‘ಅವರನ್ನು ತುಳಿದು ನೀನು ಮುಂದೆ ಹೋಗಬೇಕು’: ಗೌತಮಿ ಜಾದವ್​ಗೆ ಗಂಡನ ಸಲಹೆ

|

Updated on: Jan 02, 2025 | 11:02 PM

‘ಬಿಗ್​ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಈ ವಾರ ಫ್ಯಾಮಿಲಿ ಸಂಚಿಕೆಗಳು ಪ್ರಸಾರ ಆಗುತ್ತಿವೆ. ಸ್ಪರ್ಧಿಗಳ ಕುಟುಂಬದವರು ದೊಡ್ಮನೆಯ ಒಳಗೆ ಬಂದಿದ್ದಾರೆ. ಹೊರಗಿನಿಂದ ಬಿಗ್ ಬಾಸ್ ಶೋ ನೋಡಿಕೊಂಡು ಬಂದಿರುವ ಫ್ಯಾಮಿಲಿಯವರು ಒಳಗಿರುವ ಸ್ಪರ್ಧಿಗಳಿಗೆ ಬೇರೆ ಬೇರೆ ರೀತಿಯ ಸಲಹೆ ನೀಡುತ್ತಿದ್ದಾರೆ. ಗೌತಮಿ ಜಾದವ್​ ಅವರಿಗೂ ಅಂತಹ ಒಂದು ಸಲಹೆ ಸಿಕ್ಕಿದೆ.

‘ಅವರನ್ನು ತುಳಿದು ನೀನು ಮುಂದೆ ಹೋಗಬೇಕು’: ಗೌತಮಿ ಜಾದವ್​ಗೆ ಗಂಡನ ಸಲಹೆ
Bigg Boss Kannada 11
Follow us on

ಕಿರುತೆರೆ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕ್ಲೋಸ್ ಆಗಿದ್ದು ಉಗ್ರಂ ಮಂಜು ಜೊತೆ. ಕೆಲವು ಸಂದರ್ಭಗಳಲ್ಲಿ ಅವರ ಸ್ನೇಹದಿಂದ ಆಟಕ್ಕೆ ತೊಂದರೆ ಆಗಿದ್ದೂ ಉಂಟು. ಉಗ್ರಂ ಮಂಜು ಅವರಿಂದ ಗೌತಮಿ ದೂರ ಇರಬೇಕು ಎಂದುಕೊಂಡರೂ ಕೂಡ ಅದು ಸಾಧ್ಯವಾಗಿಲ್ಲ. ಈ ವಾರ ಗೌತಮಿ ಅವರ ಪತಿ ಅಭಿಷೇಕ್ ಕಾಸರಗೋಡು ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಗೌತಮಿಗೆ ಅವರು ಕೆಲವು ಸೂಕ್ಷ್ಮಗಳನ್ನು ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಗೌತಮಿ ಪೂರ್ತಿಯಾಗಿ ಅರ್ಥ ಆದಂತೆ ಕಾಣಿಸುತ್ತಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೊಬ್ಬರು ಆಪ್ತವಾಗಿ ಇರುವುದು ತಪ್ಪಲ್ಲ. ಆದರೆ ಅದು ಅತಿಯಾದರೆ ಆಟಕ್ಕೆ ಹೊಡೆತ ಬೀಳುತ್ತದೆ. ಗೌತಮಿ ಜಾವದ್ ಅವರು ಉಗ್ರಂ ಮಂಜು ಜೊತೆಗೆ ಹೆಚ್ಚು ಕಾಲ ಕಳೆದಿದ್ದಾರೆ. ಆದರೆ ಬೇರೆ ಸ್ಪರ್ಧಿಗಳ ಜೊತೆ ಅವರು ಅಷ್ಟಾಗಿ ಬೆರೆತಿಲ್ಲ. ಈ ಸ್ನೇಹವನ್ನು ಮಂಜು ಅವರು ಬಳಕೆ ಮಾಡಿಕೊಂಡು ಮುಂದೆ ಸಾಗುತ್ತಿರಬಹುದು ಎಂಬ ಅಭಿಪ್ರಾಯ ಕೆಲವರಿಗೆ ಇದೆ.

‘ಸಮಯ ಬಂದಾಗ ನೀವು ಅವರನ್ನು ತುಳಿದುಕೊಂಡು ಮುಂದಕ್ಕೆ ಹೋಗಬೇಕು’ ಎಂದು ಅಭಿಷೇಕ್​ ಅವರು ಗೌತಮಿಗೆ ಹೇಳಿದ್ದಾರೆ. ‘ತುಳಿದುಕೊಂಡು ಹೋಗಲ್ಲ. ದಾಟಿಕೊಂಡು ಮುಂದೆ ಹೋಗುತ್ತೇನೆ’ ಎಂದು ಗೌತಮಿ ಭರವಸೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಶೋ ಪೂರ್ಣಗೊಳ್ಳಲಿದೆ. ಫಿನಾಲೆಯಲ್ಲಿ ಯಾರು ಉಳಿದುಕೊಳ್ಳುತ್ತಾರೆ? ಅದಕ್ಕೂ ಮೊದಲು ಯಾರು ಔಟ್ ಆಗುತ್ತಾರೆ ಎಂಬ ಕೌತುಕ ಎಲ್ಲರಿಗೂ ಇದೆ.

ಇದನ್ನೂ ಓದಿ: ಸ್ವಾಭಿಮಾನ ಬಿಟ್ಟು ಗೌತಮಿ ಜಾದವ್ ಹಿಂದೆ ಹೋಗುತ್ತಿರುವ ಉಗ್ರಂ ಮಂಜು

95 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ವಾರ ತುಂಬ ಸ್ಪೆಷಲ್ ಆಗಿತ್ತು. ಗೌತಮಿ ಜಾದವ್, ಮೋಕ್ಷಿತಾ ಪೈ, ಉಗ್ರಂ ಮಂಜು, ರಜತ್, ಭವ್ಯಾ ಗೌಡ, ಧನರಾಜ್, ತ್ರಿವಿಕ್ರಮ್, ಹನುಮಂತ, ಚೈತ್ರಾ ಕುಂದಾಪುರ ಅವರ ಫ್ಯಾಮಿಲಿಯವರು ಬಿಗ್ ಬಾಸ್ ಮನೆಯ ಒಳಗೆ ಬಂದು ಧೈರ್ಯ ತುಂಬಿದ್ದಾರೆ. ಕುಟುಂಬದವರನ್ನು ನೋಡಿ ಎಲ್ಲರಿಗೂ ಹೊಸ ಎನರ್ಜಿ ಬಂದಿದೆ. ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಫಿನಾಲೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:16 pm, Thu, 2 January 25