
ಬಿಗ್ ಬಾಸ್ (Bigg Boss Kannada 12) ವೀಕ್ಷಕರು ಪ್ರತಿ ವಾರಂತ್ಯಕ್ಕಾಗಿ ಕಾದಿರುತ್ತಾರೆ. ಕಿಚ್ಚ ಸುದೀಪ್ (Kichcha Sudeep) ಅವರು ಇಡೀ ವಾರದ ಆಗು-ಹೋಗುಗಳ ಬಗ್ಗೆ ಏನು ಅಭಿಪ್ರಾಯ ತಿಳಿಸುತ್ತಾರೆ ಎಂಬ ಕೌತುಕ ಎಲ್ಲರಲ್ಲೂ ಇರುತ್ತದೆ. ವೀಕ್ಷಕರು ಮಾತ್ರವಲ್ಲದೇ ಸ್ಪರ್ಧಿಗಳು ಕೂಡ ಕಾತರದಿಂದ ಕಾದಿರುತ್ತಾರೆ. ವೀಕೆಂಡ್ ಸಂಚಿಕೆಗೂ ಮುನ್ನ ‘ಕಲರ್ಸ್ ಕನ್ನಡ’ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದೆ. ‘ಈ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತಾಡ್ಬೇಕಿರೋ ಗರ್ಮಾಗರಂ ವಿಷ್ಯಗಳು ಯಾವುದು’ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅಶ್ವಿನಿ ಗೌಡ (Ashwini Gowda) ಬಗ್ಗೆ ತಮಗೆ ಇರುವ ಅಸಮಾಧಾನವನ್ನು ವೀಕ್ಷಕರು ಹೊರಹಾಕಿದ್ದಾರೆ.
ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ತುಂಬಾ ಡಾಮಿನೇಟಿಂಗ್ ಆಗಿದ್ದಾರೆ. ಎಲ್ಲರನ್ನೂ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಅದರಿಂದಾಗಿ ಕೆಲವರಿಗೆ ಕಿರಿಕಿರಿ ಆಗುತ್ತಿದೆ. ಅಲ್ಲದೇ ಬಿಗ್ ಬಾಸ್ ಮನೆಯ ಕೆಲವು ನಿಯಮಗಳನ್ನು ಕೂಡ ಅಶ್ವಿನಿ ಗೌಡ ಅವರು ಸರಿಯಾಗಿ ಪಾಲಿಸುತ್ತಿಲ್ಲ. ಹಾಗಾಗಿ ವೀಕ್ಷಕರು ಗರಂ ಆಗಿದ್ದಾರೆ.
‘ಕಳಪೆ ಕೊಟ್ಟಾಗ ಅಶ್ವಿನಿ ಅವರು ರೂಲ್ಸ್ ಫಾಲೋ ಮಾಡ್ಲಿಲ್ಲ. ಅದಕ್ಕೆ ಸ್ವಲ್ಪ ಕಳೆದ ಸೀಸನ್ ಥರ ಮಾಡಿ ಸುದೀಪ್ ಅಣ್ಣ ಕ್ಲಾಸ್ ತಗೊಂಡ್ರೆ ಸ್ವಲ್ಪ ಚೆನ್ನಾಗಿರುತ್ತೆ’ ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಅಶ್ವಿನಿ ಗೌಡ ಅವರ ದುರಹಂಕಾರ ಇನ್ನೂ ಕಡಿಮೆ ಆಗಿಲ್ಲ. ಸ್ವಲ್ಪ ಇಳಿಸಬೇಕು’ ಎಂಬ ಕಮೆಂಟ್ ಕೂಡ ಬಂದಿದೆ. ಸುದೀಪ್ ಅವರು ಈ ಬಗ್ಗೆ ಮಾತನಾಡುತ್ತಾರಾ ಎಂಬುದನ್ನು ತಿಳಿಯಲು ವೀಕೆಂಡ್ ಸಂಚಿಕೆ ನೋಡಬೇಕು.
ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ಅವಹೇಳನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ಅದನ್ನು ಕೂಡ ವೀಕ್ಷಕರು ಖಂಡಿಸುತ್ತಿದ್ದಾರೆ. ನಾಲಿಗೆ ಹರಿಬಿಟ್ಟಿರುವ ಕಾಕ್ರೋಚ್ ಸುಧಿ ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ವೀಕ್ಷಕರು ನಿರೀಕ್ಷಿಸಿದ್ದಾರೆ. ಅಶ್ವಿನಿ ಗೌಡ ಅವರ ಹೆಚ್ಚು ಇಂಗ್ಲಿಷ್ ಮಾತನಾಡುತ್ತಾರೆ. ಆ ಬಗ್ಗೆಯೂ ಸುದೀಪ್ ಪ್ರಶ್ನಿಸಬೇಕು ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್: ರಕ್ಷಿತಾ ಕುರಿತು ಅವಾಚ್ಯ ಪದ ಬಳಕೆ, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
‘ನಿಸ್ವಾರ್ಥದಿಂದ ಆಟ ಆಡಿದ ಸೂರಜ್ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ’ ಸಿಗಬೇಕು ಎಂದು ಕೆಲವು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಎಲ್ಲರ ಫೇವರಿಟ್ ಆಗುತ್ತಿದ್ದಾರೆ. ಅವರ ಕಾಮಿಡಿಗೆ ಮನೆ ಮಂದಿ ನಕ್ಕು ಹಗುರಾಗುತ್ತಿದ್ದಾರೆ. ವೀಕ್ಷಕರು ಕೂಡ ಗಿಲ್ಲಿ ಕಾಮಿಡಿಗೆ ಮನ ಸೋತಿದ್ದಾರೆ. ಅವರೇ ಗೆಲ್ಲೋದು ಎಂಬುದು ಹಲವರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.