ನಟ ರಣಬೀರ್ ಕಪೂರ್ (Ranbir Kapoor) ವೃತ್ತಿಜೀವನದ ಅತಿ ದೊಡ್ಡ ಸಿನಿಮಾವಾಗಿ ‘ಅನಿಮಲ್’ ಹೊರಹೊಮ್ಮಿದೆ. ವಿಶ್ವಾದ್ಯಂತ ಈ ಸಿನಿಮಾ 900 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಅನಿಮಲ್’ ಗಳಿಸಿದ್ದು ಬರೋಬ್ಬರಿ 556 ಕೋಟಿ ರೂಪಾಯಿ. ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಈ ಸಿನಿಮಾದಿಂದ ಸಖತ್ ಸುದ್ದಿಯಾದರು. ಚಿತ್ರಮಂದಿರದಲ್ಲಿ ಅಬ್ಬರಿಸಿದ ‘ಅನಿಮಲ್’ ಸಿನಿಮಾ (Animal Movie) ನಂತರ ಒಟಿಟಿಗೂ ಕಾಲಿಟ್ಟು ಧೂಳೆಬ್ಬಿಸಿತು. ಈಗ ಇದೇ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಾಣಲು ಸಜ್ಜಾಗಿದೆ. ಮಾರ್ಚ್ 17ರಂದು ಈ ಸಿನಿಮಾದ ಟಿಲಿವಿಷನ್ ಪ್ರೀಮಿಯರ್ (Animal television Premiere) ಆಗಲಿದೆ.
ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಎಲ್ಲ ವೇದಿಕೆಯಲ್ಲೂ ಬೇಡಿಕೆ ಇರುತ್ತದೆ. ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಭಾರಿ ಸದ್ದು ಮಾಡಿದ ‘ಅನಿಮಲ್’ ಸಿನಿಮಾದ ಹಿಂದಿ ವರ್ಷನ್ ಅನ್ನು ಟಿವಿಯಲ್ಲಿ ಪ್ರಸಾರ ಮಾಡಲು ‘ಸೋನಿ ಮ್ಯಾಕ್ಸ್’ ಮಾಹಿನಿ ಸಿದ್ಧವಾಗಿದೆ. ಮಾರ್ಚ್ 17ರಂದು ಸಂಜೆ 7 ಗಂಟೆಗೆ ಈ ಸಿನಿಮಾ ಪ್ರಸಾರ ಆಗಲಿದೆ. ಕಿರುತೆರೆಯ ಪ್ರೇಕ್ಷಕರು ‘ಅನಿಮಲ್’ ಸಿನಿಮಾ ನೋಡಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಟಿವಿಯಲ್ಲಿ ಮೊದಲ ಬಾರಿ ಪ್ರಸಾರ ಆಗುತ್ತಿರುವುದರಿಂದ ‘ಅನಿಮಲ್’ ಸಿನಿಮಾ ದಾಖಲೆ ಪ್ರಮಾಣದಲ್ಲಿ ಟಿಆರ್ಪಿ ಪಡೆದುಕೊಳ್ಳುವ ನಿರೀಕ್ಷೆ ಇದೆ. ಮಾರ್ಚ್ 17 ಭಾನುವಾರ ಆದ್ದರಿಂದ ಹೆಚ್ಚಿನ ಜನರು ಈ ಸಿನಿಮಾವನ್ನು ವೀಕ್ಷಿಸುವ ಸಾಧ್ಯತೆ ಇದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ಕೆಲವರು ‘ಅನಿಮಲ್’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದರು. ಅನೇಕ ಸೆಲೆಬ್ರಿಟಿಗಳು ಕೂಡ ಅಪಸ್ವರ ತೆಗೆದಿದ್ದರು. ಈಗ ಟಿವಿ ಪ್ರೇಕ್ಷಕರು ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಮಾತ್ರವಲ್ಲ ಒಟಿಟಿ ವೀಕ್ಷಣೆಯಲ್ಲೂ ದಾಖಲೆ ಬರೆದ ‘ಅನಿಮಲ್’ ಸಿನಿಮಾ
‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ತೃಪ್ತಿ ದಿಮ್ರಿ ಅವರಿಗೆ ಒಂದು ಚಿಕ್ಕ ಪಾತ್ರವಿದೆ. ಆ ಪಾತ್ರ ಸಣ್ಣದಾದರೂ ಅದರಿಂದ ಅವರಿಗೆ ಸಿಕ್ಕಿರುವ ಜನಪ್ರಿಯತೆ ತುಂಬ ದೊಡ್ಡದು. ಹಾಗೆಯೇ, ಬಾಬಿ ಡಿಯೋಲ್ ಅವರಿಗೂ ‘ಅನಿಮಲ್’ ಸಿನಿಮಾದಿಂದ ಜನಪ್ರಿಯತೆ ಹೆಚ್ಚಾಗಿದೆ. ಅನಿಲ್ ಕಪೂರ್ ನಟನೆಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ.
Ghosts se sirf ladne nahi, balki unhe kha jaane aa raha hai Animal!
Watch The World Television Premiere of Animal at 7 PM on 17th March, only on #SonyMax#Animal #SonyMax #Bollywood #DeewanaBanade pic.twitter.com/aLZh3J6g5B
— Sony MAX (@SonyMAX) March 11, 2024
ಈ ಸಿನಿಮಾದಲ್ಲಿ ಮಹಿಳೆಯರನ್ನು ಕೀಳಾಗಿ ತೋರಿಸಲಾಗಿದೆ. ಕೆಲವು ಅವಹೇಳನಕಾರಿ ದೃಶ್ಯ ಮತ್ತು ಸಂಭಾಷಣೆಗಳು ಇವೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಆ ರೀತಿಯ ಟೀಕೆಗಳಿಗೆ ಸಂದೀಪ್ ತಲೆ ಕೆಡಿಸಿಕೊಂಡಿಲ್ಲ. ಸದ್ಯಕ್ಕೆ ಅವರು ಪ್ರಭಾಸ್ ಜೊತೆಗಿನ ಹೊಸ ಸಿನಿಮಾದ ಕೆಲಸಗಳ ತಯಾರಿಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.