ಬಿಗ್ ಬಾಸ್ 20: ಹಳೆಯ ದಾಖಲೆ ಮುರಿದ ಸಲ್ಮಾನ್ ಖಾನ್ ಶರ್ಟ್‌ಲೆಸ್ ಸಂಚಿಕೆ

ಇತ್ತೀಚಿನ ಬಿಗ್ ಬಾಸ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ಶರ್ಟ್‌ಲೆಸ್ ಆಗಿ ಕಾಣಿಸಿಕೊಂಡು ಗುಡುಗಿದ್ದರು. ಅದರ ಪರಿಣಾಮವಾಗಿ ಭರ್ಜರಿ ಟಿಆರ್​ಪಿ ಸಿಕ್ಕಿದೆ. ಈ ಮೊದಲಿನ ಅನೇಕ ದಾಖಲೆಗಳನ್ನು ಈ ಸಂಚಿಕೆ ಮುರಿದಿದೆ. ವೀಕ್ಷಕರ ವಲಯದಲ್ಲಿ ಸಲ್ಮಾನ್ ಖಾನ್ ಅವರಿಗೆ ಯಾವ ಮಟ್ಟದ ಕ್ರೇಜ್ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಬಿಗ್ ಬಾಸ್ 20: ಹಳೆಯ ದಾಖಲೆ ಮುರಿದ ಸಲ್ಮಾನ್ ಖಾನ್ ಶರ್ಟ್‌ಲೆಸ್ ಸಂಚಿಕೆ
Salman Khan
Image Credit source: colorstv

Updated on: Sep 23, 2026 | 8:39 PM

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ನಿರೂಪಣೆ ಮಾಡುವ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಹೈ-ವೋಲ್ಟೇಜ್ ಡ್ರಾಮಾಗೆ ಕೊರತೆಯೇ ಇರುವುದಿಲ್ಲ. ಇತ್ತೀಚೆಗೆ ‘ಬಿಗ್ ಬಾಸ್ ಸೀಸನ್ 20’ ರಿಯಾಲಿಟಿ ಶೋ ಅತ್ಯಂತ ಗ್ರ್ಯಾಂಡ್ ಆಗಿ ಆರಂಭವಾಗಿದ್ದು, ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಬಾರಿಯ ಸೀಸನ್ ಪ್ರಸಾರವಾದ ಕೆಲವೇ ದಿನಗಳಲ್ಲಿ ಈ ಮೊದಲಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಆ ಮೂಲಕ ಇತ್ತೀಚಿನ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿ ಇದು ಹೊರಹೊಮ್ಮಿದೆ. ಅದಕ್ಕೆ ಕಾರಣ ಆಗಿರುವುದು ಸಲ್ಮಾನ್ ಖಾನ್ ಅವರ ಶರ್ಟ್‌ಲೆಸ್ ಸಂಚಿಕೆ.

ವರದಿಗಳ ಪ್ರಕಾರ, ‘ಬಿಗ್ ಬಾಸ್ 20’ ಶೋನ ಇತ್ತೀಚಿನ ಸಂಚಿಕೆಯು ಭರ್ಜರಿ 2.1 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕ್ರಿಕೆಟ್ ಪಂದ್ಯಾವಳಿಗಳನ್ನು ಹೊರತುಪಡಿಸಿ, ಮನರಂಜನಾ ಕಾರ್ಯಕ್ರಮಗಳ ಪೈಕಿ ಇಷ್ಟು ವೀಕ್ಷಕರ ಸಂಖ್ಯೆಯನ್ನು ಪಡೆದ ಈ ಶೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದು ಸಲ್ಮಾನ್ ಖಾನ್ ಅವರ ಅದ್ಭುತ ಮಾಸ್ ಅಪೀಲ್ ಹಾಗೂ ಭಾರತೀಯ ಕಿರುತೆರೆಯಲ್ಲಿ ಅವರಿಗಿರುವ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಟ್ರೋಲಿಗರಿಗೆ ಸಲ್ಮಾನ್ ಶರ್ಟ್‌ಲೆಸ್ ತಿರುಗೇಟು:

ಈ ಬಾರಿಯ ಶೋನಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗಿದ್ದು ಸಲ್ಮಾನ್ ಖಾನ್ ಅವರ ರೌದ್ರಾವತಾರ. ತಮಗೆ ಹಾಗೂ ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ ಸೇರಿದಂತೆ ಇತರರಿಗೆ ನಿರಂತರವಾಗಿ ಟ್ರೋಲ್ ಮಾಡುತ್ತಿದ್ದವರಿಗೆ ಸಲ್ಮಾನ್ ಖಾನ್ ವೇದಿಕೆಯಲ್ಲೇ ಶರ್ಟ್ ಬಿಚ್ಚಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಟ್ರೋಲಿಗರಿಗೆ ತರಾಟೆ ತೆಗೆದುಕೊಂಡ ಈ ವಿಡಿಯೋ ಕ್ಲಿಪ್‌ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿವೆ.

ಸೀಸನ್‌ಗೆ 120 ಕೋಟಿ ಸಂಭಾವನೆ:

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಬಿಗ್ ಬಾಸ್ ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್, ಭಾರತೀಯ ಕಿರುತೆರೆಯಲ್ಲೇ ಅತ್ಯಂತ ದುಬಾರಿ ನಿರೂಪಕ ಎನಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ‘ಬಿಗ್ ಬಾಸ್ 20’ ಸೀಸನ್‌ಗಾಗಿ ಸಲ್ಮಾನ್ ಖಾನ್ ಅವರು ಬರೋಬ್ಬರಿ 120 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ವಾರ್ನಿಂಗ್ ಕೊಟ್ಟ ಬಳಿಕ ಕತ್ರಿನಾಗೆ ಕ್ಷಮೆ ಕೇಳಿದ ಪಾಕಿಸ್ತಾನಿ ಆರ್‌ಜೆ

ದೊಡ್ಡ ಮಟ್ಟದ ಓಪನಿಂಗ್ ಪಡೆಯುವ ಮೂಲಕ ‘ಬಿಗ್ ಬಾಸ್ 20’ ಕಾರ್ಯಕ್ರಮ ಭಾರತದ ನಂಬರ್ ಒನ್ ಎಂಟರ್‌ಟೇನ್‌ಮೆಂಟ್ ಬ್ರಾಂಡ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆರಂಭದಲ್ಲೇ ಈ ಮಟ್ಟದ ಹೈಪ್ ಸೃಷ್ಟಿಸಿರುವುದರಿಂದ, ಮುಂದಿನ ದಿನಗಳಲ್ಲಿ ಈ ಸೀಸನ್ ಇನ್ನಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us