
ಬಿಗ್ಬಾಸ್ ಮನೆಯಲ್ಲಿ ಎರಡನೇ ವಾರದಲ್ಲಿ ಟಾಸ್ಕುಗಳು ಸಖತ್ ಆಗಿ ರಂಗೇರಿವೆ. ಮೊದಲ ವಾರವೆಲ್ಲ ಅರ್ಧ ಸ್ಪರ್ಧಿಗಳು ವಿಮಾನದಲ್ಲಿ ಅರ್ಧ ಸ್ಪರ್ಧಿಗಳು ಮನೆಯಲ್ಲಿ ಇದ್ದರು. ಆದರೆ ಈಗ ಎಲ್ಲರೂ ಮನೆಯೊಳಗೆ ಇದ್ದಾರೆ. ಇದರ ನಡುವೆ ಟಾಸ್ಕುಗಳು ಸಹ ಬಂದಿದ್ದು, ಸ್ಪರ್ಧಿಗಳು ಟಾಸ್ಕುಗಳನ್ನು ಗೆಲ್ಲಲು ನಾ-ನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವರು ನೇರವಾಗಿ ಜಿದ್ದಾ-ಜಿದ್ದಿನ ಹೋರಾಟ ನಡೆಸಿ ಆಡಿದರೆ ಕೆಲವರು ಕುತಂತ್ರದಿಂದ ಆಡುತ್ತಿದ್ದಾರೆ. ಅದರಲ್ಲೂ ಮಂಗಳವಾರ ಮುಗಿದ ಟಾಸ್ಕ್ನಲ್ಲಂತೂ ತಂತ್ರ-ಕುತಂತ್ರ ಜೋರಾಗಿಯೇ ನಡೆಯಿತು.
ಸೋಮವಾರವೇ ಆರಂಭವಾಗಿದ್ದ ವಸ್ತುಗಳನ್ನು ಸಂಗ್ರಹಿಸುವ ಮತ್ತು ಕಾಯ್ದುಕೊಳ್ಳುವ ಟಾಸ್ಕ್ನಲ್ಲಿ ಸಾಕಷ್ಟು ಡ್ರಾಮಾ-ಫೈಟಿಂಗ್ ಎಲ್ಲವೂ ನಡೆದು ಮಂಜ, ಸೌಂದರ್ಯಾ, ಧನು ಇನ್ನೂ ಕೆಲವರು ಹೊರಗೆ ಹೋದರು. ಧನುಶ್ಗೆ ಕಿರಣ್ ಶಾಸ್ತ್ರಿ ಸಹಾಯ ಮಾಡದೆ, ಉದ್ದೇಶಪೂರ್ವಕವಾಗಿ ಅಂತರ ಕಾಯ್ದುಕೊಂಡು ಧನುಶ್ ಹೊರಗೆ ಹೋಗುವಂತೆ ಮಾಡಿದ. ಅದು ಮಾತ್ರವೇ ಅಲ್ಲದೆ, ಇಡೀ ಆಟದ ಸಮಯದಲ್ಲಿ ನೇರ ಆಟ ಆಡದೆ ತಾನೇ ಹೇಳಿಕೊಂಡಂತೆ ‘ಬುದ್ಧಿ’ಯ ಆಟ ಆಡಿದ ಕಿರಣ್ ಶಾಸ್ತ್ರಿ.ಆದರೆ ಅಂತಿಮವಾಗಿ ಅದೇ ಆಟ ಕಿರಣ್ ಶಾಸ್ತ್ರಿಗೆ ಮುಳುವಾಯ್ತು.
ಕಿರಣ್ ಶಾಸ್ತ್ರಿ, ಬಹಳ ಉಪಾಯದಿಂದ ಎಲ್ಲರನ್ನೂ ಹೊರಗೆ ಹೋಗುವಂತೆ ಮಾಡಿದ, ಆದರೆ ಸಂಗೀತಾ, ಅದೇ ಜಾಣತನವನ್ನು ಉಪಯೋಗಿಸಿ, ಜೊತೆಗೆ ತುಸು ತಾಳ್ಮೆಯನ್ನೂ ಬೆರೆಸಿ ಫೈನಲ್ ವರೆಗೆ ಬಂದರು. ಫೈನಲ್ನಲ್ಲಿ ಕಿರಣ್ ಶಾಸ್ತ್ರಿ ಮತ್ತು ಸಂಗೀತಾ ಎದುರಾದರು. ಕಿರಣ್ ಶಾಸ್ತ್ರಿ, ತನ್ನದೇ ಗೆಲುವು ಎಂದು ತುಸು ಮೈಮರೆತು ನಿಯಮಗಳನ್ನು ಗಾಳಿಗೆ ತೂರಿದ. ಲುಂಗಿಯಲ್ಲಿ ವಸ್ತುಗಳನ್ನು ತೆಗೆದುಕೊಂಡು ಬಂದ, ಕ್ಯಾಮೆರಾಗೆ ಹಲವು ಬಾರಿ ಕಾಣಿಸಿಕೊಂಡ.
ಇದನ್ನೂ ಓದಿ:ಮಂಜ vs ಸೌಂದರ್ಯ: ಕೈ-ಕೈ ಮಿಲಾಯಿಸಿದರು ಬಿಟ್ಟಿದ್ದೇಕೆ ಬಿಗ್ಬಾಸ್
ಇತ್ತ ಸಂಗೀತಾ ಕೆಲವೇ ವಸ್ತುಗಳನ್ನು ತೆಗೆದುಕೊಂಡು ಬಂದರು. ಆದರೆ ಕಿರಣ್ ಶಾಸ್ತ್ರಿ ಅದರ ಮೇಲೂ ಸಹ ದಾಳಿ ಮಾಡಿ ಕಿತ್ತುಕೊಳ್ಳಲು ಯತ್ನಿಸಿದ. ಬಜರ್ ಬಳಿಕ ಉಸ್ತುವಾರಿಗಳು ಒಟ್ಟಾಗಿ ತೀರ್ಮಾನ ಪ್ರಕಟಿಸಿ, ನಿಯಮಗಳನ್ನು ಗಾಳಿಗೆ ತೂರಿದ ಕಿರಣ್ ಶಾಸ್ತ್ರಿಯನ್ನು ಆಟದಿಂದ ಹೊರಗಟ್ಟಿ, ಮೊದಲ ಪೈಲೆಟ್ ಆಗಿ ಸಂಗೀತಾ ಅವರನ್ನು ಆಯ್ಕೆ ಮಾಡಿದರು.
ಆದರೆ ಕಿರಣ್ ಶಾಸ್ತ್ರಿ ಇದರಿಂದ ಬಹಳ ಸಿಟ್ಟಿಗೆದ್ದು ಬಹಳ ಮಾತನಾಡಿದರು. ಮುಖ್ಯ ಉಸ್ತುವಾರಿಗಳಾಗಿದ್ದ ತಾಂಡವ್, ಗಗನ್ ಅವರನ್ನು ಬುದ್ದಿಗೇಡಿಗಳು, ದಡ್ಡರು, ನಯಾ ಪೈಸಕ್ಕೆ ಪ್ರಯೋಜನ ಇಲ್ಲದವರು, ಬಳೆ ಹಾಕಿಕೊಳ್ಳಲು ಲಾಯಕ್ಕು ಎಂದೆಲ್ಲ ಬಹಳ ಅತಿಯಾಗಿ ಮಾತನಾಡಿದ. ಇತರೆ ಅಗ್ನಿ ಬಾಯ್ಸ್, ಕಿರಣ್ ಅನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಕಿರಣ್ ಸುಮ್ಮನಾಗಲಿಲ್ಲ. ತನ್ನದೇ ಹಳ್ಳಿ ಶೈಲಿಯಲ್ಲಿ ವಿಪರೀತ ಮಾತನಾಡಿ ಗಗನ್ ಹಾಗೂ ತಾಂಡವ್ ಮೇಲೆ ರೇಗಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:37 pm, Tue, 15 September 26