AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜುನ್ ಜನ್ಯ ಜನ್ಮದಿನ: ಗಾಯಕನ ಅವಳಿ ಎಂಬಂತೆ ನಟಿಸಿ ತೋರಿಸಿದ್ದ ರಾಕೇಶ್ ಪೂಜಾರಿ

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ 45ನೇ ಹುಟ್ಟುಹಬ್ಬ. ಆದರೆ ಅವರನ್ನು ಅನುಕರಿಸಿ ಸುದ್ದಿ ಆಗಿದ್ದ ರಾಕೇಶ್ ಪೂಜಾರಿ ಅವರ ನಿಧನ ಬೇಸರ ಮೂಡಿಸಿದೆ. ರಾಕೇಶ್ ಅವರು ‘ಸರಿಗಮಪ’ ವೇದಿಕೆ ಮೇಲೆ ಅರ್ಜುನ್ ಜನ್ಯ ಅವರನ್ನು ಅದ್ಭುತವಾಗಿ ಅನುಕರಿಸಿದ್ದರು.ಹೃದಯಾಘಾತದಿಂದ ನಿಧನರಾದ ರಾಕೇಶ್ ಅವರ ಸಾವು ಅರ್ಜುನ್ ಜನ್ಯ ಹಾಗೂ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.

ಅರ್ಜುನ್ ಜನ್ಯ ಜನ್ಮದಿನ: ಗಾಯಕನ ಅವಳಿ ಎಂಬಂತೆ ನಟಿಸಿ ತೋರಿಸಿದ್ದ ರಾಕೇಶ್ ಪೂಜಾರಿ
ರಾಕೇಶ್
ರಾಜೇಶ್ ದುಗ್ಗುಮನೆ
|

Updated on: May 13, 2025 | 9:04 AM

Share

ಖ್ಯಾತ ಗಾಯ ಅರ್ಜುನ್​ ಜನ್ಯ (Arjun Janya) ಇಂದು (ಮೇ 13) 45ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಇಂದು ಅವರು ಬರ್ತ್​ಡೇ ಸೆಲೆಬ್ರೇಟ್ ಮಾಡಿಕೊಳ್ಳೋ ಮೂಡ್​ನಲ್ಲಿ ಇಲ್ಲ. ಏಕೆಂದರೆ, ಅವರ ಅವಳಿ ಎಂಬಂತೆ ನಟಿಸಿ ತೋರಿಸಿದ್ದ ರಾಕೇಶ್ ಪೂಜಾರಿ ಅವರು ನಿಧನ ಹೊಂದಿದ್ದಾರೆ. ಅವರ ಸಾವು ಅಭಿಮಾನಿಗಳಿಗೆ ಹಾಗೂ ಅರ್ಜುನ್ ಜನ್ಯಗೆ ಬೇಸರ ಮೂಡಿಸಿದೆ. ಈ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರು ಅರ್ಜುನ್ ಜನ್ಯ ಅವರನ್ನು ಅನುಕರಿಸಿ ತೋರಿಸಿದ್ದರ ವಿಡಿಯೋ ಈ ಸ್ಟೋರಿಯಲ್ಲಿ ಇದೆ.

ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರು ‘ಸರಿಗಮಪ’ ವೇದಿಕೆ ಮೇಲೆ ಜಡ್ಜ್​ ಸ್ಥಾನದಲ್ಲಿ ಕುಳಿತಿದ್ದಾರೆ. ಇತ್ತೀಚೆಗೆ ‘ಸರಿಗಮಪ’ ವೇದಿಕೆ ಮೇಲೆ ಒಂದು ಸಣ್ಣ ಡ್ರಾಮಾ ಮಾಡಲಾಯಿತು. ‘ಕಾಮಿಡಿ ಕಿಲಾಡಿಗಳು’ ಸ್ಪರ್ಧಿಗಳು ಸೇರಿ ಈ ಕಿಟ್ ಮಾಡಿದ್ದರು. ಇದರಲ್ಲಿ ಅರ್ಜುನ್ ಜನ್ಯ ಪಾತ್ರದಲ್ಲಿ ರಾಕೇಶ್ ಪೂಜಾರಿ ಕಾಣಿಸಿಕೊಂಡಿದ್ದರು. ಸೇಮ್ ಟು ಸೇಮ್ ಅವರದ್ದೇ ರೀತಿಯಲ್ಲಿ ಕಾಣಿಸಿಕೊಂಡು ಮಿಂಚಿದ್ದರು.

ಇದನ್ನೂ ಓದಿ
Image
ರಾಜ್​ಕುಮಾರ್ ಸದಾ ಬಿಳಿ ಪಂಚೆ, ಶರ್ಟ್​ನಲ್ಲೇ ಇರುತ್ತಿದ್ದರೇಕೆ?
Image
ನನ್ನ ತಂದೆ ಪಾಕಿಸ್ತಾನದವರು ಎಂದಿದ್ದ ಶಾರುಖ್ ಖಾನ್; ಈ ಕಾರಣಕ್ಕೆ ಮೌನ?
Image
‘ಕೂಲಿ’ ಸಿನಿಮಾದ ಬಹುತೇಕ ಶೂಟ್​ನ ಬಾಡಿ ಡಬಲ್​ ಮೂಲಕವೇ ಮುಗಿಸಿದ ನಿರ್ದೇಶಕ
Image
ಕಲರ್ಸ್​​ ಧಾರಾವಾಹಿಯಲ್ಲಿ ಗೌತಮಿ ಜಾಧವ್; ಪ್ರೋಮೋ ಮೂಲಕ ಬಿಗ್ ಸರ್​ಪ್ರೈಸ್

ರಾಕೇಶ್ ಪೂಜಾರಿ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು ‘ಕಾಮಿಡಿ ಕಿಲಾಡಿಗಳು’ ಮೂಲಕ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ, ಅವರಿಗೆ ನಟನೆ ಕರಗತ ಆಗಿದೆ. ಹೀಗಾಗಿ ಅರ್ಜುನ್ ಜನ್ಯ ರೀತಿಯೇ ಕಾಣಿಸಿಕೊಂಡು ನಟಿಸೋಕೆ ಸುಲಭವಾಯಿತು. ‘ಸರಿಗಮಪ’ ವೇದಿಕೆ ಮೇಲೆ ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಸೇಮ್ ಟು ಸೇಮ್ ಮಾಡಿ ತೋರಿಸಿದ್ದರು.

ಇಲ್ಲಿ ಗಮನಿಸಬೇಕಾದ ವಿಚಾರ ಮತ್ತೊಂದು ಇದೆ. ಸದ್ಯ ಅರ್ಜುನ್ ಜನ್ಯ ಅವರು ‘45’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಚಾರವನ್ನು ಅವರು ಮಾಡುತ್ತಿದ್ದಾರೆ. ‘ಸರಿಗಮಪ’ ವೇದಿಕೆ ಮೇಲೂ ಅವರು ‘45’ ಚಿತ್ರದ ಪ್ರಚಾರ ಮಾಡುತ್ತಿದ್ದರು ಎಂಬುದನ್ನು ರಾಕೇಶ್ ಅವರು ತೋರಿಸಿದ್ದರು. ಈ ಸ್ಕಿಟ್ ಸಖಥ್ ಫನ್ ಆಗಿದೆ.

ಇದನ್ನೂ ಓದಿ: ತಂಗಿಯ ಜೊತೆ ರಾಕೇಶ್ ಪೂಜಾರಿ ಕೊನೆಯ ರೀಲ್ಸ್ ನೋಡಿ; ಎಷ್ಟು ಖುಷಿಯಾಗಿದ್ರು

ರಾಕೇಶ್ ಪೂಜಾರಿ ಅವರು ಮೇ 12ರಂದು ನಿಧನ ಹೊಂದಿದ್ದಾರೆ. ನಿಟ್ಟೆಯಲ್ಲಿ ಗೆಳೆಯನ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ಅವರು ಭರ್ಜರಿ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದರು. ಆ ಬಳಿಕ ಅವರಿಗೆ ಹೃದಯಾಘಾತ ಆಗಿತ್ತು. ಅವರನ್ನು ಬದುಕುಳಿಸುವ ಪ್ರಯತ್ನ ನಡೆದರೂ ಯಾವುದೇ ಪ್ರಯೋಜನ ಆಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.