಿರಾಜ್ ಅವರು ಬಿಗ್ ಬಾಸ್ ಆಟದಿಂದ ಔಟ್ ಆಗಿದ್ದರು. ಈ ವಾರ ಯಾರು ಹೊರಗೆ ಹೋಗುತ್ತಾರೆ ಎಂಬ ಕೌತುಕ ಮೂಡಿದೆ. ಬೇರೆ ಎಲ್ಲ ವಾರಗಳಿಗಿಂತ ಈ ವಾರ ಡಿಫರೆಂಟ್ ಆಗಿದೆ. ರಾಜಾಡಳಿತದ ಕಾನ್ಸೆಪ್ಟ್ನಲ್ಲಿ ಸಂಚಿಕೆಗಳು ನಡೆಯುತ್ತಿವೆ. ದೊಡ್ಮನೆಯಲ್ಲಿ ಉಗ್ರಂ ಮಂಜು ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ರಾಜನ ಪಟ್ಟ ಸಿಕ್ಕಿದೆ. ಮೋಕ್ಷಿತಾ ಪೈ ಅವರು ಯುವರಾಣಿಯಾಗಿ ಅಧಿಕಾರ ಪಡೆದಿದ್ದಾರೆ. ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದ್ದು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅವರ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ಮೂಡಿದೆ.
ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಶಿಶಿರ್, ಭವ್ಯಾ ಗೌಡ, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಅವರು ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಕಳಪೆ ಪಟ್ಟ ಪಡೆದಿದ್ದರೂ ಕೂಡ ಈ ವಾರ ರಜತ್ ಅವರು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ನಾಮಿನೇಟ್ ಆಗಿರುವವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಶೋಭಾ ಶೆಟ್ಟಿ ಅವರು ಆರಂಭದಲ್ಲಿ ಸಖತ್ ಸದ್ದು ಮಾಡಿದ್ದರು. ಆದರೆ ಈ ಬಾರಿ ನಾಮಿನೇಟ್ ಆಗಿದ್ದು, ಅವರಿಗೆ ಎಲಿಮಿನೇಷನ್ ಭಯ ಕಾಡುತ್ತಿದೆ. ಗೋಲ್ಡ್ ಸುರೇಶ್ ಅವರು ಕೂಡ ಆತಂಕಪಡಬೇಕಿದೆ. ಟಾಸ್ಕ್ ವೇಳೆ ಅವರು ಪೆಟ್ಟು ಮಾಡಿಕೊಂಡಿದ್ದೇ ಹೆಚ್ಚು. ಭವ್ಯಾ ಗೌಡ ಅವರು ಕ್ಯಾಪ್ಟನ್ ಆಗಿದ್ದಾಗ ಅಧಿಕಾರ ಚಲಾಯಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರಿಗೆ ಹೈಲೈಟ್ ಆಗುವ ಅವಕಾಶ ಸಿಗಲಿಲ್ಲ.
ಇದನ್ನೂ ಓದಿ: ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಚೈತ್ರಾ ಕುಂದಾಪುರ ಅವರು ಮತ್ತೆ ಡೇಂಜರ್ ಝೋನ್ಗೆ ಬರುವುದಿಲ್ಲ ಎಂದು ತೀರ್ಮಾನ ಮಾಡಿದ್ದರು. ಆದರೆ ಈ ವಾರ ಕೂಡ ನಾಮಿನೇಟ್ ಆಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ವೀಕ್ಷಕರಿಂದ ವೋಟ್ ಸಿಗದಿದ್ದರೆ ಔಟ್ ಆಗಬೇಕಾಗುತ್ತದೆ. ಐಶ್ವರ್ಯಾ ಅವರು ಶಿಶಿರ್ ಹೊರತುಪಡಿಸಿ ಬೇರೆ ಯಾರ ಜೊತೆಗೂ ಹೆಚ್ಚು ಕ್ಲೋಸ್ ಆಗಿಲ್ಲ. ಹಾಗಾಗಿ ಅವರಿಗೂ ಢವಢವ ಶುರುವಾಗಿದೆ. ಇನ್ನು, ತ್ರಿವಿಕ್ರಮ್ ಅವರು ನಾಮಿನೇಟ್ ಆಗಿದ್ದರೂ ಕೂಡ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿರುವುದರಿಂದ ಎಲಿಮಿನೇಟ್ ಆಗುವ ಸಾಧ್ಯತೆ ಕಡಿಮೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.