AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜೇಶ್ ಕೃಷ್ಣನ್ ತಾಯಿಯ ಧ್ವನಿಯಲ್ಲಿ ಹಾಡು ಕೇಳಿ; ನೀವು ಕಳೆದು ಹೋಗ್ತೀರಾ

ಸರೆಗಮಪ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಅವರ ತಾಯಿ ಮೀರಾ ಕೃಷ್ಣನ್ ಅವರು ಅದ್ಭುತವಾದ ಗಾಯನ ಪ್ರದರ್ಶನ ನೀಡಿದ್ದಾರೆ. ಮೀರಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದುಷಿಯಾಗಿದ್ದು, ರಾಜೇಶ್ ಅವರಿಗೆ ಮೊದಲ ಗುರುವಾಗಿದ್ದಾರೆ. ಅವರ ಗಾಯನ ಕೇಳಿ ಎಲ್ಲರೂ ಭಾವುಕರಾಗಿದ್ದಾರೆ. ರಾಜೇಶ್ ಅವರು ತಮ್ಮ ತಾಯಿಯ ಧ್ವನಿ ಮತ್ತು ಸಂಗೀತ ಪ್ರತಿಭೆಗೆ ಭಾವುಕರಾಗಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ರಾಜೇಶ್ ಕೃಷ್ಣನ್ ತಾಯಿಯ ಧ್ವನಿಯಲ್ಲಿ ಹಾಡು ಕೇಳಿ; ನೀವು ಕಳೆದು ಹೋಗ್ತೀರಾ
ರಾಜೇಶ್ ಕೃಷ್ಣನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 12, 2025 | 11:43 AM

Share

ರಾಜೇಶ್ ಕೃಷ್ಣನ್ (Rajesh Krishnan) ಅವರು ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಅವರು ಹಲವು ರಿಯಾಲಿಟಿ ಶೋಗಳಿಗೆ ಜಡ್ಜ್​ ಸ್ಥಾನದಲ್ಲಿ ಕುಳಿತಿದ್ದರು. ಆದರೆ, ‘ಸರಿಗಮಪ’ ಅವರ ಫೇವರಿಟ್ ಶೋ ಎನಿಸಿಕೊಂಡಿದೆ. ಈ ವೇದಿಕೆ ಮೇಲೆ ಅವರು ಈ ಬಾರಿ ತಾಯಿ ಮೀರಾ ಕೃಷ್ಣನ್ ಅವರನ್ನು ಕರೆದುಕೊಂಡು ಬಂದಿದ್ದರು. ಅವರ ತಾಯಿಯ ಧ್ವನಿಯಲ್ಲಿ ಹಾಡು ಕೇಳಿ ಎಲ್ಲರೂ ಕಳೆದುಹೋಗಿದ್ದಾರೆ. ಈ ವಯಸ್ಸಿನಲ್ಲೂ ಅಷ್ಟು ಅದ್ಭುತವಾಗಿ ಹಾಡು ಹೇಳಿದರು ಮೀರಾ ಕೃಷ್ಣನ್.

ರಾಜೇಶ್ ಕೃಷ್ಣನ್ ಹಾಗೂ ಮೀರಾ ಕೃಷ್ಣನ್ ವೇದಿಕೆ ಮೇಲೆ ಇದ್ದರು. ವಿಜಯ್ ಪ್ರಕಾಶ್ ಅವರು ಕುಳಿತಲ್ಲೇ ಒಂದು ಮನವಿ ಮಾಡಿಕೊಂಡರು. ‘ಯಾವುದಾದರೂ ಒಂದು ಹಾಡಿನ ಲೈನ್ ಹೇಳಿ’ ಎಂದು ಕೇಳಿದರು. ‘ಪೂರ್ತಿ ಹಾಡ್ತೀನಿ’ ಎಂದು ಹೇಳಿದ ಮೀರಾ ಅವರು, ‘ಕಂಡೇ ನಾ ಗೋವಿಂದನಾ..’ ಹಾಡನ್ನು ಶಾಸ್ತ್ರೀಯ ಬದ್ಧವಾಗಿ ಹಾಡಿ ಮುಗಿಸಿದ್ದಾರೆ. ಇದನ್ನು ಕೇಳಿ ಅನೇಕರು ಕಳೆದುಹೋಗಿದ್ದಾರೆ. ರಾಜೇಶ್ ಅವರಿಗೆ ಇಷ್ಟೊಂದು ಸುಮಧುರ ಧ್ವನಿ ತಾಯಿಯಿಂದಲೇ ಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ
Image
‘ಸದಾ ಹೃದಯದಲ್ಲಿರುತ್ತೀರಿ’; ರಾಕೇಶ್ ಸಾವಿಗೆ ರಕ್ಷಿತಾ ಭಾವುಕ ಪೋಸ್ಟ್
Image
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Image
‘ಕಾಂತಾರ: ಚಾಪ್ಟರ್ 1’ ಶೂಟ್ ಮುಗಿಸಿ ಬಂದಿದ್ದ ರಾಕೇಶ್ ಪೂಜಾರಿ
Image
ವಿಧಿ ಕ್ರೂರ; ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ
View this post on Instagram

A post shared by Zee Kannada (@zeekannada)

ಅಮ್ಮನೇ ಮೊದಲ ಗುರು

ಮೀರಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ಆಗಿದ್ದಾರೆ. ಆಲ್ ಇಂಡಿಯಾ ರೇಡಿಯೋ ಆರ್ಟಿಸ್ಟ್ ಕೂಡ ಹೌದು. ಕರ್ನಾಟಕದ ಹಲವಾರು ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅವರೇ ರಾಜೇಶ್ ಕೃಷ್ಣನ್ ಅವರಿಗೆ ಮೊದಲ ಗುರು. ಅಮ್ಮ ಹಾಡುವಾಗ ರಾಜೇಶ್ ಅವರು ತಂಬೂರಿ ನುಡಿಸುತ್ತಿದ್ದರು. ಅಮ್ಮನ ಹಾಡು ರಾಜೇಶ್ ಮೇಲೆ ಸಾಕಷ್ಟು ಪರಿಣಾಮ ಬೀರಿತು.

ಇದನ್ನೂ ಓದಿ: ರಾಜೇಶ್ ಕೃಷ್ಣನ್ ಬಗ್ಗೆ ಎಸ್​​ಪಿಬಿಗೆ ಇತ್ತು ವಿಶೇಷ ಹೆಮ್ಮೆ

12 ವರ್ಷ ಬಿಟ್ಟು ಜನಿಸಿದ್ದರು..

ಮೀರಾ ವಿವಾಹ ಆಗಿ 12 ವರ್ಷಗಳ ಬಳಿಕ ರಾಜೇಶ್ ಕೃಷ್ಣನ್ ಹುಟ್ಟಿದರು. ಹೆಣ್ಣು ಹುಟ್ಟಿದ್ದರೆ ರಾಜೇಶ್ವರಿ ಎಂದು ಹೆಸರು ಇಡಲು ಅವರು ಬಯಸಿದ್ದರು. ಆದರೆ, ಹುಡುಗ ಹುಟ್ಟಿದ್ದರಿಂದ ರಾಜೇಶ್ ಎಂದು ಹೆಸರು ಇಟ್ಟರು. ರಾಜೇಶ್ ಕೃಷ್ಣನ್ ಅವರು ಎಸ್​ಪಿಬಿ ಅವರ ದೊಡ್ಡ ಅಭಿಮಾನಿಗಳು. ಎಸ್​ಪಿಬಿಯನ್ನು ಆರಾಧಿಸುತ್ತಾರೆ. ಅವರು ವೇದಿಕೆ ಮೇಲೆ ತಾಯಿಯನ್ನು ಕಂಡು ಈಗ ಭಾವುಕರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.