ವೈಯಕ್ತಿಕ ದ್ವೇಷಕ್ಕೆ ನಿಯಮ ಮುರಿದ ಮೋಕ್ಷಿತಾಗೆ ಸುದೀಪ್ ಪಾಠ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರ ಶನಿವಾರದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮೋಕ್ಷಿತಾಗೆ ಪಾಠ ಮಾಡಿದರು. ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡ ಮೋಕ್ಷಿತಾ, ಗೌತಮಿ ಕ್ಯಾಪ್ಟನ್ ಆಗುವಂತೆ ಮಾಡಿದ್ದರು.
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಹಲವು ಟ್ವಿಸ್ಟ್, ಟರ್ನ್ಗಳು ನಡೆದಿವೆ. ಶನಿವಾರದ ಎಪಿಸೋಡ್ಗೆ ಬಂದ ಸುದೀಪ್ ಸಹ ಕಳೆದ ವಾರ ಮನೆಯಲ್ಲಿ ಆದ ಘಟನೆಗಳನ್ನು ಧಾರಾವಾಹಿ ಎಪಿಸೋಡ್ಗೆ ಹೋಲಿಕೆ ಮಾಡಿದರು. ವಾರಗಟ್ಟಲೆ ಕೂತು ಬರೆದರೂ ಈ ರೀತಿ ಟ್ವಿಸ್ಟ್ ಮತ್ತು ಟರ್ನ್ಗಳು ತರಲಾಗುವುದಿಲ್ಲ ಅಂಥಹಾ ಅದ್ಭುತ ತಿರುವುಗಳು ಈ ವಾರ ಬಿಗ್ಬಾಸ್ ಮನೆಯಲ್ಲಿ ನಡೆದಿವೆ ಎಂದರು. ವಿಶೇಷವಾಗಿ ಮೋಕ್ಷಿತಾ ಹಾಗೂ ಗೌತಮಿ ನಡುವೆ ನಡೆದ ಘಟನೆ ಬಗ್ಗೆ ಸುದೀಪ್ ಮಾತನಾಡಿದರು.
ಮೋಕ್ಷಿತಾಗೆ ಕ್ಯಾಪ್ಟನ್ ಆಗುವ ಅವಕಾಶ ಇತ್ತು, ಆದರೆ ಗೌತಮಿಯ ಸಹಾಯವನ್ನು ಅದಕ್ಕಾಗಿ ಅವರು ಪಡೆಯಬೇಕಿತ್ತು, ಆದರೆ ತಾವು ಗೌತಮಿಯ ಸಹಾಯ ಪಡೆಯುವುದಿಲ್ಲ ಎಂದು ನಿರಾಕರಿಸಿದರು. ಇದರಿಂದ ಅವಕಾಶ ಅವರ ಕೈತಪ್ಪಿ ಹೇಗೋ ಗೌತಮಿಗೆ ಹೋಯ್ತು, ಅದೃಷ್ಟದಿಂದ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಗೌತಮಿ ಆಟದಲ್ಲಿ ಗೆದ್ದು ಮನೆಯ ಕ್ಯಾಪ್ಟನ್ ಆಗಿಬಿಟ್ಟರು.
ಈ ಬಗ್ಗೆ ಸುದೀಪ್ ಜೊತೆ ಮಾತನಾಡಿದ ಗೌತಮಿ, ಕಳೆದ ವಾರ ಅವರು ಕ್ಯಾಪ್ಟನ್ ಆಗಬಾರದು ಎಂದು ನಾನೇ ತಡೆದು ಈಗ ಅವರ ಬಳಿ ಹೋಗಿ ಸಹಾಯ ಕೇಳುವುದಕ್ಕೆ ನನ್ನ ಆತ್ಮಸಾಕ್ಷಿ ಅಡ್ಡ ಬಂತು ಹಾಗಾಗಿ ನಾನು ಅವರನ್ನು ಕೇಳಲಿಲ್ಲ ಎಂದರು. ಅದಕ್ಕೆ ಉತ್ತರಿಸಿದ ಸುದೀಪ್, ನೀವು ನಿಮ್ಮ ಆತ್ಮಸಾಕ್ಷಿಗೆ ಗೌರವ ಕೊಟ್ಟಿರಿ, ಆದರೆ ಬಿಗ್ಬಾಸ್ ಮನೆಯಲ್ಲಿ ನಿಯಮ ಎಂಬುದು ಇರುತ್ತದೆ. ನೀವು ಆಯ್ಕೆ ಆಗಿದ್ದೀರೆಂದರೆ ನೀವು ಆ ಟಾಸ್ಕ್ ಮಾಡಬೇಕು, ನಿಯಮ ಮುರಿದಿದ್ದಕ್ಕೆ ನಿಮಗೆ ಶಿಕ್ಷೆ ಆಗಲಿದೆ. ಆ ಶಿಕ್ಷೆಯನ್ನು ಬಿಗ್ಬಾಸ್ ನಿರ್ಧಾರ ಮಾಡುತ್ತಾರೆ ಎಂದರು.
ಇದನ್ನೂ ಓದಿ:‘ನಿಮ್ಮ ಅಸ್ತ್ರದಿಂದ, ನಮ್ಮ ವಸ್ತ್ರ ಬೀಳುತ್ತಿದೆ’; ಚೈತ್ರಾ ಕಿರುಚಾಟಕ್ಕೆ ಸುದೀಪ್ ಟಾಂಗ್
ಮಾತು ಮುಂದುವರೆಸಿ, ‘ನನಗೆ ಮಂಜು ಮತ್ತು ಗೌತಮಿ ಅವರು ಬಕೆಟ್ ಎಂದು ಬಿರುದು ಕೊಟ್ಟಿದ್ದರು, ಹಾಗಾಗಿ ಅವರ ಬಳಿ ಹೋಗಿ ಸಹಾಯ ಕೇಳುವುದು ಬೇಡ ಎಂದುಕೊಂಡು ಸುಮ್ಮನಾದೆ’ ಎಂದರು. ಅದಕ್ಕೆ ಮೋಕ್ಷಿತಾಗೆ ಬುದ್ಧಿವಾದ ಹೇಳಿದ ಸುದೀಪ್, ‘ನೀವು ಇಲ್ಲಿ ಗೆಲ್ಲಲು ಬಂದಿದ್ದೀರೋ ಅಥವಾ ಮಂಜು ಹಾಗೂ ಗೌತಮಿ ಅವರನ್ನು ಮೆಚ್ಚಿಸಲು ಬಂದಿದ್ದೀರೋ, ಅವರು ಏನಾದರೂ ಅಂದುಕೊಳ್ಳಲಿ, ಹೇಗಾದರೂ ಆಡಿಕೊಳ್ಳಲಿ ನಿಮ್ಮ ಆಟ ನೀವು ಆಡಿ’ ಎಂದರು. ಕೊನೆಯಲ್ಲಿ ನೀವು ಆಟವನ್ನು ಚೆನ್ನಾಗಿಯೇ ಆಡುತ್ತಿದ್ದೀರಿ ಆದರೆ ಗೆಲ್ಲುವ ಗುರಿ ಮಾತ್ರವೇ ಇರಲಿ’ ಎಂದರು.
ಇನ್ನು ಕ್ಯಾಪ್ಟನ್ ಆದ ಗೌತಮಿ ಬಳಿ ಮಾತನಾಡಿ, ನಿಮಗೆ ಅವಕಾಶ ಅದೃಷ್ಟದಿಂದ ಬಂತಾದರೂ ನೀವು ಆಟವನ್ನು ಕಷ್ಟಪಟ್ಟು ಆಡಿ ಗೆದ್ದಿದ್ದೀರಿ ನಿಮಗೆ ಆಲ್ ದಿ ಬೆಸ್ಟ್ ಎಂದರು. ಅಲ್ಲದೆ ನಾಮಿನೇಷನ್ನಲ್ಲಿ ಇದ್ದ ಕ್ಯಾಪ್ಟನ್ ಗೌತಮಿಯನ್ನು ಸೇಫ್ ಸಹ ಮಾಡಿದರು. ಈ ವಾರ ಇಬ್ಬರು ಮನೆಯಿಂದ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾನುವಾರ ಏನಾಗಲಿದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ