ಬಿಗ್ಬಾಸ್: ಹೀರೋಯಿನ್ಗೆ ಹೊಡೆದ ಕಮಿಡಿಯನ್, ಮನೆಯಲ್ಲಿ ‘ಬಳೆ’ ಸದ್ದು
Bigg Boss Telugu season 9: ಬಿಗ್ಬಾಸ್ ತೆಲುಗು ಸೀಸನ್ 09 ಪ್ರಾರಂಭವಾಗಿ ಎರಡು ವಾರಗಳಾಗುತ್ತಾ ಬಂದಿದೆ. ಮನೆಯಲ್ಲಿ ಬರೀ ಜಗಳಗಳೇ ನಡೆಯುತ್ತಿವೆ. ಸಂಜನಾ ಅಂತೂ ಹಲವರ ಮೇಲೆ ಈಗಾಗಲೇ ಜಗಳ ಮಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಕಮಿಡಿಯನ್ ಒಬ್ಬರು ನಾಯಕಿ ಮೇಲೆ ಕೈಮಾಡಿದ್ದಾರೆ. ಸಂಜನಾಗೂ ಪೆಟ್ಟು ತಗುಲಿದೆಯಂತೆ.

ತೆಲುಗು ಬಿಗ್ಬಾಸ್ (Telugu Bigg Boss 09) ಶುರುವಾಗಿ ಎರಡು ವಾರ ಆಗುತ್ತಾ ಬಂದಿದೆ. ಮನೆಯಲ್ಲಿ ಜಗಳ, ಬೈದಾಟಗಳು ಬಲು ಜೋರಾಗಿ ನಡೆಯುತ್ತಿವೆ. ಒಬ್ಬರ ಮೇಲೆ ಇನ್ನೊಬ್ಬರು ಕಿತ್ತಾಡುವುದನ್ನೇ ಬಿಗ್ಬಾಸ್ ರಿಯಾಲಿಟಿ ಶೋ ಎಂದರ್ಥ ಮಾಡಿಕೊಂಡಂತೆ ಪರಸ್ಪರರು ಕಿತ್ತಾಡುತ್ತಿದ್ದಾರೆ. ಕನ್ನಡತಿ ಸಂಜನಾ ಸಹ ತಾವೇನು ಕಡಿಮೆಯಲ್ಲ ಎಂಬಂತೆ ಆಗಾಗ್ಗೆ ಕೆಲವರ ಮೇಲೆ ಗಂಟಲು ದೊಡ್ಡದು ಮಾಡಿ ಜಗಳ ಮಾಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ವೇಳೆಯಂತೂ ಕಮಿಡಿಯನ್ ಸುಮನ್ ಶೆಟ್ಟಿ ಬಿಗ್ಬಾಸ್ ಮನೆಯ ಸಹ ಸ್ಪರ್ಧಿಗೆ ಹೊಡೆದೇ ಬಿಟ್ಟಿದ್ದಾರೆ. ಸಂಜನಾ, ತಮಗೂ ಪೆಟ್ಟಾಗಿದೆ ಎಂದು ದೂರಿದ್ದಾರೆ.
ನಿನ್ನೆ, ಟೆನೆಂಟ್ ಆಗಿದ್ದವರಿಗೆ ಪರ್ಮನೆಂಟ್ ಓನರ್ಗಳಾಗುವ ಅವಕಾಶ ನೀಡಲಾಗಿತ್ತು. ಸ್ಪರ್ಧಿಗಳಿಗೆ ಬಾಸ್ಕೆಟ್ ಒಂದನ್ನು ನೀಡಿ, ಅದರಲ್ಲಿರುವ ವಸ್ತುಗಳನ್ನು ಇನ್ನೊಬ್ಬರು ಕದಿಯದಂತೆ ತಡೆಯಬೇಕಿತ್ತು. ಈ ವೇಳೆ ಸಂಜನಾ ಹಾಗೂ ಫ್ಲೋರಾ ಸೂನಿ ಅವರು ಸುಮನ್ ಶೆಟ್ಟಿಯನ್ನು ಟಾರ್ಗೆಟ್ ಮಾಡಿದರು. ಬಾಸ್ಕೆಟ್ನಲ್ಲಿರುವ ವಸ್ತುಗಳನ್ನು ಕದಿಯುವ ಯತ್ನವನ್ನು ಫ್ಲೋರಾ ಸೈನಿ ಮಾಡುವ ಅದನ್ನು ತಡೆಯುವ ಯತ್ನದಲ್ಲಿ ಫ್ಲೋರಾಗೆ ಹೊಡೆದಿದ್ದಾರೆ ಸುಮನ್ ಶೆಟ್ಟಿ. ಅದೂ ಒಂದು ಬಾರಿ ಅಲ್ಲ ಬದಲಿಗೆ ಎರಡು ಬಾರಿ ಅವರಿಗೆ ಹೊಡೆದಿದ್ದಾರೆ. ಈ ವೇಳೆ ಸಂಜನಾ ತಮಗೂ ಸಹ ಏಟು ಬಿದ್ದಿದೆ ಎಂದು ದೂರಿದರು. ಕೊನೆಗೆ ಸುಮನ್ ಅವರನ್ನು ಟಾಸ್ಕ್ನಿಂದ ಎಲಿಮಿನೇಟ್ ಮಾಡಲಾಯ್ತು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಖುಷಿಯಾಗಿದ್ದಾರೆ ಸಂಜನಾ ಗಲ್ರಾನಿ, ವಿಡಿಯೋ ನೋಡಿ
ಟಾಸ್ಕ್ ಎಲ್ಲ ಮುಗಿದ ಬಳಿಕ ಸಂಜನಾ ಹಾಗೂ ಸುಮನ್ ಶೆಟ್ಟಿ ನಡುವೆ ಜೋರಾಗಿ ಜಗಳ ನಡೆದಿದೆ. ಸುಮನ್ ಬೇಸರಗೊಂಡು ಆಟವಾಡದೆ ಕೂತಾಗ ಸಂಜನಾ, ‘ನಮ್ಮನ್ನು ಕೆಟ್ಟವರನ್ನಾಗಿ, ನೀವು ಬಳೆ ಹಾಕಿಕೊಂಡು ಕೂತುಕೊಳ್ಳಿ’ ಎಂದು ಖಾರವಾಗಿ ನುಡಿದರು. ಇದರಿಂದ ಸುಮನ್ಗೆ ಬಹಳ ಸಿಟ್ಟು ಬಂತು. ಸುಮನ್ ಸಹ ಸಂಜನಾ ವಿರುದ್ಧ ಜೋರು ದನಿಯಲ್ಲಿ ಜಗಳ ಆಡಿದರು.
ಸಂಜನಾ ಕಳೆದ ವಾರ, ಮನೆಯ ಕೆಲವರು ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ ಎಂದು ದೂರಿದ್ದರು. ಆದರೆ ಈ ವಾರ ಅವರೇ, ಬಳೆಗಳ ಬಗ್ಗೆ ಮಾತನಾಡಿದ್ದು, ಬಳೆ ಹಾಕಿದವರು ಬಲಹೀನರು ಎಂಬರ್ಥದ ಮಾತುಗಳನ್ನಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಕನ್ನಡ ಬಿಗ್ಬಾಸ್ನಲ್ಲಿ ಸಹ ಒಮ್ಮೆ ಇದೇ ವಿಷಯಕ್ಕೆ ಬಹಳ ದೊಡ್ಡ ಜಗಳ ನಡೆದಿತ್ತು. ಬಳೆಗಳ ಬಗ್ಗೆ ಮಾತನಾಡಿದ್ದ ವಿನಯ್ ಗೌಡ, ಎಲಿಮಿನೇಶನ್ ವರೆಗೆ ಹೋಗಿ ಮರಳಿ ಬಂದಿದ್ದರು. ತೀವ್ರ ಟೀಕೆಯನ್ನು ಅವರು ಎದುರಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




