AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss: ಬಿಗ್​ ಬಾಸ್​ ಹೊಸ ಸೀಸನ್​ಗೆ ತಯಾರಿ; ನಿರೂಪಕ ಯಾರು ಎಂಬುದನ್ನು ಅಧಿಕೃತವಾಗಿ ತಿಳಿಸಿದ ವಾಹಿನಿ

ವರ್ಷದಿಂದ ವರ್ಷಕ್ಕೆ ಬಿಗ್​ ಬಾಸ್​ ಶೋನಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ. ಪ್ರತಿ ಬಾರಿ ಈ ಕಾರ್ಯಕ್ರಮ ಆರಂಭ ಆಗುವಾಗ ವೀಕ್ಷಕರಲ್ಲಿ ನಿರೀಕ್ಷೆ ಮನೆಮಾಡುತ್ತದೆ.

Bigg Boss: ಬಿಗ್​ ಬಾಸ್​ ಹೊಸ ಸೀಸನ್​ಗೆ ತಯಾರಿ; ನಿರೂಪಕ ಯಾರು ಎಂಬುದನ್ನು ಅಧಿಕೃತವಾಗಿ ತಿಳಿಸಿದ ವಾಹಿನಿ
ಬಿಗ್​ ಬಾಸ್​
ಮದನ್​ ಕುಮಾರ್​
|

Updated on: Jul 19, 2023 | 4:42 PM

Share

ಬಿಗ್​ ಬಾಸ್​ ಎಂದರೆ ಸಾಕು ಕಿರುತೆರೆ ಪ್ರೇಕ್ಷಕರ ಕಿವಿ ಚುರುಕಾಗುತ್ತದೆ. ಸೆಲೆಬ್ರಿಟಿಗಳ ವಲಯದಲ್ಲೂ ಸಂಚಲನ ಶುರುವಾಗುತ್ತದೆ. ಈ ಬಾರಿ ಬಿಗ್​ ಬಾಸ್​ (Bigg Boss) ಕಾರ್ಯಕ್ರಮಕ್ಕೆ ಯಾರೆಲ್ಲ ಹೋಗುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಯಾರಿಗೆ ಅವಕಾಶ ನೀಡಬೇಕು, ಯಾರಿಗೆ ನೀಡಬಾರದು ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತದೆ. ಅಷ್ಟರಮಟ್ಟಿಗೆ ಕ್ರೇಜ್​ ಸೃಷ್ಟಿ ಮಾಡಿದ ರಿಯಾಲಿಟಿ ಶೋ ಇದು. ಈಗ ತೆಲುಗಿನಲ್ಲಿ ಬಿಗ್​ ಬಾಸ್​ ಹೊಸ ಸೀಸನ್​ಗೆ (Bigg Boss Telugu season 7) ತಯಾರಿ ಜೋರಾಗಿದೆ. ಈ ಬಾರಿ ಯಾರು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರೇ ಈ ಬಾರಿ ಕೂಡ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬಿಗ್​ ಬಾಸ್​ ಹೊಸ ಸೀಸನ್​ ಬಗ್ಗೆ ಮಾಹಿತಿ ತಿಳಿಸಲು ‘ಸ್ಟಾರ್​ ಮಾ’ ವಾಹಿನಿ ಒಂದು ಪ್ರೋಮೋ ರಿಲೀಸ್​ ಮಾಡಿದೆ. ಈ ಇದರಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಇದು 7ನೇ ಸೀಸನ್​. ಈ ಬಾರಿ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ನಾಗಾರ್ಜುನ ಅವರೇ ನಿರೂಪಕನ ಸ್ಥಾನದಲ್ಲಿ ಮುಂದುವರಿದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ನಾಗಾರ್ಜುನ ಬದಲಿಗೆ ಬೇರೆ ಯಾರಾದರೂ ನಿರೂಪಣೆ ಮಾಡಲಿ ಎಂಬುದು ಕೆಲವರ ಬೇಡಿಕೆ ಆಗಿತ್ತು. ಅಂಥವರಿಗೆ ಈಗ ಬೇಸರ ಆಗಿದೆ.

ಬೇರೆ ಬೇರೆ ಮನಸ್ಥಿತಿಯ ಹತ್ತಾರು ಸೆಲೆಬ್ರಿಟಿಗಳು ಒಂದೇ ಮನೆಯಲ್ಲಿ ನೂರು ದಿನಗಳ ಕಾಲ ಜೊತೆಯಾಗಿ ಇರಬೇಕು. ವಿವಿಧ ಟಾಸ್ಟ್​ಗಳನ್ನು ಮಾಡಬೇಕು. ಇದು ಬಿಗ್​ ಬಾಸ್​ ಕಾರ್ಯಕ್ರಮದ ಬೇಸಿಕ್​ ನಿಯಮ. ಆದರೆ ಪ್ರತಿ ವರ್ಷ ಕೂಡ ಹೊಸ ಹೊಸ ಅಂಶಗಳು ಸೇರ್ಪಡೆ ಆಗುತ್ತವೆ. ಮನೆಯ ವಿನ್ಯಾಸ ಕೂಡ ಬದಲಾಗುತ್ತದೆ. ಹಾಗಾಗಿ ಪ್ರತಿ ಬಾರಿ ಬಿಗ್​ ಬಾಸ್​ ಶೋ ಆರಂಭ ಆಗುವಾಗ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ‘ಬಿಗ್​ ಬಾಸ್​ ಶೋನಲ್ಲಿ ಆಗುತ್ತದೆ ಪಕ್ಷಪಾತ’: ನಿರೂಪಕರ ಮೇಲೆ ಗಂಭೀರ ಆರೋಪ ಮಾಡಿದ ಸ್ಪರ್ಧಿ

ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮುಂತಾದ ಭಾಷೆಗಳಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಯಶಸ್ವಿ ಆಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್​ ಅವರು ಮೊದಲಿನಿಂದಲೂ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ‘ಬಿಗ್​ ಬಾಸ್​ ಒಟಿಟಿ’ ವರ್ಷನ್​ ಕೂಡ ಆರಂಭ ಆಯಿತು. ಕನ್ನಡದಲ್ಲಿ ಹೊಸ ಸೀಸನ್​ ಆದಷ್ಟು ಬೇಗ ಶುರುವಾಗಲಿ ಎಂದು ವೀಕ್ಷಕರು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ