
ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಸಾಧನೆಯೆಂದೇ ಪರಿಗಣಿಸಲಾಗುತ್ತದೆ. ಕ್ಯಾಪ್ಟನ್ ಆಗಲು ಹಲವಾರು ಟಾಸ್ಕುಗಳನ್ನು ಗೆದ್ದು ಬರಬೇಕಾಗುತ್ತದೆ. ಅದರ ಜೊತೆಗೆ ಮನೆಯವರ ವಿಶ್ವಾಸ ಗಳಿಸಬೇಕು, ಕೆಲವರ ಸ್ನೇಹ ಗಳಿಸಿಕೊಂಡರೆ ಕೆಲವರ ವಿರೋಧ ಕಟ್ಟಿಕೊಳ್ಳಬೇಕು. ಅವುಗಳ ಜೊತೆಗೆ ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಬಿಗ್ಬಾಸ್ಗೆ ಅಥವಾ ಸುದೀಪ್ಗೆ ಉಪನಾಯಕ ಆದಂತೆ. ಬಿಗ್ಬಾಸ್ ಮನೆಯ ಕ್ಯಾಪ್ಟನ್ಗೆ ವಿಶೇಷ ಗೌರವ ಇರುತ್ತದೆ. ಸಂಗೀತಾ ಭಟ್ ಅವರು ಈ ಸೀಸನ್ನಿನ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಿದ್ದಕ್ಕಿಂತಲೂ ಕ್ಯಾಪ್ಟನ್ ಆದ ರೀತಿ ಬಹಳ ವಿಶೇಷವಾದುದು.
ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಲು ಮನೆಯ ಎಲ್ಲ ಮಂದಿ ಪ್ರಯತ್ನಿಸಿದರು. ಕೆಲವರು ಅಡ್ಡ ಹಾದಿ ಹಿಡಿದರು. ವಸ್ತುಗಳನ್ನು ಸಂಗ್ರಹಿಸುವ ಟಾಸ್ಕ್ ಬಂದಾಗ ಕೆಲವರು ಕಳ್ಳತನ ಮಾಡಿದರೆ, ಕೆಲವರು ದೌರ್ಜನ್ಯ ಮಾಡಿದರು. ಕೆಲವರು ಬಿಗ್ಬಾಸ್ ನಿಯಮವನ್ನೇ ಮುರಿದು, ತಮಗೆ ತೋಚಿದಂತೆ ಆಡಿದರು. ಆದರೆ ಸಂಗೀತಾ ಎಲ್ಲೂ ಸಹ ನಿಯಮ ಮುರಿಯದೆ, ಅಡ್ಡದಾರಿ ಹಿಡಿಯದೆ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳದೆ, ನ್ಯಾಯಯುತವಾಗಿ ಆಟ ಆಡಿ ಫೈನಲ್ ಪ್ರವೇಶ ಮಾಡಿದರು.
ಸಂಗೀತಾ ಅವರು ಬಹಳ ಮೃದು, ಸೂಕ್ಷ್ಮ ಎಂದೆಲ್ಲ ಮನೆಯ ಮಂದಿ ಅಂದುಕೊಂಡಿದ್ದರು. ಅದು ನಿಜವೂ ಆಗಿತ್ತು. ಸಂಗೀತಾ ಸಹ ಖುದ್ದು ಈ ಬಗ್ಗೆ ಹೇಳಿಕೊಂಡಿದ್ದರು. ಈ ರೀತಿಯ ಫಿಸಿಕಲ್ ಆಟಗಳು ತಮಗಲ್ಲ ಎಂಬ ಅಭಿಪ್ರಾಯ ಅವರಿಗೂ ಇತ್ತು. ಆದರೆ ಸಂಗೀತಾ ಖುದ್ದು ತಮ್ಮ ಅಧೈರ್ಯಗಳನ್ನು ದಾಟಿದರು. ಫೈನಲ್ನಲ್ಲಿ ಭಯವಾದರೂ ಸಹ ಧೈರ್ಯ ಮಾಡಿ ಏಣಿಯನ್ನು ಹತ್ತಿದರು. ಗೆಲುವಿನ ಗುರಿ ತಲುಪಿದರು. ತಮ್ಮ ಬಲ ಹೀನತೆಗಳನ್ನು ಮೀರಿ ಹೊರಬಂದು ಸಂಗೀತಾ ಗೆದ್ದರು. ಆ ಮೂಲಕ ಈ ಸೀಸನ್ನಿನ ಮೊಟ್ಟ ಮೊದಲ ಕ್ಯಾಪ್ಟನ್ ಎನಿಸಿಕೊಂಡರು.
ಇದನ್ನೂ ಓದಿ:Thandav Ram Profile: ಧಾರಾವಾಹಿ, ಸಿನಿಮಾ, ವಿವಾದ ಈಗ ಬಿಗ್ಬಾಸ್: ತಾಂಡವ್ ರಾಮ್ ಹಿನ್ನೆಲೆಯೇನು?
ಫೈನಲ್ನಲ್ಲಿ ಸಂಗೀತಾ ಎದುರಿಗೆ ಆಸಿಯಾ ಪ್ರತಿಸ್ಪರ್ಧಿ ಆಗಿದ್ದರು. ಅವರೂ ಸಹ ತಮ್ಮ ಶಕ್ತಿಮೀರಿ ಪ್ರಯತ್ನ ಮಾಡಿದರು. ಆದರೆ ಅವರಿಗೆ ತಮ್ಮ ಬೆಂಬಲಿಗರಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಆದರೆ ಸಂಗೀತಾ ಅವರು ಆಯ್ಕೆ ಮಾಡಿಕೊಂಡಿದ್ದ ಅವಿನಾಶ್ ಹಾಗೂ ಇತರರು ಬಹಳ ಚೆನ್ನಾಗಿ ಆಡಿ ಸಂಗೀತಾ ಅವರನ್ನು ದಡ ತಲುಪಿಸಿದರು. ಸೋತರು ಸಹ ಆಸಿಯಾ ಅವರು ಸಂಗೀತಾ ಅವರ ಗೆಲುವನ್ನು ಸಂಭ್ರಮಿಸಿದರು. ಕ್ರೀಡಾ ಸ್ಪೂರ್ತಿ ಮೆರೆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ