ಶಿವರಾಜ್‌ಕುಮಾರ್ (Shivarajkumar) ಅವರು ಜುಲೈ 12ರಂದು 60ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಅವರು ಈ ವಯಸ್ಸಿನಲ್ಲೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಮಾಡುತ್ತಿದ್ದಾರೆ. ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಈ ಬಾರಿ 60ನೇ ವರ್ಷದ ಬರ್ತ್ಡೇಯನ್ನು ವಿಶೇಷವಾಗಿ ಆಚರಿಸಲು ಫ್ಯಾನ್ಸ್ ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇ ರೀತಿ ಅನೇಕ ವಾಹಿನಿಗಳು ಶಿವರಾಜ್‌ಕುಮಾರ್ ಸಿನಿಮಾವನ್ನು ಪ್ರಸಾರ ಮಾಡಲು ರೆಡಿ ಆಗಿವೆ. ವಿಶೇಷ ಎಂದರೆ ಜೀ ಪಿಚ್ಚರ್ (Zee Picchar) ಸತತ 60 ಗಂಟೆಗಳ ಕಾಲ ಶಿವಣ್ಣನ ಸಿನಿಮಾ ಪ್ರಸಾರ ಮಾಡಲಿದೆ.
ಜೀ ಪಿಚ್ಚರ್ ಆರಂಭವಾಗಿ 2 ವರ್ಷ ಆಗಿದೆ. ಹಲವು ಕಾನ್ಸೆಪ್ಟ್ಗಳ ಮೂಲಕ ಮನರಂಜನೆ ನೀಡುವ ಕೆಲಸ ಈ ವಾಹಿನಿಯಿಂದ ಆಗುತ್ತಿದೆ. ಈಗ ಶಿವರಾಜ್‌ಕುಮಾರ್ 60ನೇ ವರ್ಷದ ಬರ್ತ್‌ಡೇ ಹಿನ್ನೆಲೆಯಲ್ಲಿ 60 ಗಂಟೆಗಳ ಕಾಲ ನಾನ್ ಸ್ಟಾಪ್ ಶಿವಣ್ಣನ ಸಿನಿಮಾಗಳು ಪ್ರಸಾರ ಆಗಲಿದೆ. 3 ದಿನಗಳ ಕಾಲ ಶಿವರಾಜ್‌ಕುಮಾರ್ ಅಭಿನಯದ 20 ಸಿನಿಮಾಗಳು ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಜು.10ರಿಂದಲೇ (ಭಾನುವಾರ) ಸಿನಿಮಾ ಪ್ರಸಾರ ಆರಂಭ ಆಗಲಿದೆ. ಜು 10ಕ್ಕೆ ಬೆಳಗ್ಗೆ 9ಕ್ಕೆ ʻಭಾಗ್ಯದ ಬಳೆಗಾರʼ ಸಿನಿಮಾದಿಂದ ಆರಂಭವಾಗಿ ಶಿವಣ್ಣನ ಹುಟ್ಟುಹಬ್ಬದ ದಿನ ಅಂದರೆ ಮಂಗಳವಾರ (ಜು.12) ರಾತ್ರಿ ʻಭಜರಂಗಿ-2ʼ ಸಿನಿಮಾ ಮೂಲಕ ಈ ಮ್ಯಾರಾಥಾನ್ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: ‘ಪಾಸ್ಪೋರ್ಟ್ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್‌ಕುಮಾರ್
ಅನೇಕ ಸ್ಟಾರ್ ನಟರ ಬರ್ತ್‌ಡೇ ದಿನ 24 ಗಂಟೆ ಅವರು ನಟಿಸಿದ ಸಿನಿಮಾ ಪ್ರಸಾರ ಮಾಡಿದ ಉದಾಹರಣೆ ಇದೆ. ಹೀಗೆ ನಿರಂತರವಾಗಿ 60 ಗಂಟೆಗಳ ಸಿನಿಮಾ ಪ್ರಸಾರ ಆಗುತ್ತಿರುವುದು ಇದೇ ಮೊದಲು ಎಂದು ಜೀ ಪಿಚ್ಚರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ‘ಜೋಗಿʼ, ʻತವರಿನ ಸಿರಿʼ, ʻಭಜರಂಗಿʼ, ʻಪ್ರೀತ್ಸೆʼ, ʻಕುರುಬನ ರಾಣಿʼ, ʻದಿ ವಿಲನ್ʼ, ʻಮಫ್ತಿʼ ಸಿನಿಮಾಗಳನ್ನು ಇದು ಒಳಗೊಂಡಿದೆ . ಶಿವರಾಜ್‌ಕುಮಾರ್ ಬರ್ತ್‌ಡೇ ಪ್ರಯುಕ್ತ ಜು.12ರಂದು ರಾತ್ರಿ 9.30ಕ್ಕೆ ಶಿವಣ್ಣ ಅವರ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ಕೂಡ ಪ್ರಸಾರವಾಗಲಿದೆ.
Published On - 8:39 pm, Fri, 8 July 22