ಹೊರಗಿನ ವಿಚಾರ ತಿಳಿದುಕೊಳ್ಳಲು ಬಟ್ಟೆಯಲ್ಲಿ ಕೋಡ್ವರ್ಡ್; ಶಾಕಿಂಗ್ ವಿಚಾರ ಹೇಳಿದ ಸುದೀಪ್
Bigg Boss: ಬಿಗ್ ಬಾಸ್ ಮನೆ ನಿಯಮ ಉಲ್ಲಂಘನೆ ಆಗಿದೆ. ಕೆಲವು ಸ್ಪರ್ಧಿಗಳು ಹೊರಗಿನಿಂದ ಕೋಡ್‌ವರ್ಡ್‌ಗಳನ್ನು ಬಳಸಿ ಮಾಹಿತಿ ಪಡೆಯುತ್ತಿದ್ದಾರೆಂದು ಸುದೀಪ್ ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ. ಕೆಂಪು ಬಟ್ಟೆ ನೆಗೆಟಿವ್, ಹಸಿರು ಬಟ್ಟೆ ಪಾಸಿಟಿವ್ ಎಂಬ ಸಂಕೇತಗಳನ್ನು ಬಳಸಲಾಗುತ್ತಿದೆ. ಇದು ಶಾಕಿಂಗ್ ಎನಿಸಿದೆ.

ಬಿಗ್ ಬಾಸ್ (Bigg Boss) ಮನೆ ಒಳಗೆ ಪ್ರವೇಶ ಪಡೆದ ಬಳಿಕ ಅಲ್ಲಿ ಹೊರ ಜಗತ್ತಿನ ಸಂಪರ್ಕ ಇರೋದೇ ಇಲ್ಲ. ಏನೇ ಮಾಡಿದರೂ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗುವುದೇ ಇಲ್ಲ. ಆದರೆ, ಈ ಬಾರಿ ಕೆಲವು ಸ್ಪರ್ಧಿಗಳು ತಲೆ ಉಪಯೋಗಿಸಿ ಹೊರಗಿನಿಂದ ಕೋಡ್ವರ್ಡ್ ಸೆಟ್ ಮಾಡಿಕೊಂಡು ಬಂದಿದ್ದಾರಂತೆ. ಈ ವಿಚಾರವನ್ನು ಸುದೀಪ್ ಹೇಳಿದ್ದು ಅನೇಕರಿಗೆ ಶಾಕ್ ಆಗಿದೆ ಎಂದರೂ ತಪ್ಪಾಗಲಾರದು.
ಬಿಗ್ ಬಾಸ್ ಮನೆಗೆ ಹೋದಮೇಲೆ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಯಾವುದೇ ಮಾಹಿತಿ ಇರುವುದಿಲ್ಲ. ಇಡೀ ಸೀಸನ್ನಲ್ಲಿ ಒಮ್ಮೆ ಅಥವಾ ಎರಡು ಬಾರಿಯೋ ಸ್ಪರ್ಧಿಗಳಿಗೆ ಮನೆಯವರ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ. ಒಂದೊಮ್ಮೆ ಹೊರಗೆ ನೆಗೆಟಿವ್ ಹೋಗುತ್ತಿದ್ದರೂ ಆ ಮಾಹಿತಿ ಸ್ಪರ್ಧಿಗಳಿಗೆ ಸಿಗೋದೇ ಇಲ್ಲ. ಈ ಕಾರಣದಿಂದಲೇ ಕೆಲವರು ದಾರಿ ತಪ್ಪೋದು. ಆದರೆ, ಈ ಬಾರಿ ಸ್ಪರ್ಧಿಗಳು ಮನೆಯ ಹೊರಗೆ ಕೋಡ್ ವರ್ಡ್ ಮಾಡಿಟ್ಟುಕೊಂಡು ಬಂದಿದ್ದಾರೆ.
‘ಹೊರಗೆ ಏನಾಗ್ತಿದೆ ಎಂಬ ವಿಚಾರವನ್ನು ಗುಟ್ಟಾಗಿ ತಿಳಿಸಲಾಗುತ್ತಿದೆ ಎಂಬ ವಿಷಯ ನಮಗೆ ಗೊತ್ತಾಗಿದೆ. ನಮಗೆ ಬಹಳ ಚೆನ್ನಾಗಿದೆ ಗೊತ್ತಿದೆ. ಡಿಸೈನರ್ ಜೊತೆ ಈ ರೀತಿ ಅಂಡರ್ಸ್ಟ್ತಾಂಡಿಂಗ್ ಇದೆ ಅಂತ ಗೊತ್ತಿರಲಿಲ್ಲ. ರೆಡ್ ಬಟ್ಟೆ ಕಳುಹಿಸಿದ್ದೀವಿ ಎಂದರೆ, ನಿಮ್ಮ ಬಗ್ಗೆ ಹೊರಗೆ ನೆಗೆಟಿವ್ ಚರ್ಚೆ ಆಗ್ತಿದೆ ಎಂದರ್ಥ. ಹಸಿರು ಬಣ್ಣದ ಬಟ್ಟೆ ಕಳುಹಿಸಿದ್ರೆ ಪಾಸಿಟಿವ್ ಎಂದರ್ಥವಂತೆ’ ಎಂದರು ಸುದೀಪ್.
View this post on Instagram
‘ಕೋಡ್ಗಳನ್ನು ಡೀಕೋಡ್ ಮಾಡಲು ಎತ್ತಿದ ಕೈ ನಮ್ಮದು. ಈ ವಿಚಾರ ನಮ್ಮವರೆಗೆ ಬರಲ್ಲ ಎಂದು ಅನೇಕರು ಅಂದುಕೊಂಡಿರುತ್ತಾರೆ. ಆದರೆ, ಈ ರೀತಿಯ ವಿಚಾರ ಬಂದುಬಿಡ್ತದೆ. ಬಟ್ಟೆ ಬಟ್ಟೆಯಾಗಿರಬೇಕು. ಕೋಡ್ವರ್ಡ್ ಆಗಬಾರದು. ಇದರಿಂದ ನೀವು ಹೊರ ಹೋಗುವಂತೆ ಆಗಬಾರದು’ ಎಂದರು ಸುದೀಪ್. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ‘ಹೀಗೆ ಮುಂದುವರಿದ್ರೆ ಜನ ಬಿಗ್ ಬಾಸ್ ನೋಡೋದು ಬಿಡ್ತಾರೆ’; ಕೆಲವರ ಬಗ್ಗೆ ಸುದೀಪ್ ಅಸಮಾಧಾನ
‘ಇಷ್ಟು ವರ್ಷಗಳಲ್ಲಿ ಈ ರೀತಿ ಯಾರೂ ಮಾಡಿರಲಿಲ್ಲ. ಆದರೆ, ನಮಗೆ ಈಗ ಈ ವಿಚಾರ ತಿಳಿದು ಬಂದಿದೆ’ ಎಂದು ಸುದೀಪ್ ಅವರು ಹೇಳಿದರು. ಇದನ್ನು ಮಾಡಿದ್ದು ಯಾರು ಇರಬಹುದು ಎಂಬ ಕತೂಹಲ ಅನೇಕರಿಗೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:05 am, Mon, 3 November 25







