ಬದಲಾಗ್ತಾಳಾ ಜಯದೇವ್ ತಾಯಿ ಶಕುಂತಲ? ಸಹಾಯಕ್ಕೆ ಬಂದ ಗೌತಮ್

'ಅಮೃತಧಾರೆ' ಧಾರಾವಾಹಿಯಲ್ಲಿ ನಾಟಕೀಯ ತಿರುವು ಎದುರಾಗಿದೆ. ಜಯದೇವ್ ತನ್ನ ತಾಯಿ ಶಕುಂತಲಾಳನ್ನು ಮನೆಯಿಂದ ಹೊರಹಾಕಿದ್ದಾನೆ. ಆಕೆಯ ಸಹಾಯಕ್ಕೆ ಗೌತಮ್ ಧಾವಿಸಿದ್ದಾನೆ. ಈ ಘಟನೆಯು ಶಕುಂತಲಾಳ ಮನಃಪರಿವರ್ತನೆಗೆ ಕಾರಣವಾಗಬಹುದೇ? ಅಲ್ಲದೆ, ಗೌತಮ್‌ನ ಮೇಲಿನ ಮಾಳವಿಕಾಳ ಪ್ರೀತಿಯಲ್ಲಿ ಬದಲಾವಣೆಯಾಗಬಹುದೇ ಎಂಬ ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವು ಎದುರಾಗಬಹುದು.

ಬದಲಾಗ್ತಾಳಾ ಜಯದೇವ್ ತಾಯಿ ಶಕುಂತಲ? ಸಹಾಯಕ್ಕೆ ಬಂದ ಗೌತಮ್
ಅಮೃತಧಾರೆ
Edited By:

Updated on: Apr 22, 2026 | 8:10 AM

‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ಜಯದೇವ್ ಒಂಟಿಯಾಗುವ ದಿನವು ಸಮೀಪಿಸಿದೆ ಎಂದೇ ಹೇಳಬಹುದು. ಏಕೆಂದರೆ, ಈಗಾಗಲೇ ತಾಯಿಯನ್ನು ಆತ ದೂರ ಮಾಡಿಕೊಂಡಿದ್ದಾನೆ. ತನ್ನ ತಾಯಿ ಹಣ ಕೇಳಿದ್ದಕ್ಕೆ ಸಿಟ್ಟಾದ ಜಯದೇವ್, ಕೋಪದಲ್ಲಿ ತಾಯಿಗೆ ಹೊಡೆದು ಮನೆಯಿಂದ ದೂರಕ್ಕೆ ತಳ್ಳಿದ್ದಾನೆ. ಆಕೆಯ ಸಹಾಯಕ್ಕೆ ಗೌತಮ್ ಆಗಮಿಸಿದ್ದಾನೆ. ಇದರಿಂದ ಶಕುಂತಲ ಬದಲಾಗುವ ಎಲ್ಲಾ ಸೂಚನೆ ಇದೆ.

ಶಕುಂತಲ, ಗೌತಮ್​​ಗೆ ಮಲತಾಯಿ. ಆತನಿಗೆ ಕೆಟ್ಟದಾಗಲಿ ಎಂದೇ ಬಯಸುತ್ತಾ ಬಂದಳು ಶಕುಂತಲ. ಆದರೆ, ಗೌತಮ್ ಆ ರೀತಿಯ ವ್ಯಕ್ತಿ ಅಲ್ಲ ಎನ್ನಬಹುದು. ಆತ, ತಾಯಿಯನ್ನು ಅಪಾರ ಗೌರವ ಹಾಗೂ ಪ್ರೀತಿಯಿಂದ ಕಂಡಿದ್ದಾನೆ. ಇದು ಆತನ ದೊಡ್ಡ ಗುಣ. ಆದರೆ, ಈ ವಿಷಯ ಶಕುಂತಲಗೆ ಗೊತ್ತಾಗಿಲ್ಲ. ಜಯದೇವ್ ತನ್ನ ಪ್ರೀತಿಯ ಮಗ ಎನ್ನುತ್ತಿದ್ದಳು.

ಕ್ಲಬ್​ಗೆ ತೆರಳಿದ್ದ ಶಕುಂತಲ, 3 ಕೋಟಿ ರೂಪಾಯಿ ಕಳೆದುಕೊಂಡಳು ಮತ್ತು ಈ ವೇಳೆ ಸಹಾಯಕ್ಕಾಗಿ ಜಯದೇವ್ ಬಳಿ ಹಣ ಕೇಳಿದಳು. ಜಯದೇವ್ ಆ್ಯಪ್ ಒಂದನ್ನು ಮಾಡಿ, ನೂರಾರು ಕೋಟಿ ಸುರಿದು ಅಲ್ಲಿ ಹಣ ಕಳೆದುಕೊಂಡ ಟೆನ್ಶನ್ ಅಲ್ಲಿ ಇದ್ದ. ಇದೇ ಸಮಯಕ್ಕೆ ಬಂದ ಶಕುಂತಲಾ ಹಣ ಕೇಳಿದಳು ಮತ್ತು ಇದು ಜಯದೇವ್ ಕೋಪಕ್ಕೆ ಕಾರಣ ಆಯಿತು. ಆತ ಕೂಗಾಡಿದ್ದಾನೆ. ಈ ಕೂಗಾಟದ ಬಳಿಕ ಮತ್ತಷ್ಟು ಸಿಟ್ಟಾದ ಜೆಡಿ, ಆಕೆಯನ್ನು ಕತ್ತು ಹಿಡಿದು ಹೊರಕ್ಕೆ ತಳ್ಳಿದ್ದಾನೆ. ಇದರಿಂದ ಜೆಡಿ ಪತ್ನಿ ಕೂಡ ಖುಷಿ ಆಗಿದ್ದಾಳೆ. ಈ ವೇಳೆ ಆಕೆಗೆ ತಪ್ಪಿತಸ್ಥ ಭಾವನೆ ಕಾಡಿದೆ. ಗೌತಮ್​​ನ ಆ ರೀತಿ ನಡೆಸಿಕೊಂಡು ತಪ್ಪು ಮಾಡಿದೆ ಎನಿಸಿದೆ.

ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಈಗ ತನ್ನ ತಾಯಿಯನ್ನು ಮನೆಯಿಂದ ಹೊರ ಹಾಕಲಾಗಿದೆ ಎಂಬ ವಿಷಯ ಗೌತಮ್​​ಗೆ ತಿಳಿದಿದೆ ಎಂದೇ ಹೇಳಬಹುದು. ಈ ವಿಷಯವನ್ನು ಗೌತಮ್​​ಗೆ ತಿಳಿಸಿದ್ದು ಲಕ್ಷ್ಮೀಕಾಂತ್. ಈ ವಿಷಯ ತಿಳಿದ ಬಳಿಕ ಗೌತಮ್ ಕರುಳು ಚುರಕ್ ಎಂದಿದೆ. ಆತ ತಾಯಿಯನ್ನು ಸೇವ್ ಮಾಡಬಹುದು. ಈ ಘಟನೆ ಬಳಿಕವಾದರೂ ಗೌತಮ್ ಮೇಲೆ ಮಾಳವಿಕಾಗೆ ಪ್ರೀತಿ ಮೂಡಬಹುದೇ? ಆಕೆ ಬದಲಾಗಬಹುದೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:09 am, Wed, 22 April 26

Follow Us