‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಕೊನೇ ಹಂತವನ್ನು ಸಮೀಪಿಸುತ್ತಿದೆ. ಇನ್ನು ಎರಡೇ ವಾರಗಳಲ್ಲಿ ಫಿನಾಲೆ ನಡೆಯಲಿದೆ. ಕೆಲವೇ ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. 12ನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಟಿ, ನಿರೂಪಕಿ ಅನುಪಮಾ ಗೌಡ (Anupama Gowda) ಅವರು ಔಟ್ ಆಗಿದ್ದಾರೆ. ಇಷ್ಟು ದಿನಗಳ ಕಾಲ ಫೈಟ್ ನೀಡಿದ್ದ ಅವರ ದೊಡ್ಮನೆ ಜರ್ನಿ ಈಗ ಅಂತ್ಯವಾಗಿದೆ. ಅನುಪಮಾ ಗೌಡ ಅವರು ಈ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 5’ರಲ್ಲಿ ಸ್ಪರ್ಧಿಸಿದ್ದರು. ಆ ಅನುಭವದ ಆಧಾರದಲ್ಲಿ 9ನೇ ಸೀಸನ್ನಲ್ಲೂ (BBK9) ಭಾಗವಹಿಸುವ ಚಾನ್ಸ್ ಅವರಿಗೆ ಸಿಕ್ಕಿತು. ಆದರೆ ಈ ಬಾರಿಯೂ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ.
ಈ ವಾರ ಮನೆಯಲ್ಲಿ ಇದ್ದದ್ದು 9 ಮಂದಿ ಮಾತ್ರ. ಆರ್ಯವರ್ಧನ್ ಗುರೂಜಿ, ಅಮೂಲ್ಯಾ ಗೌಡ, ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ಅರುಣ್ ಸಾಗರ್, ರಾಕೇಶ್ ಅಡಿಗ, ರೂಪೇಶ್ ಅಡಿಗ, ಅನುಪಮಾ ಗೌಡ, ದೀಪಿಕಾ ದಾಸ್ ನಡುವೆ ಹಣಾಹಣಿ ನಡೆದಿತ್ತು. ಆರ್ಯವರ್ಧನ್ ಗುರೂಜಿ ಕಳಪೆ ಪಟ್ಟ ಪಡೆದುಕೊಂಡರೆ, ರಾಕೇಶ್ ಅಡಿಗ ಅವರು ‘ಉತ್ತಮ’ ಪಟ್ಟ ಗಿಟ್ಟಿಸಿಕೊಂಡರು. ಅಂತಿಮವಾಗಿ ಅನುಪಮಾ ಗೌಡ ಅವರು ಎಲಿಮಿನೇಟ್ ಆದರು.
ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿ, ಅನುಪಮಾ ಗೌಡಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್
ಕಿಚ್ಚನ ಚಪ್ಪಾಳೆ ಪಡೆದ ದೀಪಿಕಾ ದಾಸ್:
ನಟಿ ದೀಪಿಕಾ ದಾಸ್ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇದರಿಂದ ಅವರಿಗೆ ಹೆಚ್ಚಿನ ಬಲ ಸಿಕ್ಕಂತೆ ಆಗಿದೆ. ‘ನನಗೆ ಇದು ವಿಶೇಷ ಕ್ಷಣ. ಸತತ ಎರಡನೇ ಬಾರಿಗೆ ನನಗೆ ಈ ಚಪ್ಪಾಳೆ ಸಿಕ್ಕಿದೆ’ ಎಂದು ದೀಪಿಕಾ ದಾಸ್ ಖುಷಿಪಟ್ಟಿದ್ದಾರೆ. ಅದೇ ರೀತಿ, ಅರುಣ್ ಸಾಗರ್ ಅವರ ಆಟಕ್ಕೂ ಕಿಚ್ಚ ಭೇಷ್ ಎಂದಿದ್ದಾರೆ.
ಇದನ್ನೂ ಓದಿ: Anupama Gowda: ಅಭಿಮಾನಿಗಳಿಗೆ ಇಷ್ಟವಾಗ್ತಿದೆ ಅನುಪಮಾ ಗೌಡ ಸಮತೋಲನದ ಆಟ
ಈ ಸೀಸನ್ನಲ್ಲಿ ಪ್ರವೀಣರು ಮತ್ತು ನವೀನರು ಎಂಬ ಕಾನ್ಸೆಪ್ಟ್ ಪರಿಚಯಿಸಲಾಯಿತು. ಈ ಹಿಂದಿನ ಸೀಸನ್ನಲ್ಲಿ ಭಾಗವಹಿಸಿದ್ದ ಅನುಭವಿ ಸ್ಪರ್ಧಿಗಳು ಪ್ರವೀಣರು. ಹೊಸ ಸ್ಪರ್ಧಿಗಳು ನವೀನರು. ನಟಿ ಅನುಪಮಾ ಗೌಡ ಅವರು ಪ್ರವೀಣರ ತಂಡದಲ್ಲಿ ದೊಡ್ಮನೆ ಸೇರಿಕೊಂಡಿದ್ದರು. ಆದರೆ ಅವರು ಅಂತಿಮ ಹಂತ ಸಮೀಪಿಸುವುದಕ್ಕೂ ಮುನ್ನವೇ ಔಟ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.