ಆಡುತ್ತಿರುವುದು ಮನೆಯವರು, ಆಡಿಸುತ್ತಿರುವುದು ಸಂತು-ಪಂತು, ತಕ್ಕ ಪಾಠ ಕಲಿಸುತ್ತೀನೆಂದ ವಿನಯ್

|

Updated on: Jan 18, 2024 | 11:49 PM

Bigg Boss: ಮನೆಯ ಸದಸ್ಯರು ಫಿನಾಲೆ ತಲುಪಲು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಆಡಲು ಅವಕಾಶ ಕೊಡಿಸುತ್ತಿರುವುದು ಸಂತು-ಪಂತು! ಇದು ಅವರಿಗೆ ಮಾರಕವಾಗುತ್ತಾ?

ಆಡುತ್ತಿರುವುದು ಮನೆಯವರು, ಆಡಿಸುತ್ತಿರುವುದು ಸಂತು-ಪಂತು, ತಕ್ಕ ಪಾಠ ಕಲಿಸುತ್ತೀನೆಂದ ವಿನಯ್
Follow us on

ಬಿಗ್​ಬಾಸ್ ಕನ್ನಡ ಸೀಸನ್ 10ರ (BiggBoss) ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಎಲ್ಲರೂ ಸಹ ಫಿನಾಲೆ ವಾರ ತಲುಪಲು ನಾನಾ ಪ್ರಯತ್ನಗಳ್ನು ಮಾಡುತ್ತಿದ್ದಾರೆ. ಕಡೆಯ ವಾರದಲ್ಲಿ ಬಿಗ್​ಬಾಸ್​ ಕೆಲವು ಟಾಸ್ಕ್​ಗಳನ್ನು ನೀಡಿದ್ದು, ಆಡಿ ತಮ್ಮ ಶಕ್ತಿ, ಪ್ರತಿಭೆ ಪ್ರೂವ್ ಮಾಡಿಕೊಳ್ಳುವ ಕಾತರ ಎಲ್ಲರಿಗೂ ಇದೆ. ಆದರೆ ಯಾರು ಟಾಸ್ಕ್​ ಅನ್ನು ಆಡಬೇಕು ಎಂಬ ಗೊಂದಲ ಮನೆಯಲ್ಲಿ ಪ್ರತಿಬಾರಿ ಸೃಷ್ಟಿಯಾಗುತ್ತಿದೆ. ಆದರೆ ಟಾಸ್ಕ್​ ಅನ್ನು ಯಾರು ಆಡಬೇಕು ಎಂಬುದನ್ನು ನಿರ್ಧರಿಸುವ ಯತ್ನ ಮಾಡುತ್ತಿರುವುದು ಸಂತು-ಪಂತು ಜೋಡಿ.

ಪ್ರತಿಯೊಬ್ಬರೂ ಸಹ ಟಾಸ್ಕ್ ಅನ್ನು ನಾನು ಆಡಬೇಕು ನಾನು ಆಡಬೇಕು ಎಂದು ಅವಕಾಶಕ್ಕಾಗಿ ಕ್ಯಾಪ್ಟನ್ ಸಂಗೀತಾ ಬಳಿ ಬೇಡಿಕೆ ಇಡುತ್ತಿದ್ದಾರೆ. ಇದರಿಂದಾಗಿ ಇಷ್ಟವಿಲ್ಲದಿದ್ದರೂ ವೋಟಿಂಗ್​ಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಮನೆಯ ಇತರೆ ಸದಸ್ಯರ ಮತಗಳು ಮೊದಲೇ ಇಂಥಹವರಿಗೆಂದು ನಿರ್ಧಾರಿತವಾಗಿರುವ ಕಾರಣ ಎಲ್ಲರಿಗೂ ಒಂದೊಂದು ಮತಗಳು ಮಾತ್ರವೇ ಧಕ್ಕಿ ಕೊನೆಗೆ ಸಂತು-ಪಂತು ಯಾರಿಗೆ ಮತ ಹಾಕುತ್ತಾರೊ ಅವರು ಆಡುವಂತಾಗುತ್ತಿದೆ.

ಇದನ್ನು ಅರಿತುಕೊಂಡಿರುವ ಸಂತು-ಪಂತು ತಮ್ಮ ಒಗ್ಗಟ್ಟಿನ ಪವರ್​ ಅನ್ನೇ ಇಟ್ಟುಕೊಂಡು ಮುಂದಿನ ಟಾಸ್ಕ್​ನಲ್ಲಿ ಯಾರಿಗೆ ಅವಕಾಶ ಕೊಡಬೇಕು ಯಾರಿಗೆ ಕೊಡಬಾರದು ಎಂದು ನಿರ್ಣಯಿಸಲು ಆರಂಭಿಸಿದ್ದಾರೆ. ಗುರುವಾರದ ಎಪಿಸೋಡ್​ನಲ್ಲಿ ಇದೇ ತಂತ್ರ ಉಪಯೋಗಿಸಿ ಕಾರ್ತಿಕ್​ಗೆ ಆಡಲು ಅವಕಾಶ ಮಾಡಿಕೊಟ್ಟರು. ಅಂತೆಯೇ ಟಾಸ್ಕ್ ಆಗಿ ಕಾರ್ತಿಕ್ ಗೆದ್ದರು ಸಹ. ಕಳೆದು ಹೋಗಿದ್ದ ಕಾರ್ತಿಕ್​ಗೆ ಮರುಜೀವ ಆ ಗೆಲುವಿನಿಂದ ಧಕ್ಕಿದಂತಾಯ್ತು.

ಇದನ್ನೂ ಓದಿ:ತನಿಷಾ ಬಿಗ್​ಬಾಸ್ ಪ್ರಯಾಣ ಅಂತ್ಯ, ಬಿಗ್​ಬಾಸ್​ಗೆ ಕೇಳಿದರು ಪ್ರಶ್ನೆ

ಆ ಟಾಸ್ಕ್ ಆಡಿದ ಬಳಿಕ ಕಾರ್ತಿಕ್​ಗೆ ಮುಂದೆಯೂ ನಿನ್ನನ್ನು ಆಡಿಸುತ್ತೀವಿ, ಯೋಚನೆ ಮಾಡಬೇಡ ಎಂದು ಗಾಡ್​ಫಾದರ್​ಗಳ ರೀತಿ ಅಭಯವನ್ನು ಸಹ ಸಂತು-ಪಂತು ನೀಡಿದರು. ಇವರ ಈ ತಂತ್ರಗಾರಿಕೆ ಅರಿತ ವಿನಯ್, ತುಕಾಲಿ ಬಳಿ ಬಂದು, ನೀವು ರಾಜಕೀಯ ಮಾಡುತ್ತಿದ್ದೀರ ಎಂದರು. ಅದಕ್ಕೆ ತುಕಾಲಿ, ಇದಕ್ಕೆ ರಾಜಕೀಯ ಎಂದು ಹೆಸರಿಟ್ಟೆಯಾ? ಎಂದರು. ಇರಲಿ, ಇರಲಿ ಆಡಿ ನಿಮಗೆ ಇಷ್ಟ ಬಂದಂತೆ ಆಡಿ, ಇನ್ನೂ ಹತ್ತು ದಿನ ಇದೆಯಲ್ಲ, ಸರಿಯಾಗಿ ಮಾಡುತ್ತೇನೆ ಎಂದರು.

ಅವರ ಕಡೆಯ ಮತವಾಗಿದ್ದ ತನಿಷಾ ಇದೀಗ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೂ ಸಂತು-ಪಂತು ಇಬ್ಬರದ್ದೂ ಒಂದೇ ಮತವಾದ್ದರಿಂದ ಈಗಲೂ ಅವರು ಟಾಸ್ಕ್​ಗೆ ಸ್ಪರ್ಧಿಗಳನ್ನು ಆರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾಗಿದೆ. ಅವರ ಈ ಒಗ್ಗಟ್ಟಿನಿಂದ ಯಾರನ್ನು ಮುಂದೆ ಕಳಿಸುತ್ತಾರೆ ಅಥವಾ ಅವರ ಹಿಂದೆ ಉಳಿದು ಬಿಡುತ್ತಾರಾ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:48 pm, Thu, 18 January 24