ಭವ್ಯಾಗೆ ತ್ರಿವಿಕ್ರಂನಿಂದ ದೂರ ಇರಲು ಸೂಚನೆ ಕೊಟ್ಟ ಅಕ್ಕ
ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಂ ಒಟ್ಟಾಗಿ ಇದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈಗ ದೊಡ್ಮನೆಗೆ ಭವ್ಯಾ ಅವರ ಅಕ್ಕ ದಿವ್ಯಾ ಬಂದಿದ್ದಾರೆ. ಆಗ ಅವರು ತ್ರಿವಿಕ್ರಂನಿಂದ ದೂರ ಇರುವಂತೆ ಪರೋಕ್ಷವಾಗಿ ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವಾರ ಶುರುವಾಗಿದೆ. ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಬರುತ್ತಿದ್ದಾರೆ. ಹೀಗೆ ಬರುವ ಕುಟುಂಬದವರು ಸ್ಪರ್ಧಿಗಳಿಗೆ ಒಂದೊಂದು ಟಿಪ್ಸ್ ನೀಡುವ ಕೆಲಸ ಮಾಡುತ್ತಾ ಇದ್ದಾರೆ. ಹೊರಗೆ ಸ್ಪರ್ಧಿಗಳ ಬಗ್ಗೆ ಇರುವ ಅಭಿಪ್ರಾಯ, ಯಾವ ರೀತಿಯಲ್ಲಿ ಆಡಬೇಕು ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆ. ದೊಡ್ಮನೆಗೆ ಭವ್ಯಾ ಅವರ ಅಕ್ಕ ದಿವ್ಯಾ ಬಂದಿದ್ದಾರೆ. ಆಗ ಅವರು ತ್ರಿವಿಕ್ರಂನಿಂದ ದೂರ ಇರುವಂತೆ ಪರೋಕ್ಷವಾಗಿ ಹೇಳಿದ್ದಾರೆ.
ಭವ್ಯಾ ಅವರಿಗೆ ಕನ್ಫೆಷನ್ ರೂಂಗೆ ಬರುವಂತೆ ಬಿಗ್ ಬಾಸ್ ಹೇಳಿದ್ದಾರೆ. ದಿವ್ಯಾ ಅವರು ಕನ್ಫೆಷನ್ ರೂಂನಲ್ಲೇ ಇದ್ದರು. ಅವರು ವೈದ್ಯರ ಡ್ರೆಸ್ನಲ್ಲಿ ಇದ್ದರು. ಮುಖಕ್ಕೆ ಮಾಸ್ಕ್ ಹಾಕಿದ್ದರು. ಭವ್ಯಾ ಹೋಗಿ ಕುಳಿತ ಬಳಿಕ, ‘ಹೇಗಿದ್ದೀರಿ’ ಎಂದು ಕೇಳಿದರು ದಿವ್ಯಾ. ಭವ್ಯಾ ಒಮ್ಮೆ ಗೊಂದಲಕ್ಕೆ ಒಳಗಾದರು. ಆ ಬಳಿಕ ರಿಯಾಲಿಟಿ ಅರಿತುಕೊಂಡ ಅವರು ಖುಷಿಯಿಂದ ಕುಣಿದಾಡಿದರು. ಅಪ್ಪಿಕೊಂಡು ಕಣ್ಣೀರು ಹಾಕಿದರು.
ದಿವ್ಯಾ ಮನೆಯಲ್ಲಿ ಸ್ವಲ್ಪ ಸಮಯ ಕಳೆದ ಬಳಿಕ ಭವ್ಯಾ ಅವರು ‘ನಾನು ಏನು ಚೇಂಜಸ್ ಮಾಡಿಕೊಳ್ಳಬೇಕು’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ದಿವ್ಯಾ, ‘ಜನರು ಕಡಿಮೆ ಆಗುತ್ತಿದ್ದಾರೆ. ನೀನು ಎಲ್ಲರ ಜೊತೆಯೂ ಬೆರೆಯಬೇಕು. ಕಂಫರ್ಟ್ಜೋನ್ನಲ್ಲಿ ಇದೀಯಾ, ತೊಂದರೆ ಇಲ್ಲ. ಎಲ್ಲದಕ್ಕೂ ಒಂದು ಬ್ಯಾರಿಕೇಡ್ ಇರಬೇಕು. ನೀನು ಇರೋದು ತಪ್ಪು ಎನ್ನುತ್ತಿಲ್ಲ, ವೈಯಕ್ತಿಕವಾಗಿ ಹೇಗೆ ಆಟಡಬೇಕು ಎಂಬುದನ್ನು ಯೋಚನೆ ಮಾಡು. ಗೇಮ್ ಕಡೆ ಫೋಕಸ್ ಮಾಡು. ಸಜೆಶನ್ಸ್ ಕೇಳಬಾರದು. ನೀನೇ ನಿರ್ಧಾರ ತೆಗೆದುಕೊಳ್ಳಬೇಕು. ನೀನು ನಿರ್ಧಾರ ತೆಗೆದುಕೊಳ್ಳಲು ಅಪ್ರಬುದ್ಧ ಎಂದು ಕಾಣಿಸಬಾರದು’ ಎಂದರು ದಿವ್ಯಾ.
ಇದನ್ನೂ ಓದಿ: ‘ರಾಧಾ ಕೃಷ್ಣ’ ತರ ಇದೀರಾ; ಭವ್ಯಾಗೆ ನೇರ ಮಾತಲ್ಲಿ ಹೇಳಿದ ತ್ರಿವಿಕ್ರಂ ತಾಯಿ
ಇದನ್ನು ಅನೇಕರು ಬೇರೆ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ‘ತ್ರಿವಿಕ್ರಂನಿಂದ ದೂರ ಇರು ಎಂದು ಭವ್ಯಾಗೆ ಅವರ ಅಕ್ಕ ಸೂಚನೆ ಕೊಟ್ಟಿದ್ದಾರೆ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಅತ್ತ ಭವ್ಯಾ ಅವರ ತಾಯಿ ಮಂಜುಳಾ ಅವರು ಭವ್ಯಾ ಆಟದ ಬಗ್ಗೆ ತ್ರಿವಿಕ್ರಂ ಹಾಗೂ ಭವ್ಯಾ ಬಾಂಡಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.