AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಾ-ರಾಣವ್ ಪ್ರೀತಿ ಶುರುವಾಗಿದ್ದು ಹೇಗೆ? ಬಿಚ್ಚಿಟ್ಟ ಕಿರುತೆರೆ ನಟಿ

'ಅಮೃತಧಾರೆ' ಧಾರಾವಾಹಿ ಖ್ಯಾತಿಯ ನಟಿ ರಾಧಾ ಭಗವತಿ ಹಾಗೂ ನಟ ರಾಣವ್ ಗೌಡ ಅವರ ಕ್ಯೂಟ್ ಲವ್ ಸ್ಟೋರಿ ಈಗ ವೈರಲ್ ಆಗಿದೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗಿಯಾಗಿರುವ ರಾಧಾ, ಶೂಟಿಂಗ್ ಸೆಟ್‌ನಲ್ಲಿ ರಾಣವ್ ಕಾಣದಿದ್ದಾಗ ತಮಗೆ ವಿರಹ ಕಾಡಿದ್ದು ಹಾಗೂ ತಾವೇ ಮೊದಲು ಫೋನ್ ಮಾಡಿ ಪ್ರೀತಿ ನಿವೇದಿಸಿದ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ರಾಧಾ-ರಾಣವ್ ಪ್ರೀತಿ ಶುರುವಾಗಿದ್ದು ಹೇಗೆ? ಬಿಚ್ಚಿಟ್ಟ ಕಿರುತೆರೆ ನಟಿ
ರಾಧಾ-ರಾಣವ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 11, 2026 | 4:06 PM

Share

ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕಿರುತೆರೆಯ ಜನಪ್ರಿಯ ಜೋಡಿ ರಾಧಾ ಭಗವತಿ ಹಾಗೂ ರಾಣವ್ ಗೌಡ ಅವರ ಹೊಸ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಯೂಟ್ಯೂಬ್‌ನ ‘ರಾಜೇಶ್ ರಿವೀಲ್ಸ್’ ಸಂದರ್ಶನದಲ್ಲಿ ಭಾಗಿಯಾಗಿರುವ ರಾಧಾ, ತಮಗೆ ರಾಣವ್ ಮೇಲಿನ ಪ್ರೀತಿ ಹೇಗೆ ಶುರುವಾಯಿತು ಎಂಬ ಆಸಕ್ತಿದಾಯಕ ರಹಸ್ಯವನ್ನು ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ.

ಸೆಟ್‌ನಲ್ಲಿ ರಾಣವ್ ಕಾಣದಿದ್ದಾಗ ಕಾಡಿದ ವಿರಹ! ಸಂದರ್ಶನದಲ್ಲಿ ತಮ್ಮ ಪ್ರೇಮಕಥೆಯ ದಿನಗಳನ್ನು ನೆನಪಿಸಿಕೊಂಡಿರುವ ರಾಧಾ ಭಗವತಿ, ಮೊದಲಿಗೆ ನಾನೇ ಅವರನ್ನ ಇಷ್ಟಪಟ್ಟಿದ್ದು’ ಎಂದು ಮುಗುಳ್ನಗುತ್ತಲೇ ಒಪ್ಪಿಕೊಂಡಿದ್ದಾರೆ. ‘ನನಗೆ ಯಾವುದೇ ಸಮಸ್ಯೆ ಎದುರಾದರೂ ಅವರು ತಕ್ಷಣ ಬಂದು ನಿಲ್ಲುತ್ತಿದ್ದರು. ನನ್ನನ್ನು ತುಂಬಾ ಚೆನ್ನಾಗಿ ಕೇರ್ ಮಾಡುತ್ತಿದ್ದರು. ಇದುವರೆಗೆ ಯಾರೂ ನನ್ನನ್ನು ಆ ರೀತಿ ಪ್ರೀತಿಯಿಂದ ನೋಡಿಕೊಂಡಿರಲಿಲ್ಲ’ ಎಂದು ರಾಧಾ ಹೇಳಿದ್ದಾರೆ.

‘ನನಗೆ ಅವರ ಮೇಲೆ ಪ್ರೀತಿ ಯಾವಾಗ ಶುರುವಾಯಿತು ಎಂದು ನನಗೇ ಗೊತ್ತಿರಲಿಲ್ಲ. ಒಂದು ದಿನ ಅವರು ಶೂಟಿಂಗ್ ಸೆಟ್‌ಗೆ ಬಂದಿರಲಿಲ್ಲ. ನಾನು ಸೆಟ್‌ನಲ್ಲಿದ್ದರೂ ನನ್ನ ಕಣ್ಣುಗಳು ಮಾತ್ರ ಸದಾ ಅವರ ರೂಮ್ ಕಡೆಗೇ ನೋಡುತ್ತಿದ್ದವು. ಅವರು ಯಾಕೆ ಬರಲಿಲ್ಲ, ಇಷ್ಟೊತ್ತಿಗೆ ಬರಬೇಕಿತ್ತಲ್ಲಾ ಅಂತ ಚಡಪಡಿಸುತ್ತಿದ್ದೆ. ಅವತ್ತು ಇಡೀ ದಿನ ಅವರಿಗಾಗಿ ಕಾಯುತ್ತಲೇ ಇದ್ದೆ, ಆದರೆ ಅವರು ಬರಲೇ ಇಲ್ಲ’ ಎಂದು ಆ ದಿನದ ನೆನಪನ್ನು ಹಂಚಿಕೊಂಡಿದ್ದಾರೆ.

View this post on Instagram

A post shared by RJ Rajesh (@iam_rjrajesh)

ಕೊನೆಗೂ ಫೋನ್ ಮಾಡಿ ಪ್ರೀತಿ ನಿವೇದಿಸಿದ ರಾಧಾ

‘ಅವತ್ತು ಅವರು ಸೆಟ್‌ಗೆ ಬರದಿದ್ದಾಗ ನನಗೆ ತುಂಬಾ ಮಿಸ್ ಆಗುತ್ತಿತ್ತು. ಆಗ ನಾನೇ ಯೋಚಿಸಿದೆ, ನಾನೆಲ್ಲೋ ನನ್ನ ಪಾಡಿಗೆ ಇರುತ್ತಿದ್ದವಳು ಇವರನ್ನು ಯಾಕಿಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ? ಇವರನ್ನು ಇಷ್ಟೊಂದು ಮಿಸ್ ಮಾಡಿಕೊಳ್ಳುವ ಅಗತ್ಯ ಏನಿದೆ? ನನ್ನ ಪಾಡಿಗೆ ನಾನು ಇರೋಣ ಅಂದುಕೊಂಡರೂ ಅದು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ತಡೆಯಲಾರದೆ ನಾನೇ ಅವರಿಗೆ ಕಾಲ್ ಮಾಡಿದೆ. ಹೇಗಿದ್ದೀರಾ, ಏನು ಮಾಡುತ್ತಿದ್ದೀರಾ ಎಂದು ಕೇಳಿ ನನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ’ ಎಂದು ರಾಧಾ ಆ ಸುಂದರ ಕ್ಷಣವನ್ನು ವಿವರಿಸಿದ್ದಾರೆ.

‘ಅಮೃತಧಾರೆ’ ತಂದ ಒಡನಾಟ

ರಾಧಾ ಹಾಗೂ ರಾಣವ್ ಇಬ್ಬರೂ ಸೂಪರ್ ಹಿಟ್ ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದಾಗ ಈ ಪ್ರೇಮದ ಅಲೆ ಶುರುವಾಗಿತ್ತು. ಸೀರಿಯಲ್‌ನಲ್ಲಿ ರಾಣವ್ ಅವರು ‘ಜೆಡಿ’ ಎಂಬ ವಿಲನ್ ಪಾತ್ರದಲ್ಲಿ ಧೂಳೆಬ್ಬಿಸುತ್ತಿದ್ದರೆ, ರಾಧಾ ಅವರು ‘ಮಲ್ಲಿ’ ಪಾತ್ರದ ಮೂಲಕ ಜನರ ಮನಸ್ಸು ಗೆದ್ದಿದ್ದರು. ಆ ಬಳಿಕ ರಾಧಾ ಅವರು ‘ಭಾರ್ಗವಿ ಎಲ್‌ಎಲ್‌ಬಿ’ ಮುಖ್ಯ ಪಾತ್ರ ಸಿಕ್ಕಿದ್ದರಿಂದ ಅಮೃತಧಾರೆ ಸೀರಿಯಲ್ ಬಿಟ್ಟರೂ, ರಾಣವ್ ಜೊತೆಗಿನ ಪ್ರೀತಿ ಮಾತ್ರ ಗಟ್ಟಿಯಾಗಿಯೇ ಇತ್ತು. ಸದ್ಯ ಈ ಜೋಡಿಯ ಕ್ಯೂಟ್ ಲವ್ ಸ್ಟೋರಿ ವಿಡಿಯೋ ಅಭಿಮಾನಿಗಳ ಮನ ಗೆಲ್ಲುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು!
ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು!
ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ
ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ
ಇಂದು ಶನಿದೇವ, ಹನುಮಂತನನ್ನು ಆರಾಧಿಸಿದರೆ ಶುಭ
ಇಂದು ಶನಿದೇವ, ಹನುಮಂತನನ್ನು ಆರಾಧಿಸಿದರೆ ಶುಭ