ರಾಯ್ ಮಾಡಿದ್ದ ಸಹಾಯ ನೆನೆದ ಹನುಮಂತ: ವ್ಯಕ್ತಿತ್ವದ ಬಗ್ಗೆ ಹೇಳಿದ್ದೇನು?
Bigg Boss Kannada: ಹಲವು ರಿಯಾಲಿಟಿ ಶೋಗಳಿಗೆ ಪ್ರಯೋಜಕತ್ವ ನೀಡುತ್ತಿದ್ದ ಸಿಜೆ ರಾಯ್ ಅವರು, ನಿಜವಾಗಿಯೂ ಪ್ರತಿಭೆ ಹೊಂದಿದವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಕರ್ನಾಟಕದ ಜನಪದ ಗಾಯಕ ಎನಿಸಿಕೊಂಡಿರುವ ಹನುಮಂತನಿಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದ ಸಿಜೆ ರಾಯ್ ಅವರು, ಹನುಮಂತನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಹನುಮಂತ ಜೆಸಿ ರಾಯ್ ಅವರ ವಿಶಾಲ ಹೃದಯದ ಬಗ್ಗೆ ಮಾತನಾಡಿದ್ದಾರೆ.

ಖ್ಯಾತ ಉದ್ಯಮಿ ಸಿಜೆ ರಾಯ್ (CJ Roy) ನಿನ್ನೆ (ಜನವರಿ 30) ನಿಧನ ಹೊಂದಿದ್ದಾರೆ. ಟಿವಿ ಲೋಕದೊಂದಿಗೆ ನಿಕಟ ಸಂಪರ್ಕವನ್ನು ಜೆಸಿ ರಾಯ್ ಹೊಂದಿದ್ದರು. ಹಲವು ರಿಯಾಲಿಟಿ ಶೋಗಳಿಗೆ ಪ್ರಯೋಜಕತ್ವ ನೀಡುತ್ತಿದ್ದ ಜೆಸಿ ರಾಯ್ ಅವರು, ನಿಜವಾಗಿಯೂ ಪ್ರತಿಭೆ ಹೊಂದಿದವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಕರ್ನಾಟಕದ ಜನಪದ ಗಾಯಕ ಎನಿಸಿಕೊಂಡಿರುವ ಹನುಮಂತನಿಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದ ಜೆಸಿ ರಾಯ್ ಅವರು, ಹನುಮಂತನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಹನುಮಂತ ಜೆಸಿ ರಾಯ್ ಅವರ ವಿಶಾಲ ಹೃದಯದ ಬಗ್ಗೆ ಮಾತನಾಡಿದ್ದಾರೆ.
ರಾಯ್ ಅವರು ಹನುಮಂತನಿಗೆ ಮೊದಲು ಸಹಾಯ ಮಾಡಿದ್ದ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ. ಗಾಯನ ರಿಯಾಲಿಟಿ ಶೋನಲ್ಲಿ ಹನುಮಂತ ದ್ವಿತೀಯ ಸ್ಥಾನ ಪಡೆದಿದ್ದಾಗ ರಾಯ್ ಅವರು ನಗದು ಬಹುಮಾನವನ್ನು ಹನುಮಂತನಿಗೆ ನೀಡಿದ್ದರು. ‘ದ್ವಿತೀಯ ಸ್ಥಾನ ಪಡೆದಿದ್ದರೂ ಸಹ ನಾನು ಬಡವ ಎಂಬ ಕಾರಣಕ್ಕೆ ನನಗೆ ಹೆಚ್ಚು ಹಣವನ್ನು ನನಗೆ ನೀಡಿದ್ದರು’ ಎಂದು ಹನುಮಂತ ನೆನಪು ಮಾಡಿಕೊಂಡಿದ್ದಾರೆ.
‘ನಾನು ಸಿಂಗಿಂಗ್ ಶೋನಲ್ಲಿ ದ್ವಿತೀಯ ಸ್ಥಾನ ಪಡೆದ ಬಳಿಕ ಅದೇ ಸಮಯದಲ್ಲಿ ಕೋವಿಡ್ ಸಹ ಬಂತು. ಆಗ ರಾಯ್ ಅವರು ಸೈಟು ಬೇಕಾ ಹಣ ಬೇಕಾ ಎಂದು ಕೇಳುತ್ತಿದ್ದಾರೆ ಎಂದು ಚಾನೆಲ್ನವರು ಹೇಳಿದ್ದರು. ನಾನು ಬೆಂಗಳೂರಿನಲ್ಲಿ ಇರುವವನಲ್ಲ, ಅಲ್ಲದೆ ಮೊದಲ ಸ್ಥಾನ ಪಡೆದಿದ್ದ ಹೊಳ್ಳ ಅವರು ಹಣ ತೆಗೆದುಕೊಳ್ಳೋಣ ಎಂದು ಸಲಹೆ ಕೊಟ್ಟರು. ಅದರಂತೆ ಹಣ ತೆಗೆದುಕೊಂಡೆವು. ನಾನು ಬಡವ ಎಂದು ನಿಗದಿತ ಹಣಕ್ಕಿಂತಲೂ ಸ್ವಲ್ಪ ಹೆಚ್ಚು ಹಣವನ್ನೇ ಆಗ ನನಗೆ ಅವರು ನೀಡಿದ್ದರು’ ಎಂದಿದ್ದಾರೆ ಹನುಮಂತ.
ಇದನ್ನೂ ಓದಿ:ರಾಯ್ ನಿಧನದಿಂದ ಶಾಕ್ ಆದ ಹರ್ಷಿಕಾ; ಮನೆ ಹೇಗಿತ್ತು ಎಂದು ವಿವರಿಸಿದ ನಟಿ
ಅದರ ಬಳಿಕ ಮತ್ತೊಮ್ಮೆ ಹನುಮಂತನ ತಂಗಿಯ ಓದಿಗೆ ಸಹ ಸಹಾಯ ಮಾಡಿದ್ದರು. ತಂಗಿಯ ಓದಿಗೆ 50 ಸಾವಿರ ರೂಪಾಯಿ ನಗದು ಹಣ ನೀಡಿದ್ದರು. ಅಲ್ಲದೆ, ತಂಗಿ ಪದವಿ ಓದಿದ ಬಳಿಕ ಕರೆದುಕೊಂಡು ಬಾ ನಾನೇ ಕೆಲಸ ಕೊಡುತ್ತೇನೆ ಎಂದಿದ್ದರು. ಹಣ ಪಡೆದುಕೊಂಡು ಬರಲು ಹೋದಾಗಲೂ ಸಹ ಬಹಳ ಚೆನ್ನಾಗಿ ಮಾತನಾಡಿಸಿದ್ದರು. ಅವರ ಕಚೇರಿಯಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಬಹಳ ಹೊತ್ತು ಮಾತನಾಡಿದ್ದರು. ತಮಾಷೆ ಮಾಡಿದ್ದರು. ಮದುವೆ ಆಗುತ್ತೀಯ, ಹೆಣ್ಣು ಹುಡುಕಬೇಕ, ನಮ್ಮ ಕಚೇರಿಯಲ್ಲೇ ಸಾಕಷ್ಟು ಹಣ ಯುವತಿಯರು ಇದ್ದಾರೆ ಯಾರಾದರೂ ಒಬ್ಬರನ್ನು ಆಗಿಬಿಡು ಎಂದೆಲ್ಲ ತಮಾಷೆ ಮಾಡಿದ್ದರು’ ಎಂದಿದ್ದಾರೆ ಹನುಮಂತು.
‘ರಾಯ್ ಅವರದ್ದು ಬಹಳ ವಿಶಾಲವಾದ ಮನಸ್ಸು, ನಾನು ಮನೆ ಕಟ್ಟಿಸುತ್ತಿರುವದನ್ನು ಅವರ ಬಳಿ ಹೇಳಿಕೊಂಡಿದ್ದೆ. ಮನೆ ಗೃಹಪ್ರವೇಶಕ್ಕೆ ಕರಿ ಬರುತ್ತೇನೆ ಎಂದಿದ್ದರು. ತಂಗಿಯ ಓದಿನ ಬಗ್ಗೆಯೂ ವಿಚಾರಿಸಿದ್ದರು, ಅವರು ಅಗಲಿದ್ದನ್ನು ನಂಬಲೇ ಸಾಧ್ಯವಾಗಲಿಲ್ಲ. ನನಗೆ ವೈಯಕ್ತಿಕವಾಗಿ ಸಾಕಷ್ಟು ಸಹಾಯ ಮಾಡಿದ್ದರು’ ಎಂದಿದ್ದಾರೆ ಹನುಮಂತ. ಸಿಂಗರ್ ಹನುಮಂತ ಬಿಗ್ಬಾಸ್ ಗೆದ್ದಾಗಲೂ ಸಹ ರಾಯ್ ಅವರೇ ಮೊದಲ ಬಹುಮಾನದ ಸ್ಪಾನ್ಸರ್ ಮಾಡಿದ್ದರು. ಹನುಮಂತನಿಗೆ 50 ಲಕ್ಷ ರೂಪಾಯಿ ನಗದು ಕೊಟ್ಟಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Sat, 31 January 26




