‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿರುವುದು ಗೊತ್ತೇ ಇದೆ. ಭಾನುವಾರ (ಜನವರಿ 26) ಈ ಸೀಸನ್ನ ಕೊನೆಯ ಎಪಿಸೋಡ್ ಕಲರ್ಸ್ ಕನ್ನಡದಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. ಕಳೆದ ಸೀಸನ್ಗಳಿಗೆ ಹೋಲಿಕೆ ಮಾಡಿದಾಗ ಈ ಸೀಸನ್ನಲ್ಲಿ ವಿವಾದಗಳು ಹೆಚ್ಚು ಕಂಡು ಬಂದವು. ಆ ವಿವಾದಗಳ ಬಗ್ಗೆ ಇಲ್ಲಿದೆ ವಿವರ.
ಸ್ವರ್ಗ ಹಾಗೂ ನರಕ ಕಾನ್ಸೆಪ್ಟ್ನೊಂದಿಗೆ ಈ ಬಾರಿಯ ಬಿಗ್ ಬಾಸ್ ಆರಂಭ ಆಯಿತು. ಆದರೆ, ಎರಡೇ ವಾರಕ್ಕೆ ಈ ಕಾನ್ಸೆಪ್ಟ್ ಕೊನೆ ಮಾಡಬೇಕಾಯಿತು. ಇದಕ್ಕೆ ಕಾರಣವೂ ಇದೆ. ನರಕದಲ್ಲಿ ಇರುವ ಸ್ಪರ್ಧಿಗಳಿಗೆ ಸರಿಯಾದ ರೀತಿಯಲ್ಲಿ ಟಾಯ್ಲೆಟ್ ವ್ಯವಸ್ಥೆ ಇಲ್ಲ ಎನ್ನುವ ಆರೋಪವನ್ನು ಮಹಿಳಾ ಆಯೋಗದವರು ಮಾಡಿದ್ದರು. ಇದಾದ ಬೆನ್ನಲ್ಲೇ ಈ ಕಾನ್ಸೆಪ್ಟ್ ಕೊನೆ ಆಯಿತು.
ಜಗದೀಶ್ ಅವರು ಬಿಗ್ ಬಾಸ್ನಲ್ಲಿ ಮಹಿಳಾ ಸ್ಪರ್ಧಿಗಳ ವಿರುದ್ಧ ಕಿರುಚಾಡಿ, ಕಿತ್ತಾಡಿ ಇಡೀ ಮನೆಯ ವಾತಾವರಣವನ್ನೇ ಹಾಳು ಮಾಡಿ ಬಿಟ್ಟರು. ಇದು ಚರ್ಚೆಯ ಕೇಂದ್ರ ಬಿಂದು ಆಗಿತ್ತು. ಹೀಗಾಗಿ, ಅವರನ್ನು ಹೊರಕ್ಕೆ ಹಾಕಲಾಯಿತು. ಇನ್ನು ರಂಜಿತ್ ಅವರು ಜಗದೀಶ್ನ ತಳ್ಳಿದ ಆರೋಪದ ಮೇಲೆ ಹೊರಕ್ಕೆ ಹೋಗಬೇಕಾಯಿತು.
ಜಾಗದ ವಿಚಾರದಲ್ಲಿ ನಡೆದ ವಿವಾದದ ಕಾರಣಕ್ಕೆ ಬಿಗ್ ಬಾಸ್ನ ಕೂಡಲೇ ನಿಲ್ಲಿಸಬೇಕು ಎಂಬ ಆದೇಶವು ಬಿಗ್ ಬಾಸ್ ತಂಡಕ್ಕೆ ಬಂದಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿ, ತಂಡದವರು ಈ ಆದೇಶಕ್ಕೆ ತಡೆ ತಂದರು.
ಈ ಬಾರಿಯ ಬಿಗ್ ಬಾಸ್ನಲ್ಲಿ ಪಾರ್ಷಾಲಿಟಿ ಮಾಡಿದ ಆರೋಪ ಕೇಳಿ ಬಂತು. ರಂಜಿತ್ ಅವರು ತಳ್ಳಿದ ಆರೋಪಕ್ಕೆ ಬಿಗ್ ಬಾಸ್ನಿಂದ ಹೊರ ಹೋದರು. ಇದೇ ಕೆಲಸವನ್ನು ಭವ್ಯಾ ಮಾಡಿದಾಗ ಬಿಗ್ ಬಾಸ್ ಸುಮ್ಮನಿದ್ದರು. ಹನುಮಂತನ ಮೇಲೆ ಭವ್ಯಾ ಹಲ್ಲೆ ಮಾಡಿದ್ದರು. ಆಗ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಇನ್ನು, ತ್ರಿವಿಕ್ರಂ ಅವರು ತಪ್ಪು ಮಾಡಿದಾಗ ಟಾಸ್ಕ್ ರದ್ದು ಮಾಡಿ ಮೊದಲಿನಿಂದ ಆಡಿಸಲಾಗಿತ್ತು. ಆದರೆ, ಧನರಾಜ್ ಅವರು ತಪ್ಪು ಮಾಡಿದಾಗ ಟಾಸ್ಕ್ನ ಮೊದಲಿನಿಂದ ಆಡಿಸಿದೇ ಹಾಗೆಯೇ ಬಿಡಲಾಯಿತು. ವಿಚಾರ ಚರ್ಚೆ ಆದಾಗ ಕೊನೆಯ ವಾರದಲ್ಲಿ ಈ ವಿಚಾರ ಚರ್ಚೆಗೆ ತರಲಾಯಿತು.
ಇದನ್ನೂ ಓದಿ:ಸುದೀಪ್ ಬಿಗ್ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಈ ಸೀಸನ್ನಲ್ಲಿ ಮಾಡಿದಷ್ಟು ಬಿಗ್ ಬಾಸ್ ಪ್ರ್ಯಾಂಕ್ಗಳನ್ನು ಹಿಂದೆಂದೂ ಮಾಡಿಲ್ಲ. ಐದರಿಂದ ಆರು ಬಾರಿ ಪ್ರ್ಯಾಂಕ್ ಎಲಿಮಿನೇಷ್ ಮಾಡಲಾಗಿದೆ. ಹಲವು ಬಾರಿ ಎಲಿಮಿನೇಷನ್ಗಳು ಸ್ಕಿಪ್ ಮಾಡಲಾಗಿದೆ.
ಚೈತ್ರಾ ಅವರು ಹೊರಗಿನ ವಿಚಾರಗಳನ್ನು ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದು. ಆಸ್ಪತ್ರೆ ಸೇರಿದ್ದರಿಂದ ಅವರಿಗೆ ಹೊರಗಿನ ವಿಚಾರ ಗೊತ್ತಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ