‘ಅವರನ್ಯಾಕೆ ಮದುವೆಯಾದಿರಿ’ ಎಂಬ ಪ್ರಶ್ನೆಗೆ ಒಂದೇ ವಿಡಿಯೋ ಮೂಲಕ ಉತ್ತರಿಸಿದ ಅನುಶ್ರೀ
ಆ್ಯಂಕರ್ ಅನುಶ್ರೀ ಅವರು ಐಟಿ ಉದ್ಯೋಗಿ ರೋಶನ್ ಜೊತೆ ಮದುವೆ ಆದರು. ಈ ವಿವಾಹದ ಬಳಿಕ ಅವರು ಹಾಯಾಗಿ ಸುತ್ತಾಟ ಮಾಡುತ್ತಾ ಇದ್ದಾರೆ. ಅವರ ಹನಿಮೂನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈಗ ಅನುಶ್ರೀ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

ಯಾವುದೇ ಸೆಲೆಬ್ರಿಟಿ ವಿವಾಹ ನಡೆದರೂ ‘ಆ ಹೀರೋಗೆ ಅವಳು ಸರಿಯಾದ ಜೋಡಿಯಲ್ಲ’, ‘ಆ ನಟಿಗೆ ಇನ್ನೂ ಉತ್ತಮ ಹೀರೋ ಸಿಗುತ್ತಿದ್ದರೇನೋ’ ಎಂಬ ಮಾತುಗಳು ಕೇಳಿ ಬರೋದು ಸಾಮಾನ್ಯ. ಆ್ಯಂಕರ್ ಅನುಶ್ರೀ ಅವರು ವಿವಾಹ ಆದಾಗ ಇದೇ ರೀತಿಯ ಮಾತುಗಳು ಕೇಳಿ ಬಂದಿದ್ದಂತೂ ಸತ್ಯ. ರೋಶನ್ ಜೊತೆ ವಿವಾಹ ಆದಾಗ ಕೆಲವರು ಆ ಬಗ್ಗೆ ಕೊಂಕು ಮಾತನಾಡಿದ್ದೂ ಇದೆ ಮತ್ತು ಅನುಶ್ರೀ ಅವರು ಈ ಬಗ್ಗೆ ಯಾವುದೇ ಉತ್ತರ ನೀಡಿರಲಿಲ್ಲ. ಈಗ ಈ ಪ್ರಶ್ನೆಗೆ ಒಂದೇ ವಿಡಿಯೋ ಮೂಲಕ ಉತ್ತರಿಸಿದ್ದಾರೆ.
ಆ್ಯಂಕರ್ ಅನುಶ್ರೀ ಅವರು ಐಟಿ ಉದ್ಯೋಗಿ ರೋಶನ್ ಜೊತೆ ಮದುವೆ ಆದರು. ಈ ವಿವಾಹದ ಬಳಿಕ ಅವರು ಹಾಯಾಗಿ ಸುತ್ತಾಟ ಮಾಡುತ್ತಾ ಇದ್ದಾರೆ. ಅವರ ಹನಿಮೂನ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈಗ ಅನುಶ್ರೀ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೋಶನ್ ಅಡುಗೆ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಅನುಶ್ರೀ ಅವರಿಗೆ ರೋಶನ್ ಅವರು ಕೇರಳ ಪರಾಟ ಹಾಗೂ ಅದಕ್ಕೆ ಮೆಂತೆ ಸೊಪ್ಪಿನ ಪಲ್ಯದ ರೀತಿ ಮಾಡಿ ಅದಕ್ಕೆ ಮೊಟ್ಟೆಯನ್ನು ಒಡೆದು ಹಾಕಿದ್ದಾರೆ. ಅದನ್ನು ಬುರ್ಜಿ ರೀತಿಯಲ್ಲಿ ಸಿದ್ಧಪಡಿಸಿರೋದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಅನುಶ್ರೀ ಹಂಚಿಕೊಂಡ ವಿಡಿಯೋ
View this post on Instagram
ಪತಿಗೆ ಪತ್ನಿ ಅಡುಗೆ ಮಾಡಿ ಕೊಡೋದು ಸಾಮಾನ್ಯ. ಆದರೆ, ಪತ್ನಿಗೆ ಪತಿ ಅಡುಗೆ ಮಾಡಿ ಕೊಡುತ್ತಾರೆ ಎಂದರೆ ಅದನ್ನು ವಿಶೇಷ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಸೆಲೆಬ್ರಿಟಿ ವಲಯದಲ್ಲಿ ಇದು ಅಪರೂಪ. ಈ ಕಾರಣದಿಂದ ಒಳ್ಳೊಳ್ಳೆಯ ಅಡುಗೆಯನ್ನು ಮಾಡಿ ಕೊಡುವ ಪತಿ ಸಿಕ್ಕಿರುವುದರಿಂದ ಅನುಶ್ರೀಯನ್ನು ಅನೇಕರು ಲಕ್ಕಿ ಎಂದು ಕರೆದಿದ್ದಾರೆ. ಅಲ್ಲದೆ, ರೋಶನ್ ಎಷ್ಟು ಪ್ರೀತಿ ತೋರಿಸುತ್ತಾರೆ ಎಂಬುದನ್ನು ವಿಡಿಯೋದಲ್ಲಿ ತೋರಿಸಿದಂತೆ ಆಗಿದೆ.
ಇದನ್ನೂ ಓದಿ: ಅನುಶ್ರೀ ಹನಿಮೂನ್ ಫೋಟೋಗೆ ಬಂತು ಆ ವಿಶೇಷ ಕಮೆಂಟ್
ರೋಶನ್ ಅವರು ಕೊಡಗಿನವರು. ಅವರು ಒಳ್ಳೊಳ್ಳೆಯ ಅಡುಗೆಯನ್ನು ಮಾಡುವುದನ್ನು ಕಲಿತಿದ್ದಾರೆ ಎಂಬ ವಿಚಾರವನ್ನು ಮದುವೆ ದಿನವೇ ಅನುಶ್ರೀ ರಿವೀಲ್ ಮಾಡಿದ್ದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಅವರನ್ನು ಹೊಗಳುವ ಕೆಲಸವನ್ನು ಅನುಶ್ರೀ ಮಾಡಿದ್ದರು. ಈಗ ಹೊಸ ವಿಡಿಯೋದ ಮೂಲಕ ಈ ವಿಚಾರ ಖಚಿತಪಡಿಸಿದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



