ವಿನಯ್ ಮಾತಿಗೆ ಹೆದರಿ ‘ಅಗ್ನಿಪರೀಕ್ಷೆ’ಯಿಂದ ಅರ್ಧಕ್ಕೆ ನಡೆದ ಅಮುಕು ಡುಮುಕು ಮಂಜು

ಸೋಶಿಯಲ್ ಮೀಡಿಯಾ ಸ್ಟಾರ್ ಅಮುಕು ಡುಮುಕು ಮಂಜು ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಿಂದ ಅರ್ಧದಲ್ಲೇ ಹೊರನಡೆದಿದ್ದಾರೆ. ನಟಿ ಸಂಗೀತಾ ಅವರನ್ನು ಇಂಪ್ರೆಸ್ ಮಾಡುವ ಟಾಸ್ಕ್ ನಿರಾಕರಿಸಿದಾಗ ಜಡ್ಜ್ ವಿನಯ್ ಗೌಡ ಸಿಟ್ಟಿಗೆದ್ದರು. ಈ ಮಾತಿನ ಚಕಮಕಿಯಿಂದ ಬೇಸತ್ತ ಮಂಜು ವೇದಿಕೆಯಿಂದ ದಿಢೀರ್ ನಿರ್ಗಮಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ವಿನಯ್ ಮಾತಿಗೆ ಹೆದರಿ ‘ಅಗ್ನಿಪರೀಕ್ಷೆ’ಯಿಂದ ಅರ್ಧಕ್ಕೆ ನಡೆದ ಅಮುಕು ಡುಮುಕು ಮಂಜು
ಅಮುಕು ಡುಮುಕು

Updated on: Aug 17, 2026 | 2:54 PM

ಮುಖ್ಯಾಂಶಗಳು

  • 'ಬಿಗ್ ಬಾಸ್ ಅಗ್ನಿಪರೀಕ್ಷೆ'ಯಿಂದ ಹೊರನಡೆದ ಮಂಜು
  • ಸಂಗೀತಾ ಇಂಪ್ರೆಸ್ ಮಾಡುವ ಟಾಸ್ಕ್ ಬೇಡವೆಂದ ಅಮುಕು ಡುಮುಕು
  • ವೇದಿಕೆಯಲ್ಲೇ ವಾಗ್ವಾದ; ಶಾಕ್ ಆದ ಶೋ ಜಡ್ಜ್‌ಗಳು

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದವರು ಅಮುಕು ಡುಮುಕು ಮಂಜು. ರಿಯಾಲಿಟಿ ಶೋ ಒಂದರಲ್ಲಿ ಅವರು ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಗೆ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಿಕ್ಕ ಜನಪ್ರಿಯತೆಯೇ ಇಲ್ಲಿವರೆಗೆ ಕರೆದುಕೊಂಡು ಬಂದಿತ್ತು. ಆದರೆ, ಈ ಅವಕಾಶವನ್ನು ಅವರು ಕೈ ಚೆಲ್ಲಿದ್ದಾರೆ. ಅವರು ಟಾಸ್ಕ್​​ನ ಅರ್ಧದಲ್ಲೇ ಹೊರ ನಡೆದಿದ್ದಾರೆ.

ಆಗಸ್ಟ್ 16ರಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ ಆರಂಭ ಆಗಿದೆ. ಎರಡನೇ ದಿನದಲ್ಲಿ ಅಮುಕು ಡುಮುಕು ಅವರು ಆಗಮಿಸಿದ್ದರು. ಅವರು ವೇದಿಕೆಗೆ ಎಂಟ್ರಿ ಕೊಡುವಾಗಲೇ ವಿಚಿತ್ರವಾಗಿ ಆಗಮಿಸಿದ್ದರು. ಇದನ್ನು ನೋಡಿಯೇ ಮನೆಯ ಜಡ್ಜ್ ಶಾಕ್ ಆಗಿದ್ದರು. ನಿಮ್ಮ ಬಗ್ಗೆ ಹೇಳಿಕೊಳ್ಳುವಂತೆ ಮಂಜುಗೆ ಕೇಳಲಾಯಿತು. ‘ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆಯುವ ಆಸೆ ಇತ್ತು. ಹೀಗೆ ಖ್ಯಾತಿ ಪಡೆದುಕೊಂಡೆ’ ಎಂದರು. ‘ಗರ್ಲ್​​ ಫ್ರೆಂಡ್ ಇದ್ದಾರಾ’ ಎಂದು ಕೇಳಲಾಯಿತು. ‘ಇಲ್ಲ’ ಎಂದರು ಅಮುಕು ಡುಮುಕು.

‘ಸಂಗೀತಾ ಅವರನ್ನು ಇಂಪ್ರೆಸ್ ಮಾಡಬೇಕು’ ಎಂದು ಚಾಲೆಂಜ್ ಕೊಡಲಾಯಿತು. ‘ನಾನು ಮಾಡಲ್ಲ’ ಎಂದರು ಅಮುಕು ಡುಮುಕು. ‘ಸಂಗೀತಾ ಅವರದ್ದು ಕರಗುವ ಮನಸೇ ಅಲ್ಲ, ಅದಕ್ಕೆ ಮಾಡಲ್ಲ. ನಾನು ಹೀಗೆ ಇರ್ತೀನಿ. ನಾನು ಯಾರನ್ನೂ ಇಂಪ್ರೆಸ್ ಮಾಡೋಕೆ ಬಂದಿಲ್ಲ. ಇಷ್ಟ ಇದ್ರೆ ಕಳಿಸಿ, ಇಲ್ದಿದ್ರೆ ಇಲ್ಲ. ಫಿಲ್ಟರ್ ಹಾಕ್ಕೊಂಡು ಇರಲ್ಲ’ ಎಂದರು ಮಂಜು.

ಇದನ್ನೂ ಓದಿ: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಜಡ್ಜ್ ಆಗಿ ಮಿಂಚಿದ ಸಂಗೀತಾ ಶೃಂಗೇರಿ

‘ಆಗ ವಿನಯ್ ಸಿಟ್ಟಿಗೆದ್ದರು. ವೇದಿಕೆಗೆ ಮರ್ಯಾದೆ ಇದೆ. ನಿನಗೆ ಇಷ್ಟ ಬಂದಹಾಗೆ ಮಾತಾಡೋಕೆ ಅಲ್ಲ ಈ ವೇದಿಕೆ ಇರೋದು. ಟಾಸ್ಕ್ ಮಾಡೋಕೆ ರೆಡಿ ಇಲ್ಲ ಎಂದರೆ ಹೊರಟುಬಿಡು’ ಎಂದರು. ಹೀಗೆ ಹೇಳುತ್ತಿದ್ದಂತೆ ಮಂಜು ಹೊರಟುಬಿಟ್ಟರು. ಅವರು ಹೋಗಿದ್ದು ನೋಡಿ ಎಲ್ಲಾ ಜಡ್ಜ್​ಗಳು ಶಾಕ್ ಆದರು. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us