‘ನನಗೆ ಅನ್ನ ಹಾಕುವ ಯೋಗ್ಯತೆ ನಿಮಗಿಲ್ಲ’; ಆರ್ಯವರ್ಧನ್​ಗೆ ಹೆಚ್ಚಿತು ಅಹಂಕಾರ

ಆರ್ಯವರ್ಧನ್ ಅವರು ಒಟಿಟಿ ಸೀಸನ್​ನಲ್ಲಿ ಏನೂ ತಿಳಿಯದ ರೀತಿಯಲ್ಲಿದ್ದರು. ಒಟಿಟಿ ಸೀಸನ್​ನ ಕೊನೆಯ ವಾರದಿಂದ ಅವರು ನಿಧಾನವಾಗಿ ಬದಲಾಗುತ್ತಾ ಬಂದರು. ಟಿವಿ ಸೀಸನ್​ಗೆ ಬಂದ ನಂತರದಲ್ಲಿ ಅವರು ಸಂಪೂರ್ಣವಾಗಿ ಬದಲಾದರು.

‘ನನಗೆ ಅನ್ನ ಹಾಕುವ ಯೋಗ್ಯತೆ ನಿಮಗಿಲ್ಲ’; ಆರ್ಯವರ್ಧನ್​ಗೆ ಹೆಚ್ಚಿತು ಅಹಂಕಾರ
ಆರ್ಯವರ್ಧನ್
Edited By:

Updated on: Oct 04, 2022 | 2:35 PM

ಒಟಿಟಿ ಸೀಸನ್​ನಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಮುಗ್ಧನಾಗಿ ಗುರುತಿಸಿಕೊಂಡಿದ್ದರು. ಎಲ್ಲರಿಗೂ ಅವರು ಮಗುವಿನ ರೀತಿಯಲ್ಲಿ ಕಾಣುತ್ತಿದ್ದರು. ಆದರೆ, ಟಿವಿ ಸೀಸನ್​ನಲ್ಲಿ ಅವರ ಗುಣ ಬದಲಾಗಿದೆ. ತಾವೇ ಮೇಲು ಎಂಬ ಅಹಂಕಾರ ಅವರನ್ನು ಹೊಕ್ಕಂತಿದೆ. ಮನೆ ಮಂದಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಪದೇಪದೇ ಸಾಬೀತಾಗುತ್ತಿದೆ. ಸೆಪ್ಟೆಂಬರ್ 3ರ ಎಪಿಸೋಡ್​ನಲ್ಲಿ ಆರ್ಯವರ್ಧನ್ ವರ್ತನೆ ಮಿತಿಮೀರಿದೆ. ಅವರು ನಡೆದುಕೊಂಡ ರೀತಿಗೆ ಮನೆ ಮಂದಿ ಬೇಸರಗೊಂಡಿದ್ದಾರೆ. ಆರ್ಯವರ್ಧನ್ ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಆರ್ಯವರ್ಧನ್ ಅವರು ಒಟಿಟಿ ಸೀಸನ್​ನಲ್ಲಿ ಏನೂ ತಿಳಿಯದ ರೀತಿಯಲ್ಲಿದ್ದರು. ಒಟಿಟಿ ಸೀಸನ್​ನ ಕೊನೆಯ ವಾರದಿಂದ ಅವರು ನಿಧಾನವಾಗಿ ಬದಲಾಗುತ್ತಾ ಬಂದರು. ಟಿವಿ ಸೀಸನ್​ಗೆ ಬಂದ ನಂತರದಲ್ಲಿ ಅವರು ಸಂಪೂರ್ಣವಾಗಿ ಬದಲಾದರು. ಅಡುಗೆ ಕೋಣೆಯನ್ನೇ ತಮ್ಮ ಪ್ರಪಂಚ ಮಾಡಿಕೊಂಡರು. ಎಂತಹ ಟಾಸ್ಕ್ ನೀಡಿದರೂ ಆರ್ಯವರ್ಧನ್ ಅಡುಗೆ ಮಾಡುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ಇದಕ್ಕೆ ಮನೆಯವರು ಮೆಚ್ಚುಗೆ ಸೂಚಿಸಿದ್ದೂ ಇದೆ. ಇದರಿಂದ ಆರ್ಯವರ್ಧನ್ ಹಿಗ್ಗಿದ್ದಾರೆ. ಈಗ ನೆಗೆಟಿವ್ ಕಮೆಂಟ್ ಸ್ವೀಕರಿಸಲು ಅವರು ರೆಡಿ ಇಲ್ಲ.

ಇದನ್ನೂ ಓದಿ
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ
Bigg Boss Kannada Season 9: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡುವ 8 ಮಂದಿ ಇವರೇ..!
‘ಬಿಗ್ ಬಾಸ್ ಕನ್ನಡ ಸೀಸನ್ 9’:​ ಮನೆ ಸೇರುವ 18 ಸ್ಪರ್ಧಿಗಳ ಹೆಸರು ಲೀಕ್? ಇಲ್ಲಿದೆ ಫುಲ್ ಲಿಸ್ಟ್
‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್​ಗೆ ರೆಡಿ ಆಯ್ತು ದೊಡ್ಮನೆ; ಮನೆಯಲ್ಲಿ ಏನೇನು ಬದಲಾವಣೆ?

ಸೆಪ್ಟೆಂಬರ್ 3ರ ಎಪಿಸೋಡ್​ನಲ್ಲಿ ಎಲ್ಲರಿಗೂ ಒಂದು ಟಾಸ್ಕ್​ ನೀಡಲಾಗಿತ್ತು. ಇದರ ಪ್ರಕಾರ ಒಂದು ತಕ್ಕಡಿ ಇಡಲಾಗಿತ್ತು. ಒಂದು ಕಡೆ ಸ್ಪರ್ಧಿ ಕೂತರೆ ಮತ್ತೊಂದು ಕಡೆ ಕೆಟ್ಟ ಗುಣಗಳು ಬರೆದುಕೊಂಡಿರುವ ಚೀಲವನ್ನು ಹಾಕಬೇಕು. ಸ್ವಾರ್ಥ, ಅಹಂಕಾರ ಎಂಬಿತ್ಯಾದಿ ಕೆಟ್ಟ ಗುಣಗಳು ಗುರೂಜಿಯಲ್ಲಿದೆ ಎಂಬುದನ್ನು ಮನೆ ಮಂದಿ ಹೇಳಿದರು. ಆದರೆ, ಇದನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಆ ರೀತಿ ಗುಣ ಇದೆ ಎಂದು ಹೇಳಿದವರದ್ದೇ ತಪ್ಪು ಎಂದು ವಾದ ಮುಂದಿಟ್ಟರು.


‘ನಾನು ಕೆಟ್ಟವನು ಎಂದು ಎಲ್ಲರೂ ಹೇಳ್ತಿದ್ದೀರಾ. ಆ ಗುಣ ನನ್ನಲ್ಲಿಲ್ಲ. ಹೇಳಿದವರಲ್ಲೇ ಇದೆ. ನಿತ್ಯ ಅಡುಗೆ ಬೇಯಿಸಿ ಹಾಕಿದ್ದಕ್ಕೆ ಒಳ್ಳೆಯ ಬಹುಮಾನವನ್ನೇ ನೀಡಿದಿರಿ. ಇನ್ನು ನಾನು ಅಡುಗೆ ಮಾಡಲ್ಲ. ಆಗ ಏನು ಮಾಡ್ತೀರಿ ನೋಡೋಣ’ ಎಂಬಿತ್ಯಾದಿ ಅಹಂಕಾರದ ಮಾತುಗಳನ್ನು ಗುರೂಜಿ ಆಡಿದರು. ಇದು ಸೆಪ್ಟೆಂಬರ್ 4ರಂದೂ ಮುಂದುವರಿದಿದೆ. ಗುರೂಜಿ ಅವರು ಊಟ ಬಿಟ್ಟು, ಮನೆ ಮಂದಿ ವಿರುದ್ಧ ಕೂಗಾಡಿದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ನನಗೆ ಅನ್ನ ಹಾಕುವ ಯೋಗ್ಯತೆ ನಿಮಗಿಲ್ಲ, ಪುರಾಣ ಮಾತನಾಡೋಕೆ ಬರ್ತೀರಾ’ ಎಂದು ಆರ್ಯವರ್ಧನ್ ಕೂಗಾಡಿದ್ದಾರೆ.