‘ಬಿಗ್ ಬಾಸ್​ ಕನ್ನಡ ಸೀಸನ್ 12’ರ ನಾಲ್ಕು ಸ್ಪರ್ಧಿಗಳ ಹೆಸರು ಶನಿವಾರವೇ ರಿವೀಲ್?

ಕ್ವಾಟ್ಲೆ ಕಿಚನ್ ಶೋನ ಫೈನಲ್‌ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12ರ ನಾಲ್ಕು ಸ್ಪರ್ಧಿಗಳ ಹೆಸರು ರಿವೀಲ್ ಆಗಲಿದೆ. ಇದು ಬಿಗ್ ಬಾಸ್ ಅಭಿಮಾನಿಗಳನ್ನು ಕ್ವಾಟ್ಲೆ ಕಿಚನ್ ವೀಕ್ಷಿಸಲು ಪ್ರೇರೇಪಿಸುವ ಉದ್ದೇಶ ಹೊಂದಿದೆ. ಈ ಮೊದಲೂ ಇದೇ ರೀತಿಯ ತಂತ್ರ ಬಳಸಿ ಯಶಸ್ವಿಯಾಗಿದೆ .

‘ಬಿಗ್ ಬಾಸ್​ ಕನ್ನಡ ಸೀಸನ್ 12’ರ ನಾಲ್ಕು ಸ್ಪರ್ಧಿಗಳ ಹೆಸರು ಶನಿವಾರವೇ ರಿವೀಲ್?
Bigg Boss (1)

Updated on: Sep 25, 2025 | 7:00 AM

ಒಂದು ಶೋನ ಪ್ರಮೋಟ್​ ಮಾಡಲು ಹಲವು ವಿಧಾನಗಳು ಇರುತ್ತವೆ. ಈಗ ‘ಕ್ವಾಟ್ಲೆ ಕಿಚನ್’ ಶೋ ಫಿನಾಲೆ ಶನಿವಾರ (ಸೆಪ್ಟೆಂಬರ್ 27) ನಡೆಯಲಿದೆ. ಇದನ್ನು ಪ್ರಮೋಟ್ ಮಾಡಲು ಹೊಸ ತಂತ್ರ ರೂಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ನಾಲ್ಕು ಸ್ಪರ್ಧಿಗಳ ಹೆಸರು ಈ ವೇಳೆ ರಿವೀಲ್ ಆಗಲಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಈ ರೀತಿ ಮಾಡುವುದರಿಂದ ಬಿಗ್ ಬಾಸ್ ಪ್ರಿಯರು ‘ಕ್ವಾಟ್ಲೆ ಕಿಚನ್’ ವೀಕ್ಷಿಸುತ್ತಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸಮಯದಲ್ಲೂ ಇದೇ ರೀತಿ ಮಾಡಲಾಗಿತ್ತು. ‘ರಾಜ ರಾಣಿ’ ಶೋನ ಫಿನಾಲೆ ಬಿಗ್ ಬಾಸ್ ಹಿಂದಿನ ದಿನ ನಡೆದಿತ್ತು. ಈ ವೇಳೆ ನಾಲ್ಕು ಸ್ಪರ್ಧಿಗಳ ಹೆಸರನ್ನು ಈ ಶೋನಲ್ಲೇ ರಿವೀಲ್ ಮಾಡಲಾಗಿತ್ತು. ಈಗಲೂ ಹಾಗೆಯೇ ಮಾಡಲು ಚಿಂತಿಸಲಾಗಿದೆ ಎಂದು ಹೇಳಲಾಗುತ್ತಾ ಇದೆ.

ಇದು ಸೋಶಿಯಲ್ ಮೀಡಿಯಾ ಯುಗ. ಬಿಗ್ ಬಾಸ್​​ಗೆ ಹೋಗುವವರ ಹೆಸರುಗಳನ್ನು ಎಷ್ಟೇ ಗುಟ್ಟಾಗಿ  ಇಡಬೇಕು ಎಂದರೂ ಅದು ಸಾಧ್ಯವಾಗೋದಿಲ್ಲ. ಬಹುತೇಕ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಮೊದಲೇ ಲೀಕ್ ಆಗಿ ಬಿಡುತ್ತವೆ. ಹೀಗಾಗಿ, ಕಲರ್ಸ್ ಕನ್ನಡ ವಾಹಿನಿ ಕಡೆಯಿಂದಲೇ ನಾಲ್ಕು ಹೆಸರನ್ನು ರಿವೀಲ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ‘ಕ್ವಾಟ್ಲೆ ಕಿಚನ್’ ಶೋಗೂ ಮೈಲೇಜ್ ಸಿಕ್ಕಂತೆ ಆಗಲಿದೆ.

ಇದನ್ನೂ ಓದಿ
ಪುನೀತ್ ರಾಜ್​ಕುಮಾರ್ ಯಾವಾಗಲೂ ಸರಳ ಉಡುಗೆ ಧರಿಸುತ್ತಿದ್ದಿದ್ದೇಕೆ?
ಸಾಯಿ ಪಲ್ಲವಿ ಪಡಿಯಚ್ಚು ಪೂಜಾ ಕಣ್ಣನ್;  ಕನ್​ಫ್ಯೂಸ್ ಆಗೋದು ಗ್ಯಾರಂಟಿ
‘ಓಜಿ’ ಟ್ರೇಲರ್ ಈವೆಂಟ್​ನಲ್ಲಿ ಮಳೆಯಲ್ಲಿ ನೆನೆದು ಹಾಸಿಗೆ ಹಿಡಿದ ಪವನ್
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೂ ಮೊದಲು ಈ ಸಂಪ್ರದಾಯ ಕೈ ಬಿಟ್ಟ ವಾಹಿನಿ

ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ಶರ್ಮಿಳಾ, ಕಾವ್ಯಾ, ದಿಲೀಪ್ ಶೆಟ್ಟಿ, ರಘು, ಚಂದ್ರು, ಚಂದನ್ ಇದ್ದಾರೆ. ಫಿನಾಲೆಗೆ ರಾಜ್ ಬಿ. ಶೆಟ್ಟಿ, ಶನೀಲ್ ಗೌತಮ್ ಅವರು ಆಗಮಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಸೆಪ್ಟೆಂಬರ್ 28ರಂದು ಸಂಜೆ 6 ಗಂಟೆಯಿಂದ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಒಟ್ಟೂ 17-18 ಸ್ಪರ್ಧಿಗಳು ಈ ಬಾರಿ ದೊಡ್ಮನೆ ಪ್ರವೇಶ ಮಾಡಲಿದ್ದಾರೆ. ಈ ಬಾರಿ ‘ಬಿಗ್ ಬಾಸ್ ಕನ್ನಡ’ಕ್ಕೆ ಜಿಯೋ ಹಾಟ್​ಸ್ಟಾರ್​ನಲ್ಲಿ ಲೈವ್ ಇರಲಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.