ಬಿಗ್ ಬಾಸ್​ನಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 15 ಲಕ್ಷ ರೂ. ಬಾಚಿಕೊಂಡು ಕಾಲ್ಕಿತ್ತ ವೈಲ್ಡ್ ಕಾರ್ಡ್ ಸ್ಪರ್ಧಿ

ಬಿಗ್ ಬಾಸ್ ತೆಲುಗು 10 ಶೋನಲ್ಲಿ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ಮಿಥಿಲೇಶ್ ಬರೋಬ್ಬರಿ 15 ಲಕ್ಷ ರೂಪಾಯಿ ನಗದು ಆಫರ್ ಪಡೆದು ಮನೆಯಿಂದ ಹೊರನಡೆದಿದ್ದಾರೆ. ಈ ಹಣ ವಿನ್ನರ್ ಪ್ರೈಜ್ ಮನಿಯಿಂದ ಕಡಿತಗೊಳ್ಳಲಿದೆ. ಇತರೆ ಸ್ಪರ್ಧಿಗಳ ಸಮ್ಮತಿ ಪಡೆದು ಮಿಥಿಲೇಶ್ ಶೋಗೆ ಬೈ ಹೇಳಿದ್ದಾರೆ.

ಬಿಗ್ ಬಾಸ್​ನಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 15 ಲಕ್ಷ ರೂ. ಬಾಚಿಕೊಂಡು ಕಾಲ್ಕಿತ್ತ ವೈಲ್ಡ್ ಕಾರ್ಡ್ ಸ್ಪರ್ಧಿ
ಮಿಥಿಲೇಶ್

Updated on: Sep 28, 2026 | 9:00 AM

ಮುಖ್ಯಾಂಶಗಳು

  •  ಬಿಗ್ ಬಾಸ್ ಇತಿಹಾಸದಲ್ಲೇ ಬಿಗ್ ಟ್ವಿಸ್ಟ್
  • 15 ಲಕ್ಷ ಸೂಟ್‌ಕೇಸ್ ಪಡೆದು ಹೊರಬಂದ ಮಿಥಿಲೇಶ್
  • ವೈಲ್ಡ್ ಕಾರ್ಡ್ ಸ್ಪರ್ಧಿಯ ಶಾಕಿಂಗ್ ನಿರ್ಧಾರ 

‘ಬಿಗ್ ಬಾಸ್ ತೆಲುಗು 10’ ರಿಯಾಲಿಟಿ ಶೋನಲ್ಲಿ ವೀಕೆಂಡ್ ಎಪಿಸೋಡ್ ದೊಡ್ಡ ಟ್ವಿಸ್ಟ್ ಎದುರಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಮಿಥಿಲೇಶ್ ಬರೋಬ್ಬರಿ 15 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಶೋನಿಂದ ಹೊರನಡೆದಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಇಂತಹದೊಂದು ಘಟನೆ ನಡೆದಿರಲಿಲ್ಲ. ಈ ನಿರ್ಧಾರ ಪ್ರೇಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಭಾರಿ ಅಚ್ಚರಿ ತಂದಿದೆ. ಇದನ್ನು ಅನೇಕರು ಸ್ಮಾರ್ಟ್ ಮೂವ್ ಎಂದು ಕರೆದಿದ್ದಾರೆ.

ಕಾರ್ಯಕ್ರಮದ ನಿರೂಪಕ ನಾಗಾರ್ಜುನ ಅವರು ಸ್ಪರ್ಧಿಗಳ ಮುಂದೆ ಹಣದ ಸೂಟ್‌ಕೇಸ್ ಇಟ್ಟಿದ್ದರು. ಆರಂಭದಲ್ಲಿ 5 ಲಕ್ಷ ರೂಪಾಯಿ ಆಫರ್ ನೀಡಲಾಗಿತ್ತು. ಆ ಹಣವನ್ನು ತೆಗೆದುಕೊಂಡು ಯಾರು ಬೇಕಾದರೂ ಮನೆಯಿಂದ ಹೊರಹೋಗಬಹುದು ಎಂದು ಹೇಳಿದರು. ಒಂದು ದಿನ ಹಿಂದಷ್ಟೇ ಎಂಟ್ರಿ ಕೊಟ್ಟಿದ್ದ ಮಿಥಿಲೇಶ್ ಹಾಗೂ ಅಪೂರ್ವ ಅವರಿಗೆ ಇದು ಒಳ್ಳೆಯ ಅವಕಾಶವಾಗಿತ್ತು. ಆದರೆ ಇಬ್ಬರೂ ಆರಂಭದಲ್ಲಿ ಈ ಆಫರ್ ನಿರಾಕರಿಸಿದರು.

ಮಿಥಿಲೇಶ್ ತಮಗೆ ಪ್ರೇಕ್ಷಕರ ಪ್ರೀತಿ ಗಳಿಸುವುದು ಮುಖ್ಯ ಎಂದು ಹೇಳಿದರು. ಆದರೆ ನಾಗಾರ್ಜುನ ಅವರು ಆಫರ್ ಮೊತ್ತವನ್ನು 10 ಲಕ್ಷಕ್ಕೆ ಏರಿಸಿದರು. ನಂತರ ಆ ಮೊತ್ತವನ್ನು 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು. ಈ ಬಾರಿ ಮಿಥಿಲೇಶ್ ತಮ್ಮ ನಿರ್ಧಾರ ಬದಲಾಯಿಸಿ ಹಣ ಪಡೆಯಲು ಒಪ್ಪಿಕೊಂಡರು. ಇದರಿಂದ ಮನೆಯ ಇತರ ಸದಸ್ಯರೆಲ್ಲರೂ ಶಾಕ್ ಆದರು.

ಈ 15 ಲಕ್ಷ ರೂಪಾಯಿಗಳನ್ನು ವಿನ್ನರ್ ಪಡೆಯುವ ಬಹುಮಾನದ ಮೊತ್ತದಿಂದ ಕಳೆಯಲಾಗುವುದು ಎಂದು ನಾಗಾರ್ಜುನ ತಿಳಿಸಿದರು. ಹೀಗಾಗಿ ಮಿಥಿಲೇಶ್ ಅವರನ್ನು ತಡೆಯಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಯಿತು. ಆದರೆ ಮಿಥಿಲೇಶ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಕೊನೆಗೆ ಉಳಿದ ಸ್ಪರ್ಧಿಗಳನ್ನು ಒಪ್ಪಿಸುವಲ್ಲಿ ಅವರು ಯಶಸ್ವಿಯಾದರು. ಬಹುತೇಕ ಸ್ಪರ್ಧಿಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ; ಸುದೀಪ್ ಎದುರೇ ರಿವೀಲ್

ಸ್ಪರ್ಧಿಗಳ ಸಮ್ಮತಿ ಸಿಗುತ್ತಿದ್ದಂತೆ ಮಿಥಿಲೇಶ್ 15 ಲಕ್ಷ ರೂಪಾಯಿ ಸೂಟ್‌ಕೇಸ್ ಹಿಡಿದು ಮನೆಯಿಂದ ಹೊರನಡೆದರು. ಈ ಮೂಲಕ ಅವರ ಬಿಗ್ ಬಾಸ್ ಪಯಣ ಅಲ್ಪಾವಧಿಯಲ್ಲೇ ಅಂತ್ಯಗೊಂಡಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬರು ಇಷ್ಟು ದೊಡ್ಡ ಮೊತ್ತದೊಂದಿಗೆ ಹೊರಬಂದದ್ದು ತೆಲುಗು ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us