ಬಿಗ್ ಬಾಸ್ ನಿರೂಪಣೆಗೆ ಹೊಸ ಹೋಸ್ಟ್ ಬಂದಾಯ್ತು; ಪ್ರೋಮೋ ರಿಲೀಸ್

|

Updated on: Sep 06, 2024 | 7:24 AM

ತೆಲುಗಿನಲ್ಲಿ ಬಿಗ್ ಬಾಸ್ ಆರಂಭ ಆಗಿದೆ. ಅಕ್ಕಿನೇನಿ ನಾಗಾರ್ಜುನ ಅವರು ಈ ಬಿಗ್ ಬಾಸ್ ಶೋ ನಡೆಸಿಕೊಡುತ್ತಿದ್ದಾರೆ. ಕನ್ನಡದಲ್ಲಿ, ತಮಿಳಿನಲ್ಲಿ ಶೋನ ನಡೆಸಿಕೊಡೋರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರ ಸಿಕ್ಕಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ಅವರು ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ.

ಬಿಗ್ ಬಾಸ್ ನಿರೂಪಣೆಗೆ ಹೊಸ ಹೋಸ್ಟ್ ಬಂದಾಯ್ತು; ಪ್ರೋಮೋ ರಿಲೀಸ್
Follow us on

ಎಲ್ಲಾ ಭಾಷೆಗಳಲ್ಲಿ ಬಿಗ್ ಬಾಸ್ ಆರಂಭಕ್ಕೆ ಕ್ಷಣಗಣೆ ಆರಂಭ ಆಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಕನ್ನಡದ ವಿಚಾರದಲ್ಲಿ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇನ್ನು, ತಮಿಳಿನಲ್ಲಿ ಹೊಸ ನಿರೂಪಕ ಬಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಪ್ರೋಮೋ ರಿಲೀಸ್ ಮಾಡಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇಷ್ಟು ವರ್ಷ ತಮಿಳಿನಲ್ಲಿ ಕಮಲ್ ಹಾಸನ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಆದರೆ, ಸೀಸನ್ 8ಕ್ಕೆ ತಾವು ನಿರೂಪಕರಾಗಿ ಇರುವುದಿಲ್ಲ ಎಂದು ಹೇಳಿದ್ದರು. ಬೇರೆ ಸಿನಿಮಾಗಳ ಕಮಿಟ್​ಮೆಂಟ್ ಹಾಗೂ ಮತ್ತಿತರ ಕಾರಣಗಳಿಂದ ಅವರು ಬಿಗ್ ಬಾಸ್ ತೊರೆಯಬೇಕಾದ ಅನಿವಾರ್ಯತೆ ಬಂದಿತ್ತು. ಆ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಅವರು ‘ಬಿಗ್ ಬಾಸ್ ತಮಿಳು ಸೀಸನ್ 8’ ಅನ್ನು ನಡೆಸಿಕೊಡಲಿದ್ದಾರೆ. ಶೀಘ್ರವೇ ತಮಿಳು ಬಿಗ್ ಬಾಸ್ ಆರಂಭ ಆಗಲಿದೆ.

ಇತ್ತೀಚೆಗೆ ತಮಿಳು ಬಿಗ್ ಬಾಸ್​ನ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ವಿಜಯ್ ಅವರ ಗ್ರ್ಯಾಂಡ್ ಎಂಟ್ರಿ ಆಗಿದೆ. ಇದರಿಂದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಕೋಟ್ ಧರಿಸಿ ವಿಜಯ್ ಅವರು ‘ಬಿಗ್ ಬಾಸ್’ ನಿರೂಪಣೆ ಮಾಡಲು ರೆಡಿ ಆಗಿದ್ದಾರೆ. ದಳಪತಿ ವಿಜಯ್ ಅವರಿಗೆ ರಿಯಾಲಿಟಿ ಶೋ ಹೊಸದಲ್ಲ. ಈ ಮೊದಲು ಅವರು ಮಾಸ್ಟರ್​ಶೆಫ್​ನ ತಮಿಳಿನಲ್ಲಿ ನಡೆಸಿಕೊಟ್ಟಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಪ್ರೋಮೋ ಶೂಟ್​ಗೆ ನಡೆದಿದೆ ಸಿದ್ಧತೆ

ಆಗಸ್ಟ್ ತಿಂಗಳಲ್ಲಿ ಕಮಲ್ ಹಾಸನ್ ಅವರು ‘ಬಿಗ್ ಬಾಸ್’ ನಿರೂಪಣೆ ಬಗ್ಗೆ ಸ್ಪಷ್ಟನೆ ನೀಡಿದ್ದರು. ‘ಏಳು ವರ್ಷಗಳ ಹಿಂದೆ ಆರಂಭ ಆದ ಬಿಗ್ ಬಾಸ್ ಜರ್ನಿಯಿಂದ ನಾನು ಬ್ರೇಕ್ ಪಡೆಯುತ್ತೇನೆ. ನಾನು ಮುಂದಿನ ಸೀಸನ್​ನ ನಡೆಸಿಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.