ಗೌತಮ್ ಕಥೆ ಮುಗಿಸಲು ಎಂಎಲ್ಎ ಜೊತೆ ಕೈ ಜೋಡಿಸಿದ ಜಯದೇವ್
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಆಸ್ತಿ ತ್ಯಜಿಸಿ ಕ್ಯಾಬ್ ಡ್ರೈವರ್ ಆಗಿದ್ದಾನೆ. ಜಯದೇವ್ ಎಂಎಲ್ಎ ಜೊತೆ ಸೇರಿ ಗೌತಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾನೆ. ಭೂಮಿಕಾ ಜೊತೆಗಿನ ಪ್ರೀತಿ ಬೆಳೆಯುತ್ತಿರುವಾಗ, ಗೌತಮ್ ಇನ್ನು ಮುಂದೆ ಜಯದೇವ್‌ನ ಸುಮ್ಮನೆ ಬಿಡುವುದಿಲ್ಲ. ಗೌತಮ್‌ಗೆ ಲಕ್ಷ್ಮೀಕಾಂತ ವಿಷಯ ತಿಳಿಸುವ ಸಾಧ್ಯತೆ ಇದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare Serial) ಸಾಕಷ್ಟು ತಿರುವುಗಳು ಎದುರಾಗಿವೆ. ಸದ್ಯದ ಕಥೆ ಪ್ರಕಾರ, ಗೌತಮ್ ತನ್ನ ಆಸ್ತಿಯನ್ನು ತ್ಯಜಿಸಿದ್ದಾನೆ. ಆತ ಕ್ಯಾಬ್ ಡ್ರೈವರ್ ಆಗಿ ಸರಳ ಜೀವನ ನಡೆಸುತ್ತಿದ್ದಾನೆ. ವಠಾರದಲ್ಲಿ ಗೌತಮ್ ಹಾಗೂ ಭೂಮಿಕಾ ಜೀವನ ಪ್ರತ್ಯೇಕವಾಗಿ ಸಾಗುತ್ತಿದೆ. ಹೀಗಿರುವಾಗಲೇ ಒಂದು ದೊಡ್ಡ ಬೆಳವಣಿಗೆ ನಡೆದಿದೆ. ಜಯದೇವ್ ಕಿತಾಪತಿ ಶುರು ಮಾಡಿದ್ದಾನೆ.
ಗೌತಮ್, ಶಕುಂತಲಾಳ ಮಲ ಮಗ. ಜಯದೇವ್ಗೆ ಮಲ ಅಣ್ಣ. ಶಕುಂತಲಾ ಹಾಗೂ ಅವಳ ಮಗ ಜಯದೇವ್ ಒಟ್ಟಾಗಿ ಗೌತಮ್ ವಿರುದ್ಧ ಹಗೆ ತೀರಿಸುತ್ತಾ ಬರುತ್ತಿದ್ದಾರೆ. ಈ ಮೊದಲು ಗೌತಮ್ ಪತ್ನಿ ಭೂಮಿಕಾ ಕುಶಾಲನಗರದಲ್ಲಿ ಇದ್ದಾಗ ಎಂಎಲ್ಎ ಜೊತೆ ಕಿರಿಕ್ ಆಗಿತ್ತು. ಈ ಕಿರಿಕ್ನ ಸರಿಪಡಿಸಿಕೊಳ್ಳಲು ಸಾಧ್ಯವಾಗದೆ ಭೂಮಿಕಾ ಅಲ್ಲಿಂದ ಬಿಟ್ಟು ಬಂದಿದ್ದಳು.
ಆ ಸಮಯದಲ್ಲಿ ಗೌತಮ್ ನೇರವಾಗಿ ಹೋಗಿ ಎಂಎಲ್ಗೆ ಅವಾಜ್ ಹಾಕಿ ಬಂದಿದ್ದ. ಈ ಅವಮಾನವನ್ನು ಎಂಎಲ್ಎ ಮರೆತಿಲ್ಲ. ಈ ಕಾರಣದಿಂದಲೇ ಅವನು ಸೇಡು ತೀರಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಿಸುತ್ತಿದ್ದಾನೆ. ಈಗ ಜಯದೇವ ಇದಕ್ಕೆ ಕೈ ಜೋಡಿಸಿದ್ದಾನೆ. ಆತನು ಗೌತಮ್ ಎಲ್ಲಿದ್ದಾನೆ ಎಂಬುದನ್ನು ಹಡುಕಿಸುತ್ತಿದ್ದಾನೆ. ಈ ಮಧ್ಯೆ ಮತ್ತೊಂದು ಬೆಳವಣಿಗೆ ನಡೆದಿದೆ.
ಭೂಮಿಕಾ ಹಾಗೂ ಎಂಎಲ್ಎ ಮಧ್ಯೆ ಕಿರಿಕ್ ಆಗಿದ್ದು, ಭೂಮಿಕಾ ಅಲ್ಲಿಂದ ಬಿಟ್ಟು ಹೋಗಿದ್ದು ಎಲ್ಲಾ ವಿಚಾರ ಜಯದೇವ್ ಕಿವಿಗೆ ಬಿದ್ದಿದೆ. ಈ ಕಾರಣದಿಂದಲೇ ಜಯದೇವ್ ನೇರವಾಗಿ ಹೋಗಿ ಎಂಎಲ್ಎ ಜೊತೆ ಕೈ ಜೋಡಿಸಿದ್ದಾನೆ. ಈ ವಿಚಾರವನ್ನು ಜಯದೇವ್ ಮಾವ ಲಕ್ಷ್ಮೀಕಾಂತ ಶೀಘ್ರವೇ ಗೌತಮ್‌ಗೆ ತಲುಪಿಸೋ ಸಾಧ್ಯತೆ ಇದೆ. ಮುಂದೆ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಪ್ರೀ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಅಮೃತಧಾರೆ’ ಮೇಘಾ ಶೆಣೋಯ್
ಈಗಾಗಲೇ ಗೌತಮ್ ಹಾಗೂ ಭೂಮಿಕಾ ಮಧ್ಯೆ ಪ್ರೀತಿ ಬೆಳೆಯುತ್ತಿದೆ. ಈ ಸಮಯದಲ್ಲಿ ಯಾರಾದರೂ ಇವರ ಮಧ್ಯೆ ಬಂದರೆ ಅವರನ್ನು ಗೌತಮ್ ಸುಮ್ಮನೆ ಬಿಡೋದಿಲ್ಲ. ಈಗಾಗಲೇ ದಯೆ ತೋರಿ ಜಯದೇವ್‌ನ ಬಿಟ್ಟಿದ್ದ ಗೌತಮ್. ಆದರೆ, ಇನ್ನುಮುಂದೆ ಅವನು ಆ ರೀತಿ ಮಾಡೋದು ಅನುಮಾನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:33 am, Mon, 3 November 25



