‘ನಿಮ್ಮ ಅಸ್ತ್ರದಿಂದ, ನಮ್ಮ ವಸ್ತ್ರ ಬೀಳುತ್ತಿದೆ’; ಚೈತ್ರಾ ಕಿರುಚಾಟಕ್ಕೆ ಸುದೀಪ್ ಟಾಂಗ್
ಚೈತ್ರಾ ಕುಂದಾಪುರ ಅವರು ಈ ಬಾರಿ ರಜತ್ ಬಳಿ ಕಿರುಚಾಡಿದ್ದರು. ಏನೇ ವಿಚಾರ ಬಂದರೂ ಚೈತ್ರಾ ಜೋರು ಧ್ವನಿಯಲ್ಲೇ ಮಾತನಾಡಿದ್ದರು. ಹತ್ತಿರ ಇದ್ದರೂ ಕಿರಿಚಾಡಿದ್ದರು. ಈ ಕಾರಣದಿಂದಲೇ ಚೈತ್ರಾ ಅವರ ಧ್ವನಿ ಬಿದ್ದು ಹೋಗಿತ್ತು. ‘ಚೈತ್ರಾ ಅವರೇ ಹೇಗಿದ್ದೀರಾ’ ಎಂದು ಸುದೀಪ್ ಕೇಳಿದ್ದರು. ‘ಧ್ವನಿ ಬಿದ್ದೋಗಿದೆ’ ಎಂದರು ಚೈತ್ರಾ.
ಈ ವಾರ ಚೈತ್ರಾ ಕುಂದಾಪುರ ಅವರು ಸಖತ್ ಕೂಗಾಟ ನಡೆಸಿದ್ದರು. ಚೈತ್ರಾ ಕುಂದಾಪುರ ಹಾಗೂ ರಜತ್ ಮಧ್ಯೆ ಕಿತ್ತಾಟ ನಡೆದಿದೆ. ಚೈತ್ರಾ ಕುಂದಾಪುರ ಅವರನ್ನು ಉಸ್ತುವಾರಿಗೆ ಕುಳಿಸಲಾಗಿತ್ತು. ಇದು ಚೈತ್ರಾ ಕೋಪಕ್ಕೆ ಕಾರಣ ಆಗಿತ್ತು. ತಮಗೆ ಆಡಲು ಬಿಡಲಿಲ್ಲ ಎಂಬುದು ಅವರ ಸಿಟ್ಟಾಗಿತ್ತು. ಈ ವಿಚಾರ ಇಟ್ಟುಕೊಂಡು ಪದೇ ಪದೇ ಕೂಗಾಟ ನಡೆಸುತ್ತಾ ಇದ್ದರು. ಈ ವಿಚಾರವನ್ನು ಸುದೀಪ್ ಚರ್ಚೆ ಮಾಡಿದ್ದಾರೆ. ಚೈತ್ರಾಗೆ ಕೆಲವು ಕಿವಿಮಾತನ್ನು ಸುದೀಪ್ ಅವರು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರು ಈ ಬಾರಿ ರಜತ್ ಬಳಿ ಕಿರುಚಾಡಿದ್ದರು. ಏನೇ ವಿಚಾರ ಬಂದರೂ ಚೈತ್ರಾ ಜೋರು ಧ್ವನಿಯಲ್ಲೇ ಮಾತನಾಡಿದ್ದರು. ಹತ್ತಿರ ಇದ್ದರೂ ಕಿರಿಚಾಡಿದ್ದರು. ಈ ಕಾರಣದಿಂದಲೇ ಚೈತ್ರಾ ಅವರ ಧ್ವನಿ ಬಿದ್ದು ಹೋಗಿತ್ತು. ‘ಚೈತ್ರಾ ಅವರೇ ಹೇಗಿದ್ದೀರಾ’ ಎಂದು ಸುದೀಪ್ ಕೇಳಿದ್ದರು. ‘ಧ್ವನಿ ಬಿದ್ದೋಗಿದೆ’ ಎಂದರು ಚೈತ್ರಾ.
‘ಕೂಗೋದನ್ನು ಕಡಿಮೆ ಮಾಡಿ. ಹತ್ತಿರ ಇದ್ದೂ ಕೂಗ್ತೀರಾ. ಅದನ್ನು ಕಡಿಮೆ ಮಾಡಿ. ನೀವು ಇಟ್ಟ ಪಾಯಿಂಟ್ ಸರಿ ಇತ್ತು. ಆದರೆ, ಅದನ್ನು ಕೂಗುತ್ತಾ ಹೇಳಿದ್ರಿ. ನೀವು ಆ ರೀತಿ ಕೂಗಬಾರದಿತ್ತು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ಗಳು ಬರುತ್ತಿವೆ. ಅವರು ಅಲ್ಲಿ ಕೂಗ್ತಾ ಇದ್ರೆ ಇಲ್ಲಿ ನಮ್ಮ ಕಿವಿ ಹೋಗ್ತಿದೆ ಎನ್ನುತ್ತಿದ್ದಾರೆ. ಇದು ನನ್ನ ಅಭಿಪ್ರಾಯವೂ ಹೌದು. ಆದರೆ, ಇದನ್ನು ಹೇಳೋಕೆ ಆಗಲ್ಲ’ ಎಂದಿದ್ದಾರೆ ಸುದೀಪ್.
ಆ ಬಳಿಕ ಫನ್ ಆಗಿ ಚೈತ್ರಾ ವಿಚಾರ ಹೇಳಿದರು. ‘ಅರಚಾಟವನ್ನೇ ಅಸ್ತ್ರ ಮಾಡಿಕೊಳ್ಳಬೇಡಿ. ನಿಮ್ಮ ಅಸ್ತ್ರದಿಂದ, ನಮ್ಮ ವಸ್ತ್ರ ಬೀಳುತ್ತಿದೆ’ ಎಂದು ಚೈತ್ರಾ ಕಾಲೆಳೆದರು. ‘ಈ ಸ್ಪೀಕರ್ ಇಂದ ಅಷ್ಟೊಂದು ಧ್ವನಿ ಹೇಗೆ ಬರುತ್ತದೆ’ ಎಂದು ಸುದೀಪ್ ಅವರು ಚೈತ್ರಾ ಬಳಿ ಕೇಳಿದರು.
ಇದನ್ನೂ ಓದಿ: ಮಾತಿನ ಮೂಲಕವೇ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ ಚೈತ್ರಾ ಕುಂದಾಪುರ
ಚೈತ್ರಾ ನೋಡೋಕೆ ಸಣ್ಣಕಿದ್ದರೂ ಅವರು ಏರು ಧ್ವನಿಯಲ್ಲಿ ಕಿರುಚಾಡುತ್ತಾ ಇದ್ದಾರೆ. ಅವರನ್ನು ಮಾತಿನಲ್ಲಿ ಯಾರೂ ಸೋಲಿಸಲು ಸಾಧ್ಯವಾಗುತ್ತಿಲ್ಲ. ರಜತ್ ಹಾಗೂ ಚೈತ್ರಾ ಕೂಗಾಟ ಯಾವ ಹಂತಕ್ಕೆ ಹೋಗಿತ್ತು ಎಂದರೆ ಚೈತ್ರಾ ತಂಡದವರೇ ‘ಸಾಕು ಬಿಡಮ್ಮ’ ಎಂಬ ಮಟ್ಟದವರೆಗೆ ಕೂಗಾಟ ಹಾಗೂ ಕಿರುಚಾಟ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:41 pm, Sat, 7 December 24