
‘ಬಿಗ್ ಬಾಸ್’ (Bigg Boss) ಆರಂಭ ಆಗುತ್ತದೆ ಎಂದರೆ ವೀಕ್ಷಕರ ವಲಯದಲ್ಲಿ ಹೊಸ ಉತ್ಸಾಹ ಸೃಷ್ಟಿ ಆಗುತ್ತದೆ. ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ, ಓಪನಿಂಗ್ ಡೇ ಹೇಗಿರುತ್ತದೆ ಎಂಬಿತ್ಯಾದಿ ಕುತೂಹಲ ಮೂಡುತ್ತದೆ. ಈ ಕಾರಣದಿಂದಲೇ ಓಪನಿಂಗ್ ಡೇ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಓಪನಿಂಗ್ಗೆ ಉತ್ತಮ ರೇಟಿಂಗ್ ಸಿಕ್ಕಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಮಾಹಿತಿ ಹಂಚಿಕೊಂಡಿದೆ.
ಕಿರುತೆರೆ ಲೋಕದಲ್ಲಿ ಡಬಲ್ ಡಿಜಿಟ್ ಟಿಆರ್ಪಿ ಪಡೆಯಬೇಕು ಎಂದರೆ ಅದು ಅಷ್ಟು ಸುಲಭದ ಮಾತಲ್ಲ. ಆದರೆ, ಕಿಚ್ಚನಿಗೆ ಅದು ನೀರು ಕುಡಿದಷ್ಟೇ ಸುಲಭ ಎಂದರೂ ತಪ್ಪಾಗಲಾರದರು. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಈ ಶೋಗೆ ಬರೋಬ್ಬರಿ 12.2 ಟಿವಿಆರ್ ಸಿಕ್ಕಿದೆ. ವಾರದ ದಿನಗಳಲ್ಲಿ 8.2 ಟಿವಿಆರ್ ಸಿಕ್ಕಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಮಾಹಿತಿ ಹಂಚಿಕೊಂಡಿದೆ.
ಸದ್ಯ ಬಿಗ್ ಬಾಸ್ ಆಟ ಪೂರ್ಣ ಪ್ರಮಾಣದಲ್ಲಿ ಆರಂಭ ಆಗಿಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಮೂರನೇ ವಾರವೇ ಫಿನಾಲೆಯನ್ನು ನಡೆಸಲು ಪ್ಲ್ಯಾನಿಂಗ್ ಆಗಿದೆ. ಈ ವೇಳೆ ಒಂದಷ್ಟು ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡುವ ಕುತೂಹಲ ಸ್ಪರ್ಧಿಗಳಿಗೆ ಇದೆ.
ಇನ್ನು, ಬಿಗ್ ಬಾಸ್ ಆಟ ಅರ್ಧಕ್ಕೆ ನಿಂತಿತ್ತು ಕೂಡ. ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ನಿಯಮ ಪಾಲನೆ ಆಗುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು. ಹೀಗಾಗಿ, ಸ್ಪರ್ಧಿಗಳನ್ನು ಒಂದು ದಿನ ಬೇರೆ ಕಡೆಗಳಲ್ಲಿ ಶಿಫ್ಟ್ ಮಾಡಲಾಗಿತ್ತು. ಈಗ ಎಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಮರಳಿದ್ದಾರೆ. ಅವರು ತಮ್ಮ ಆಟ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ: ಜಾಲಿವುಡ್ ಬಂದ್, ಆದರೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆ ಓಪನ್
ಧಾರಾವಾಹಿಗಳ ಟಿಆರ್ಪಿ ಕೂಡ ಹೊರ ಬಿದ್ದಿದೆ. ‘ಅಮೃತಧಾರೆ’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಕರ್ಣ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಹಾಗೂ ಐದನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸ್ಥಾನ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.