‘ಸೀತಾ ರಾಮ’ ಮುಗಿದ ಬಳಿಕ ಏನು ಮಾಡ್ತಿದ್ದಾಳೆ ಸಿಹಿ? ಇಲ್ಲಿದೆ ವಿವರ

ಹಳ್ಳಿ ಪವರ್ ಶೋ ಜೀ ಪವರ್ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋ ಮೆಚ್ಚುಗೆ ಪಡೆಯುತ್ತಿದೆ. ಈ ಶೋಗೆ ರೀತು ಸಿಂಗ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವಳಿಗೆ ಆ್ಯಂಕರ್ ಅಕುಲ್ ಬಾಲಾಜಿ ಪ್ರಶ್ನೆ ಒಂದನ್ನು ಕೇಳಿದ್ದಾರೆ. ‘ಸೀತಾ ರಾಮ ಪೂರ್ಣಗೊಂಡ ಬಳಿಕ ಎಲ್ಲಿದೀಯಾ’ ಎಂದು ಕೇಳಿದರು. ಇದಕ್ಕೆ ಸಿಹಿ ಉತ್ತರಿಸಿದಳು.

‘ಸೀತಾ ರಾಮ’ ಮುಗಿದ ಬಳಿಕ ಏನು ಮಾಡ್ತಿದ್ದಾಳೆ ಸಿಹಿ? ಇಲ್ಲಿದೆ ವಿವರ
ರೀತು ಸಿಂಗ್
Updated By: ರಾಜೇಶ್ ದುಗ್ಗುಮನೆ

Updated on: Oct 24, 2025 | 7:50 AM

‘ಸೀತಾ ರಾಮ’ (Seetha Raama) ಧಾರಾವಾಹಿಯಲ್ಲಿ ಸಿಹಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ರೀತು ಸಿಂಗ್. ಈ ಧಾರಾವಾಹಿ ಸೂಪರ್ ಹಿಟ್ ಆಯಿತು. ಕೆಲ ತಿಂಗಳ ಹಿಂದೆ ಈ ಧಾರಾವಾಹಿ ಪೂರ್ಣಗೊಂಡಿತ್ತು. ಆ ಬಳಿಕ ರೀತು ಸಿಂಗ್ ಎಲ್ಲಿಯೂ ಕಾಣಿಸಿಕೊಂಡಿರಲೇ ಇಲ್ಲ. ಈಗ ಆಕೆ ತಾನು ಎಲ್ಲಿದ್ದೇನೆ ಹಾಗೂ ಏನು ಮಾಡುತ್ತಿದ್ದೇನೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಆ ಬಗ್ಗೆ ಇಲ್ಲಿದೆ ವಿವರ.

‘ಸೀತಾ ರಾಮ’ ಧಾರಾವಾಹಿಯಲ್ಲಿ ರೀತು ಸಿಂಗ್ ಅವಳು ತುಂಬಾನೇ ಕ್ಯೂಟ್ ಪಾತ್ರದಲ್ಲಿ ಕಾಣಿಸಿಕೊಂಡಳು. ಅವಳು ತೋರಿದ ಪ್ರಬುದ್ಧತೆ ತುಂಬಾನೇ ದೊಡ್ಡದು. ಕೆಲವು ವರ್ಷ ಈ ಧಾರಾವಾಹಿ ಪ್ರಸಾರ ಕಂಡಿತು. ಈ ಧಾರಾವಾಹಿ ಸಾಕಷ್ಟು ಮೆಚ್ಚುಗೆ ಪಡೆಯಿತು. ಕೊನೆಯಲ್ಲಿ ರೀತು ಸಿಂಗ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಳು. ಈಗ ರೀತು ಅವಳು ಏನು ಮಾಡುತ್ತಿದ್ದೇನೆ ಎಂಬುದನ್ನು ಹೇಳಿದ್ದಾಳೆ.

ಹಳ್ಳಿ ಪವರ್ ಶೋ ಜೀ ಪವರ್ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋ ಮೆಚ್ಚುಗೆ ಪಡೆಯುತ್ತಿದೆ. ಈ ಶೋಗೆ ರೀತು ಸಿಂಗ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವಳಿಗೆ ಆ್ಯಂಕರ್ ಅಕುಲ್ ಬಾಲಾಜಿ ಪ್ರಶ್ನೆ ಒಂದನ್ನು ಕೇಳಿದ್ದಾರೆ. ‘ಸೀತಾ ರಾಮ ಪೂರ್ಣಗೊಂಡ ಬಳಿಕ ಎಲ್ಲಿದೀಯಾ’ ಎಂದು ಕೇಳಿದರು. ಇದಕ್ಕೆ ಸಿಹಿ ಉತ್ತರಿಸಿದಳು.

ಇದನ್ನೂ ಓದಿ
ಮೊದಲ ಬಾರಿಗೆ ಅತೀ ಕಡಿಮೆ ಕಲೆಕ್ಷನ್ ಮಾಡಿದ ‘ಕಾಂತಾರ: ಚಾಪ್ಟರ 1’
ಬಿಗ್ ಬಾಸ್ ಮನೆಯಿಂದ ಶೀಘ್ರವೇ ಅಶ್ವಿನಿ ಗೌಡ ಹೊರಕ್ಕೆ? ನಡೆಯಲಿದೆ ವಿಚಾರಣೆ
ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ; ತಾಳ್ಮೆ ಕಳೆದುಕೊಂಡ ಕಾವ್ಯಾ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

‘ನಾನು ಶಾಲೆಗೆ ಹೋಗ್ತಾ ಇದೀನಿ. ಇದರ ಜೊತೆಗೆ ಏಳು ಸಿನಿಮಾ ಮಾಡಿದ್ದೇನೆ’ ಎಂದು ಸಿಹಿ ಹೇಳಿದಳು. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಅವಳು ಮಾಡಿದ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಮಾಹಿತಿ ಗೊತ್ತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬರಲಿದೆ ‘ಸೀತಾ ರಾಮ 2’; ಕ್ಲೈಮ್ಯಾಕ್ಸ್​ನಲ್ಲಿ ಸಿಕ್ತು ಅಪ್​ಡೇಟ್

ರೀತು ಸಿಂಗ್ ಅವರು ಮೂಲತಃ ನೇಪಾಳದವಳು. ಅವಳು ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಬಂದು ಜೀವನ ಕಟ್ಟಿಕೊಂಡಿದ್ದಾಳೆ. ‘ಡ್ರಾಮಾ ಜೂನಿಯರ್ಸ್’ನಲ್ಲಿ ಅವಳು ಕಾಣಿಸಿಕೊಂಡಳು. ಅಲ್ಲಿ ಅವರ ಜನಪ್ರಿಯತೆ ಹೆಚ್ಚಿತು. ಆ ಬಳಿಕ ಸೀತಾ ರಾಮ ಧಾರಾವಾಹಿ ಮಾಡಿದಳು. ಈಗ ಸಿನಿಮಾಗಳಿಂದಲೂ ಅವಳಿಗೆ ಆಫರ್​ಗಳು ಬರುತ್ತಿವೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.