ಮಕ್ಕಳ ನೋಡಿ ಅತ್ತೇ ಬಿಟ್ಟ ಗೌತಮಿ; ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬಾಸ್
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಅವರ ಮೂರು ಶ್ವಾನಗಳ ವಿಡಿಯೋ ಪ್ರದರ್ಶನಗೊಂಡಾಗ ಅವರು ಭಾವುಕರಾದರು. ಅವರ ಪತಿ ಅಭಿಷೇಕ್ ಕೂಡ ಭೇಟಿ ನೀಡಿ ಧೈರ್ಯ ತುಂಬಿದರು. ಕುಟುಂಬದ ಭೇಟಿ ಮತ್ತು ನಾಯಿಗಳ ವಿಡಿಯೋ ಗೌತಮಿ ಅವರಿಗೆ ಹೊಸ ಉತ್ಸಾಹ ತುಂಬಿತು. ಇದು ಫೈನಲ್‌ಗೆ ಅವರ ಹಾದಿಯನ್ನು ಸುಗಮಗೊಳಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಅವರು ಕಳೆದ 90 ದಿನಗಳಿಂದ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಫಿನಾಲೆ ತಲುಪೋಕೆ ಅವರಿಗೆ ಇರೋದು ಇನ್ನು ಕೆಲವೇ ಹೆಜ್ಜೆಗಳು ಮಾತ್ರ. ಈಗ ದೊಡ್ಮನೆ ಭಾವುಕ ಕ್ಷಣಕ್ಕೆ ಸಾಕ್ಷಿ ಆಗುತ್ತಿದೆ. ಕುಟುಂಬದವರು ಆಗಮಿಸುತ್ತಿದ್ದು, ಅವರ ಜೊತೆ ಸ್ಪರ್ಧಿಗಳು ಸಮಯ ಕಳೆಯುತ್ತಿದ್ದಾರೆ. ಇದು ಅವರಿಗೆ ಹೊಸ ಹುರುಪು ನೀಡಿದೆ. ಈಗ ದೊಡ್ಮನೆಯಲ್ಲಿ ಗೌತಮಿ ಅವರ ಮಕ್ಕಳನ್ನು ತೋರಿಸಲಾಗಿದೆ. ಅವರನ್ನು ನೋಡಿ ಗೌತಮಿ ಅತ್ತಿದ್ದಾರೆ. ಆ ಬಳಿಕ ಸಂತೋಷದಿಂದ ಬಿಗ್ ಬಾಸ್ಗೆ ಧನ್ಯವಾದ ಹೇಳಿದ್ದಾರೆ.
ಗೌತಮಿ ಹಾಗೂ ಅಭಿಷೇಕ್ ವಿವಾಹ ಆಗಿದ್ದಾರೆ. ಇವರು ಇನ್ನೂ ಪಾಲಕರಾಗಿಲ್ಲ. ಆದರೆ, ಗೌತಮಿ ಮೂರು ಶ್ವಾನಗಳನ್ನು ಸಾಕಿದ್ದಾರೆ. ಅವುಗಳ ಹೆಸರು ಕುಲ್ಫಿ, ಕಾಫಿ, ಹ್ಯಾಪಿ. ಮೂರು ಶ್ವಾನಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಅವರನ್ನು ಗೌತಮಿ ಎಂದಿಗೂ ನಾಯಿಗಳಂತೆ ಪರಿಗಣಿಸಿಲ್ಲ, ಅವುಗಳನ್ನು ಮಕ್ಕಳು ಎಂದೇ ಕರೆಯುತ್ತಾರೆ.
ಈಗ ಬಿಗ್ ಬಾಸ್ ಮನೆಯಲ್ಲಿ ವಿಡಿಯೋ ಒಂದನ್ನು ಪ್ಲೇ ಮಾಡಲಾಗಿದೆ. ಈ ವಿಡಿಯೋದಲ್ಲಿ ಮೂರು ಶ್ವಾನಗಳು ಏನು ಮಾಡುತ್ತಿವೆ ಎಂಬುದನ್ನು ತೋರಿಸಲಾಗಿದೆ. ‘ಗೌತು ಬಂದ್ಲಾ ನೋಡು’ ಎಂದು ಅಭಿಷೇಕ್ ಹೇಳಿದಾಗ ಮೂರು ಶ್ವಾನಗಳು ಹೊರಗೆ ಹೋಗಿ ಬರೋದು ವಿಡಿಯೋದಲ್ಲಿ ಇದೆ. ಅಲ್ಲದೆ, ಬಿಗ್ ಬಾಸ್ ಪ್ರಸಾರ ಕಾಣುವಾಗ ಮೂರೂ ಶ್ವಾನಗಳು ಟಿವಿ ಎದುರು ಕುಳಿತು ಗೌತಮಿ ಅವರನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ‘ಆಗಿದ್ದು ಆಗಿ ಹೋಯ್ತು, ಅದನ್ನು ಬಿಟ್ಟುಬಿಡು’; ಹಳೆಯ ಘಟನೆಯ ಬಗ್ಗೆ ಮೋಕ್ಷಿತಾಗೆ ಧೈರ್ಯ ತುಂಬಿದ ತಾಯಿ
ಈ ವಿಡಿಯೋ ಬರುತ್ತಿದ್ದಂತೆ ಗೌತಮಿ ಅವರು ಕಣ್ಣಿರು ಹಾಕಿದರು. ‘ಈ ಮೂವರು ನನ್ನ ಮಕ್ಕಳು’ ಎಂದು ಹೇಳಿದರು. ಬಿಗ್ ಬಾಸ್ ಎಪಿಸೋಡ್ನಲ್ಲಿ ಈ ವಿಚಾರ ಹೈಲೈಟ್ ಆಗಿದೆ. ಆ ಬಳಿಕ ಗೌತಮಿ ಅವರ ಪತಿ ಅಭಿಷೇಕ್ ಕೂಡ ದೊಡ್ಮನೆಗೆ ಬಂದರು. ಅವರು ಗೌತಮಿ ಜೊತೆ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಗೌತಮಿ ಅವರಿಗೆ ದೈರ್ಯ ತುಂಬಿ ಹೋಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:25 am, Thu, 2 January 25