ಟಾಪ್ ಐದರಲ್ಲಿ ಇಬ್ಬರು ಪ್ರಮುಖರೇ ಔಟ್; ಟಾಪ್ ಮೂರಲ್ಲಿ ಇರೋರು ಇವರೇ?
Bigg Boss Kannada Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರ ಫೈನಲ್‌ನ ಎರಡನೇ ದಿನದಲ್ಲಿ ಪ್ರಮುಖರೇ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಭವ್ಯಾ ಗೌಡ ಅವರು ಮೊದಲ ದಿನ ಎಲಿಮಿನೇಟ್ ಆಗಿದ್ದರು. ಮೋಕ್ಷಿತಾ ಪೈ, ಹನುಮಂತ, ಮಂಜು, ರಜತ್ ಮತ್ತು ತ್ರಿವಿಕ್ರಂ ಮಧ್ಯೆ ಸ್ಪರ್ಧೆ ಜೋರಾಗಿತ್ತು.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಯ ಎರಡನೇ ದಿನ ಆರಂಭ ಆಗಿದೆ. ಮೊದಲ ದಿನ ಭವ್ಯಾ ಗೌಡ ಅವರು ಎಲಿಮಿನೇಟ್ ಆಗಿ ಮನೆಗೆ ತೆರಳಿದ್ದಾರೆ. ಸದ್ಯ ಬಿಗ್ ಬಾಸ್ನಲ್ಲಿ ಐವರು ಇದ್ದಾರೆ. ಇವರ ಪೈಕಿ ಮೂವರು ಎಲಿಮಿನೇಟ್ ಆಗಲಿದ್ದು, ಒಬ್ಬರು ರನ್ನರ್ ಅಪ್ ಹಾಗೂ ಒಬ್ಬರು ವಿನ್ನರ್ ಆಗಲಿದ್ದಾರೆ. ಹೀಗಿರುವಾಗಲೇ ಟಾಪ್ ಐದರಲ್ಲಿ ಇಬ್ಬರು ಪ್ರಮುಖರು ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಫಿನಾಲೆಯಲ್ಲಿ ಈ ಬಾರಿ ಆರು ಮಂದಿ ಇದ್ದಾರೆ. ತ್ರಿವಿಕ್ರಂ, ಹನುಮಂತ, ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ, ರಜತ್ ಫಿನಾಲೆಯಲ್ಲಿ ಇದ್ದಾರೆ. ಇವರ ಪೈಕಿ ಭವ್ಯಾ ಗೌಡ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರು. ಇವರಿಗೆ ಬಿದ್ದ ವೋಟ್ಗಳ ಸಂಖ್ಯೆ 64,48,853 ಆಗಿತ್ತು. ಇಂದು ಪ್ರಮುಖ ಎರಡು ಎಲಿಮಿನೇಷನ್ ನಡೆದಿದೆ ಎಂದು ಹೇಳಲಾಗುತ್ತಿದೆ.
ರಜತ್ ಅವರು ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಅವರು ಟಾಪ್ ಐದರಿಂದ ಎಲಿಮಿನೇಟ್ ಆಗುವ ಮೊದಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. 50 ದಿನಗಳ ಬಳಿಕ ದೊಡ್ಮನೆಗೆ ಬಂದ ಅವರು ಕಪ್ ಗೆಲ್ಲಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದರು. ಆದರೆ, ಈ ಆಸೆ ಈಡೇರಿಲ್ಲ ಎನ್ನಲಾಗುತ್ತಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದ್ದರು.
ರಜತ್ ಬಳಿಕ ಮಂಜು ಅವರು ಕಡಿಮೆ ವೋಟ್ ಪಡೆದು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಸಿನಿಮಾ ಮೂಲಕ ಗಮನ ಸೆಳೆದ ಅವರು ದೊಡ್ಮನೆಯಲ್ಲಿ ಕೊನೆಯ ದಿನಗಳಲ್ಲಿ ಮಿಂಚಲು ಸಾಧ್ಯವಾಗಿಲ್ಲ. ಅವರು ದಿನ ಕಳೆದಂತೆ ಸಾಕಷ್ಟು ಡಲ್ ಆಗುತ್ತಾ ಬಂದರು. ಇದು ಅವರಿಗೆ ಸಾಕಷ್ಟು ಪರಿಣಾಮ ಬೀರಿತು ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ‘ರಜತ್ ರೀತಿಯ ಮಗನಿರಬಾರದು’; ಸುದೀಪ್ ಎದುರು ಹೇಳಿದ ಹನುಮಂತ
ಈ ಮೂಲಕ ಟಾಪ್ ಮೂರರಲ್ಲಿ ಮೋಕ್ಷಿತಾ ಪೈ, ಹನುಮಂತ ಹಾಗೂ ತ್ರಿವಿಕ್ರಂ ಅವರು ಇದ್ದಾರೆ. ಇವರ ಪೈಕಿ ಒಬ್ಬರು ಎಲಿಮಿನೇಟ್ ಆಗಲಿದ್ದು, ಟಾಪ್ ಮೂರರಲ್ಲಿ ಇಬ್ಬರು ಇರಲಿದ್ದಾರೆ. ಇವರ ಪೈಕಿ ವಿನ್ ಆಗೋದು ಯಾರು ಎನ್ನುವ ಕುತೂಹಲ ಜೋರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Sun, 26 January 25