ಬಿಗ್ಬಾಸ್ ಮನೆಯ ಬೆಂಕಿಯುಂಡೆ ಅಶ್ವಿನಿಗೆ ಧಕ್ಕಲಿಲ್ಲ ಗೆಲುವು
ಅಶ್ವಿನಿ, ಬಿಗ್ಬಾಸ್(Bigg Boss) ಕನ್ನಡ ಸೀಸನ್ 12ರ ಅಪರೂಪದ ಸ್ಪರ್ಧಿ. ಹೋರಾಟಗಾರ್ತಿ, ತಾಯಿ, ಸಹೋದರಿ, ಜಗಳಗಂಟಿ, ಮಾಸ್ಟರ್ ಮೈಂಡ್ ಹೀಗೆ ಆಟದ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ರೀತಿಯಾಗಿ ತಮ್ಮನ್ನು ತೋರ್ಪಡಿಸಿಕೊಂಡ ಅಶ್ವಿನಿ, ಗಿಲ್ಲಿಗೆ ನಿಜವಾದ ಪ್ರತಿಸ್ಪರ್ಧಿ ಎನಿಸಿಕೊಂಡಿದ್ದರು. ಅಶ್ವಿನಿಗೆ ಇರುವ ರಕ್ಷಣಾ ವೇದಿಕೆ ಹಿನ್ನೆಲೆ ಹಾಗೂ ದಿಟ್ಟ ಮಹಿಳೆಯಾಗಿ ಅವರು ಸಂಪಾದಿಸಿರುವ ಮಹಿಳಾ ಸ್ಪರ್ಧಿಗಳ ಕಾರಣಕ್ಕೆ ಅಶ್ವಿನಿ ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ ಅದೀಗ ಸುಳ್ಳಾಗಿದೆ ಅಶ್ವಿನಿ ಅವರು ಅದ್ಭುತವಾದ ಆಟದ ಹೊರತಾಗಿಯೂ ಎರಡನೇ ರನ್ನರ್ ಅಪ್ ಆಗಿದ್ದಾರೆ.

ಅಶ್ವಿನಿ, ಇಡೀ ಸೀಸನ್ನಲ್ಲಿ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ವೈರಲ್ ಆಗುತ್ತಲೇ ಇದ್ದರು. ಆರಂಭದಲ್ಲಿ ಬಲು ಗಂಭೀರವಾಗಿ, ಪ್ರಬುದ್ಧೆಯಾಗಿ ತಮ್ಮನ್ನು ತಾವು ತೋರ್ಪಡಿಸಿಕೊಂಡ ಅಶ್ವಿನಿ, ರಕ್ಷಿತಾರ ಘಟನೆಯ ಬಳಿಕ ಮನೆಯಲ್ಲಿ ವಿಲನ್ ರೀತಿ ಬಿಂಬಿತವಾಗಲು ಆರಂಭಿಸಿದರು. ಆತ್ಮಗೌರವಕ್ಕಾಗಿ ಇತರರ ಗೌರವಕ್ಕಾಗಿ, ಸ್ವ ಆತ್ಮಗೌರವಕ್ಕಾಗಿ, ಟಾಸ್ಕ್ಗಾಗಿ, ಅಧಿಕಾರಕ್ಕಾಗಿ ಹೀಗೆ ಹಲವು ಕಾರಣಗಳಿಗೆ ಹಲವರೊಟ್ಟಿಗೆ ಜಗಳ ಮಾಡಿದ ಅಶ್ವಿನಿ ಅವರನ್ನು ಜಗಳಗಂಟಿ ಎಂದೇ ಮನೆಯಲ್ಲಿ ಕೆಲವರು ಬಿಂಬಿಸಿದ್ದರು.
ಇದನ್ನೂ ಓದಿ:ಬಿಗ್ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಅಷ್ಟು ಮಾತ್ರವಲ್ಲದೆ, ತಮ್ಮಿಂದ ತಪ್ಪಾಗಿದೆ ಎಂಬುದು ಗೊತ್ತಾದಾಗ ಬಹಳ ಕಿರಿಯಳಾದ ರಕ್ಷಿತಾ ಬಳಿ ಕ್ಷಮೆ ಕೇಳಿದರು. ಸೀಸನ್ನ ಕೊನೆಯ ವರೆಗೆ ಕೇಳುತ್ತಲೇ ಬಂದರು. ಜಗಳ ಮಾಡಿದ ರಘು ಜೊತೆಗೆ ಗೆಳೆತನ ಮಾಡಿಕೊಂಡರು. ಎಲ್ಲರೂ ದೂರ ತಳ್ಳಿದ್ದ ಧ್ರುವಂತ್ ಅನ್ನು ಗೆಳೆಯರನ್ನಾಗಿ ಮಾಡಿಕೊಂಡು ಅವರಲ್ಲಿ ಆಟದ ಸ್ಪೂರ್ತಿ ತುಂಬಿದರು. ಎಷ್ಟೇ ಜಗಳ ಆದರೂ ಮನೆಯವರಿಗೆ ಅಡುಗೆ ಮಾಡಿ ಹಾಕಿ ತಾಯಿಯಂತೆ ನೋಡಿಕೊಂಡರು.
ಗಿಲ್ಲಿ ಮತ್ತು ಗ್ಯಾಂಗ್ ಅಶ್ವಿನಿ ಅವರನ್ನು ನಾನಾ ರೀತಿಯಲ್ಲಿ ಟೀಕೆ ಮಾಡಿತ್ತು. ಸ್ವತಃ ಗಿಲ್ಲಿ, ಅಶ್ವಿನಿಯನ್ನು ‘ಮುದುಕಿ, ಹಲ್ಲು ಸೆಟ್ಟು, ಬಿಳಿ ಕೂದಲು’ ಎಂದೆಲ್ಲ ಹೀನಾಯವಾಗಿ ಟೀಕೆ ಮಾಡಿದ್ದರು, ಅಷ್ಟೆಲ್ಲ ಅವಮಾನಗಳು ಆದರೂ ಸಹ ಒಮ್ಮೆ ಸಹ ಬಿಟ್ಟು ಕೊಡದೆ ಹೋರಾಡಿದರು. ಸ್ವತಃ ಗಿಲ್ಲಿಯೇ ಅವರಷ್ಟು ಗಟ್ಟಿ ಮಹಿಳೆಯನ್ನು ನಾನು ನೋಡಿಲ್ಲ ಎಂದುಬಿಟ್ಟರು. ಅವಶ್ಯಕತೆ ಇದ್ದಾಗ ಹುಲಿಯಂತೆ ಹೋರಾಡಿದ ಅಶ್ವಿನಿ, ಸುದೀಪ್ ಹೇಳಿದರೆಂದು ಅಚಾನಕ್ಕಾಗಿ ತಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡು ಮೆತ್ತಗಾಗಿಬಿಟ್ಟರು, ಅವಮಾನಗಳನ್ನು ನಗುವಿಂದಲೇ ಸಹಿಸಿಕೊಂಡರು. ಒಟ್ಟಾರೆ ಎಲ್ಲ ರೀತಿಯಲ್ಲಿಯೂ ಅಶ್ವಿನಿ ಆಟ ಆಡಿದರು.
ಸುದೀಪ್ ಅವರು ಸ್ವತಃ ಅಶ್ವಿನಿಯ ಆಟವನ್ನು ಬಹುವಾಗಿ ಕೊಂಡಾಡಿದರು. ಅಶ್ವಿನಿ ಅವರ ಛಲ, ಕಿಚ್ಚು, ಅವರ ಪ್ರಬುದ್ಧತೆಯನ್ನು ಸುದೀಪ್ ಅವರು ಹೊಗಳಿದರು. ಅಶ್ವಿನಿ ಅವರು ಸಹ ಖುಷಿಯಿಂದಲೇ ಎವಿಕ್ಷ್ ಅನ್ನು ಒಪ್ಪಿಕೊಂಡು ಇತರೆ ಸ್ಪರ್ಧಿಗಳಾದ ರಕ್ಷಿತಾ ಮತ್ತು ಗಿಲ್ಲಿಗೆ ಶುಭ ಹಾರೈಸಿದರು. ಮಾತ್ರವಲ್ಲದೆ, ಸೀಸನ್ನ ಆರಂಭದಲ್ಲಿ ಮಾಡಿದ ತಪ್ಪಿಗೆ ಮತ್ತೊಮ್ಮೆ ರಕ್ಷಿತಾಗೆ ಕ್ಷಮೆ ಕೇಳಿ ವೇದಿಕೆಯಿಂದ ಕೆಳಗಿಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:34 pm, Sun, 18 January 26